Перейти к содержимому

School Tour ❤️👌|| Government School || Karnataka || Bilingual School

DC Uma Teacher

0:00 / 0:00

School Tour ❤️👌|| Government School || Karnataka || Bilingual School

35 394 просмотра · 2 мес. назад
DC Uma Teacher
228 тыс. подписчиков
35 394 просмотра · 2 мес. назад
YouTube Description (School Tour Video) – ಕನ್ನಡ ಭಾಗಶಃ ಶಿಥಿಲವಾಗಿದ್ದು ಬೀಳುವ ಸ್ಥಿತಿಯಲ್ಲಿದ್ದ ನಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಂಪತಿಮ್ಮನಹಳ್ಳಿಯ ಅಭಿವೃದ್ಧಿಯ ಪಯಣವು ಸುಮಾರು 3 ವರ್ಷಗಳ ಸತತ ಪ್ರಯತ್ನದ ಫಲವಾಗಿದೆ. ಕನ್ನಮಂಗಲ ಗ್ರಾಮ ಪಂಚಾಯಿತಿಯ ಅಮೂಲ್ಯ ಸಹಕಾರದೊಂದಿಗೆ ಈ ಕನಸು ನನಸಾಯಿತು. ದಾನಿಗಳಾದ ಶ್ರೀ ರೊನಾಲ್ಡ್ ಕೊಲೆಸೋರವರು (NRI) ಹಾಗೂ ಅವರ ಕುಟುಂಬದ ಉದಾರ ಸಹಾಯ ಮತ್ತು SLK ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್, ಪೂಜನಹಳ್ಳಿ ಸಂಸ್ಥೆಯ CSR ಸಹಕಾರದಿಂದ ಆಧುನಿಕ ಹೈಟೆಕ್ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಮುಖ್ಯ ಶಿಕ್ಷಕಿಯಾಗಿ ಯೋಜನೆ ರೂಪಿಸುವುದು, ದಾನಿಗಳೊಂದಿಗೆ ಸಮನ್ವಯ ಸಾಧಿಸುವುದು, ಕಾಮಗಾರಿಯ ಮೇಲ್ವಿಚಾರಣೆ ಹಾಗೂ ಗುಣಮಟ್ಟದ ಅನುಷ್ಠಾನವನ್ನು ಖಚಿತಪಡಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ಇಂದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಕೊಠಡಿ, ಆಡಿಟೋರಿಯಂ, ಡೈನಿಂಗ್ ಹಾಲ್, dump ಲಿಫ್ಟ್ ಹೊಂದಿದ ಅಡುಗೆಮನೆ, ಮಕ್ಕಳ ಆಟದ ಮೈದಾನ, ಹೈಟೆಕ್ ಶೌಚಾಲಯಗಳು, CCTV Surveillance, ಆಕರ್ಷಕ ಲೈಟಿಂಗ್ ವ್ಯವಸ್ಥೆ, ಸಂಪೂರ್ಣ ಶಾಲೆಗೆ ಮೈಕ್ ತಂತ್ರಜ್ಞಾನ ಹಾಗೂ ಸುಂದರ ಉದ್ಯಾನವನ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ. ಶಾಲೆಯ ಸ್ವಚ್ಛತೆ ಮತ್ತು ಸುಂದರ ವಾತಾವರಣವನ್ನು ಕಾಪಾಡಲು ಹೌಸ್‌ಕೀಪಿಂಗ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಬ್ಯಾಗ್‌ಗಳು, ಟ್ರ್ಯಾಕ್‌ಸೂಟ್‌, ಶೂ-ಸಾಕ್ಸ್‌, ಸ್ಟೇಷನರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲಾ ದಾಖಲಾತಿ ಹೆಚ್ಚಿಸಿ, ಈ ಸೌಲಭ್ಯಗಳ ಗರಿಷ್ಠ ಪ್ರಮಾಣದಲ್ಲಿ ಪ್ರಯೋಜನವಾಗುವಂತೆ ಮಾಡಲು ಪಣ ತೊಡುತ್ತಾ…. ಸರ್ಕಾರಿ ಶಾಲೆಗಳೂ ಸಮುದಾಯದ ಸಹಕಾರ ಮತ್ತು ದೃಢ ಸಂಕಲ್ಪದಿಂದ ಮಾದರಿ ಶಾಲೆಗಳಾಗಬಹುದು ಎಂಬುದಕ್ಕೆ ನಮ್ಮ ಶಾಲೆಯೇ ಉತ್ತಮ ಉದಾಹರಣೆಯಾಗಿದೆ. ನಮ್ಮ ಶಾಲೆಯ ಈ ಪರಿವರ್ತನೆಯ ಪಯಣವನ್ನು ಈ School Tour ವಿಡಿಯೋದಲ್ಲಿ ವೀಕ್ಷಿಸಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. YouTube Description (School Tour Video) – English Our Government Lower Primary School, Kempathimmanahalli, was once partially dilapidated and on the verge of collapse. Its remarkable transformation is the result of three years of continuous effort, dedication, and perseverance. This dream became a reality with the invaluable support of the Kannamangala Gram Panchayat. We sincerely thank Mr. Ronald Kolesor (NRI) and his family for their generous contribution, as well as SLK Software Private Limited, Poojanahalli, for their CSR support in constructing our modern hi-tech school campus. As the Headmistress, I was responsible for planning the project, coordinating with donors and stakeholders, supervising the construction process, and ensuring the successful execution and quality of every stage of the school’s development. Today, our school offers state-of-the-art facilities, including Smart Classrooms, a Computer Lab, Science Lab, Sports Room, Auditorium, Dining Hall, Kitchen with a Dumbwaiter Lift, Children’s Play Area, Hi-Tech Washrooms, CCTV Surveillance, Attractive Lighting System, a Campus-Wide Public Address (Microphone) System, and a Beautiful Garden. To maintain a clean, safe, and pleasant learning environment, housekeeping staff have been appointed to ensure the cleanliness and upkeep of the school campus. With the generous support of our donors, students receive essential educational materials free of cost, including books, school bags, tracksuits, shoes, socks, stationery, and other necessary learning resources. In the coming years, we are committed to increasing student enrolment so that more children can benefit from these excellent facilities and quality educational opportunities. Our school stands as a shining example that government schools can become model institutions through community participation, dedicated leadership, and the generous support of donors and CSR partners. We invite you to watch this School Tour and witness the incredible transformation of our school. If you enjoyed the video, please Like, Share, Subscribe, and share your valuable feedback in the comments. Thank you for your support!