ಈ ಪರಿಯ ಸೊಬಗಾವ ದೇವರಲಿ | Ee pariya sobagaava devarali
Akhil G S
0:00 / 0:00
ಈ ಪರಿಯ ಸೊಬಗಾವ ದೇವರಲಿ | Ee pariya sobagaava devarali
718 просмотров · 6 л. назад
Akhil G S
1,33 тыс. подписчиков
718 просмотров · 6 л. назад
ಈ ಪರಿಯ ಸೊಬಗಾವ ದೇವರಲಿ ದೇವರಲಿ ನಾ ಕಾಣೆ
ಗೋಪೀಜನಪ್ರಿಯ ಗೋಪಾಲಗಲ್ಲದೆ ||
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೆ ಶ್ರೀಕಾಂತನು |
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿಗುರುವು| |
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಲಿ ನೋಡೆ ದಿವಿಜರೊಡೆಯ |
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವ ಧೈರ್ಯದಿ ನೋಡೆ ಅಸುರಾಂತಕನು ||
ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗತೀಧರ ಶೇಷ ಪರ್ಯಂಕಶಯನ |
ನಿಗಮಗೋಚರ ನಮ್ಮ ಪುರಂದರವಿಠ್ಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ ||
ಪುರಂದರದಾಸರ ಕೀರ್ತನೆ
Sung at: Ramakrishna Math, Basavanagudi, Bengaluru on 21st July 2020