ಭಕ್ತಿಗೀತೆ -- ಮುರಳಿ ಮನೋಹರ ಗಿರಿಧರ ರಾಧಾ ಮಾಧವ ಶಾಮ ಸುಂದರ//
ಸಿರಿ ಕ್ರಿಯೇಷನ್ಸ್ - siri creations
0:00 / 0:00
ಭಕ್ತಿಗೀತೆ -- ಮುರಳಿ ಮನೋಹರ ಗಿರಿಧರ ರಾಧಾ ಮಾಧವ ಶಾಮ ಸುಂದರ//
163 просмотра · 1 мес. назад
ಸಿರಿ ಕ್ರಿಯೇಷನ್ಸ್ - siri creations
568 подписчиков
163 просмотра · 1 мес. назад
-- ಮುರಳಿ --
ಮುರಳಿ ಮನೋಹರ ಗಿರಿಧರ/
ರಾಧಾ ಮಾಧವ ಶಾಮ ಸುಂದರ//
ಯಮುನಾ ತೀರದಿ ಕೊಳಲನ್ನೂದಿ
ಗೋಪಿಕೆಯರನು ಸರಸದಿ ಕಾಡಿ/
ರಾಸಲೀಲೆಯಿಂ ಮೋಡಿ ಮಾಡುತ
ರಾಧೆಯ ಹೃದಯದಿ ಒಲವು ಬೇಡಿದ//
ಕರ್ಣನ ಮೆಚ್ಚಿದ ಸಂಕರ್ಷಣ
ಪಾರ್ಥನ ಸಖನಿವ ಪ್ರದ್ಯುಮ್ನ/
ಕೃಷ್ಣೆಯ ಸಹೋದರ ಶ್ರೀಕೃಷ್ಣ
ಮೀರಳ ದೈವ ಮಧುಸೂದನ//
ಲೋಕಕೆ ಪ್ರೀತಿಯ ಮಹಿಮೆ ತಿಳಿಸಿ
ಪ್ರೀತಿಯ ಜ್ಯೋತಿ ಜಗದಲಿ ಉರಿಸಿ/
ಪ್ರೇಮದ ಬೆಳಕನು ಎಲ್ಲೆಡೆ ಚೆಲ್ಲಿದ
ಶ್ರೀಲಕ್ಷ್ಮೀ ಪ್ರಿಯ ನಾರಾಯಣಾ//
ಸಾ. ನಾ. ಶ್ರೀಲಕ್ಷ್ಮಿ.