ಇವರ ತೋಟದಲ್ಲಿದೆ 150ಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳು. 150 exotic fruit varities - ಹರೀಶ್ 9945966208
Krushi Sampada by Sudha & Sandeep Manjunath Agri
0:00 / 0:00
ಇವರ ತೋಟದಲ್ಲಿದೆ 150ಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳು. 150 exotic fruit varities - ಹರೀಶ್ 9945966208
808 просмотров · 1 год назад
Krushi Sampada by Sudha & Sandeep Manjunath Agri
19 тыс. подписчиков
808 просмотров · 1 год назад
ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ : ನಮ್ಮ ಜಮೀನಿನ ಒಂದು ಭಾಗ ತಗ್ಗು ಪ್ರದೇಶದಲ್ಲಿದ್ದು ಮಳೆಗಾಲದಲ್ಲಿ ಸುತ್ತಮುತ್ತಲಿಂದಲೂ ಸಹ ಸಾಕಷ್ಟು ನೀರು ಇದರ ಮೂಲಕ ಹರಿದು ಹೋಗಿ ಮಣ್ಣಿನ ಸವಕಳಿ ಆಗುತ್ತಿತ್ತು. ಮಳೆ ನೀರು ಅಂತರ್ಜಲ ಸೇರಬೇಕು ಮಣ್ಣಿನ ಸವಕಳಿ ಕಡಿಮೆ ಮಾಡಬೇಕೆಂದು ಅದೇ ಜಾಗದಲ್ಲಿ 55ಮೀ *55ಮೀ ಅಳತೆಯ ಕೃಷಿ ಹೊಂಡ ನಿರ್ಮಿಸಿದೆವು. ವರ್ಷದಲ್ಲಿ 7-8 ತಿಂಗಳು ಹೊಂಡದಲ್ಲಿ ಸಮೃದ್ಧವಾಗಿ ನೀರು ಇರುತ್ತದೆ. ಕಾಟ್ಲಾ ರೋಹೋ ಮತ್ತಿತ್ತರ ಬಗೆಯ ಮೀನುಗಳನ್ನು ಕೃಷಿ ಹೊಂಡದಲ್ಲಿ ಸಾಕುವುದರಿಂದ ಸಾಕಷ್ಟು ಲಾಭವಾಗುತ್ತಿದೆ. ಕೃಷಿ ಹೊಂಡದ ಬದುಗಳ ಮೇಲೆ ಬಾಳೆ, ನೆಲ್ಲಿ, ಮಾವು, ನೇರಳೆ, ಸೀಬೆ, ಕರಿಬೇವು, ನಾಲ್ಕು ಬಗೆಯ ಮೇವಿನ ಹುಲ್ಲುಗಳಿವೆ. ತೇಗ, ಮತ್ತಿ, ಭೀಟೆ, ಬಿಲ್ವಾರ, ತಡಸಲು, ಹೊನ್ನೆ, ನಂದಿ, ಸಿಲ್ವರ್, ಮುತ್ತುಗ, ಕಣಗಲು, ಶಿವನಿ, ಶ್ರೀಗಂಧ ಸೇರಿ ಅನೇಕ ಕಾಡು ಜಾತಿಯ ಮರಗಳನ್ನು ಬೆಳೆಸಿದ್ದೇವೆ. ನೀಲಗಿರಿ ತೈಲ ತೆಗೆಯಲು ಬಳಸುವ ವಿಶೇಷ ಪರಿಮಳ ಇರುವ ಎರಡು ನೀಲಗಿರಿ ಮರಗಳೂ ನನ್ನ ಸಂಗ್ರಹದಲ್ಲಿದೆ. ಎರಡು ನಾಟಿ ಹಸು, ಎಮ್ಮೆ, ಆಡು, ಜೇನು ಪೆಟ್ಟಿಗೆಗಳು ಸೇರಿ ತೋಟದಲ್ಲಿನ ಜೀವವೈವಿದ್ಯತೆ ಹೆಚ್ಚಿಸಿವೆ.
ನಿತ್ಯ ಸೊಪ್ಪು ತರಕಾರಿಗೆ ಕೈತೋಟ: ರೈತರು ಇತತರಂತೆ ಸಂತೆಗೆ ಹೋಗಿ ಸೊಪ್ಪು ತರಕಾರಿ ಕೊಳ್ಳಬಾರದು ಆದಷ್ಟು ಮನೆಗೆ ಬೇಕಾದ ಸೊಪ್ಪು ತರಕಾರಿ ನಾವೆ ಬೆಳೆಯಬೇಕು ಇದೇ ಅಲ್ಲವೇ ಸ್ವಾವಲಂಬನೆ ಎಂದು ಆಲೋಚಿಸಿ ಮನೆಗೆ ಬೇಕಾದ ತರಕಾರಿ ನಾವೇ ಬೆಳೆಯುತ್ತೇವೆ. ಬದನೆ, ಟಮೋಟ, ಬೆಂಡೆ, ಕರಿಬೇವು, ತೊಂಡೆಕಾಯಿ, ಹೀರೆ, ಹಾಗಲ, ದಂಟು ಕೀರೆ ಪಾಲಾಕು ಚಕ್ಕೊತ ಸೊಪ್ಪುಗಳು ನಮ್ಮ ಮನೆಗೆ ಸಾಕಾಗಿ ಸ್ನೇಹಿತರಿಗೂ ನೀಡುತ್ತೇವೆ. ಕಾಕಡ ಮಲ್ಲಿಗೆ ಗುಲಾಬಿ, ಶಂಕಪುಷ್ಪ, ದಾಸವಾಳ ರೀತಿಯ ಗಿಡಗಳಿಂದ ನಿತ್ಯ ಪೂಜೆಗೆ ಸಾಕಷ್ಟು ಹೂವು ಲಭಿಸುತ್ತದೆ. 30 ತೆಂಗಿನ ಮರಗಳಿದ್ದು ಪ್ರತಿ ಮರದ ಕೆಳೆಗೆ ಬಳ್ಳಿ ಆಲೂಗಡ್ಡೆ ಮತ್ತು ಫ್ಯಾಶನ್ ಫ್ರೂಟ್ ಬಳ್ಳಿಗಳಿವೆ. ಇವುಗಳು ಮರಗಳಿಗೆ ಹಬ್ಬಿ ಉತ್ತಮ ಫಸಲು ನೀಡುತ್ತವೆ. ಒಟ್ಟಿನಲ್ಲಿ ಒಂದಿಚೂ ಜಾಗ ವ್ಯರ್ಥವಾಗಿಲ್ಲ.
150 ಕ್ಕೂ ಹೆಚ್ಚು ದೇಶ ವಿದೇಶದ ಹಣ್ಣಿನ ಗಿಡಗಳ ಸಂಗ್ರಹ : ಸಾವಯವ ಕೃಷಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋ ನೋಡಿದೆ. ಅನೇಕರು ತಮ್ಮ ತೋಟಗಳಲ್ಲಿ ದೇಶವಿದೇಶದ ಬಗೆಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿರುವುದು ಗಮನಿಸಿದೆ. ಪೇಟೆಯಿಂದ ಹಣ್ಣುಗಳನ್ನು ಖರೀದಿಸುವ ಬದಲು ನಾವೇ ಬೆಳೆದರೆ ಉತ್ತಮ ಎಂದು ವಿವಿಧ ಹಣ್ಣಿನ ಗಿಡಗಳನ್ನು ಬದುಗಳು ಮತ್ತು ಪ್ರತ್ಯೇಕವಾಗಿ 30 ಗುಂಟೆ ಜಾಗದಲ್ಲಿ ನೆಡಲು ಪ್ರಾರಂಬಿಸಿದೆ. ಸಸಿಗಳ ಅನ್ವೇಷಣೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ಅನೇಕ ನರ್ಸರಿಗಳಿಗೆ ಭೇಟಿಕೊಟ್ಟ ನನಗೆ, ಸ್ಥಳೀಯ ಹಣ್ಣುಗಳಾದ ಮಾವು, ಸೀಬೆ ಯಲ್ಲೇ ಎಷ್ಟೋಂದು ತಳಿಗಳಿವೆ ಎಂದು ತಿಳಿದು ಆಶ್ಚರ್ಯವಾಯಿತು. ಜಪಾನಿನ ಮಿಯಾಜಾಕಿ ಮಾವು, ಕಪ್ಪು ಬಣ್ಣದ ಮಾವು, ಕಾಯಿ ಕೂಡ ಸಿಹಿಯಾಗಿರುವ ಮಾವು, ರಸಪೂರಿ, ಬಾದಾಮಿ ಮಾವು, ತೈವಾನ್ ಪಿಂಕ್ ಮತ್ತು ತೈವಾನ್ ಬಿಳಿ ಸೀಬೆ,ಚೈನಾ ಸೀಬೆ, ಕಪ್ಪು ಸೀಬೆ, ಬಾಳೆ ಹಣ್ಣು ರೀತಿ ಹಣ್ಣು ಕೊಡುವ ಸಪೋಟ, ಬಿಳಿ ನೇರಳೆ, ಮಟಾವೋ, ಸೇಬು, ಆಪಲ್ ಬೋರೆ, ರಾಮ್ ಬುಟಾನ್, ಪಾಕಿಸ್ಥಾನ್ ಮಲ್ಬೆರಿ, ನಕ್ಷತ್ರ ನೇರಳೆ, ಪನ್ನೇರಳೆ, ಮಿಲ್ಕ್ ಫ್ರೂಟ್, ಎಗ್ ಫ್ರೂಟ್, ರಾಮ, ಲಕ್ಷ್ಮಣ, ಹನುಮ ಫಲಗಳು, ಅಂಜೂರ, ದ್ರಾಕ್ಷಿ, ಮೂಸಂಬಿ, ಕಿತ್ತಳೆ, ಬೆಣ್ಣೆ ಹಣ್ಣು, ಮಿರಾಕಲ್ ಹಣ್ಣು, ಜಬೋಟಿಕಾಬ, ಬೆಟ್ಟದ ನೆಲ್ಲಿ, ಕಿರು ನೆಲ್ಲಿ, ಹಲವು ಬೆಗಯ ಚೆರ್ರಿಗಳು, ನಾಲ್ಕು ಬಣ್ಣಗಳ ವಾಟರ್ ಆಪಲ್, ಚಂದ್ರ ಹಲಸು, ಸಿದ್ದು, ತೈವಾನ್, ರುದ್ರಾಕ್ಷಿ ಸೇರಿ ಹತ್ತು ಬಗೆಯ ಹಲಸು, ಏಲಕ್ಕಿ ಬಾಳೆ, ಮರಬಾಳೆ, ಮದರಂಗಿ, ನೇಂದ್ರ, ಪಚ್ಚಬಾಳೆ, ಕಲ್ಲು ಬಾಳೆ, ಕರಿಬಾಳೆ, ರಸಬಾಳೆ ಸೇರಿ 17 ಬಗೆಯ ಬಾಳೆ ತಳಿಗಳು, ಗಜ ನಿಂಬೆ, ಬೀಜರಹಿತ ನಿಂಬೆ, ಮಲಯನ್ ಆಪಲ್ ಹೀಗೆ 150 ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡ ಬೆಳೆಸಿದ್ದೇವೆ.