(ಚೇತನ)1 ವಿಭಾಗ ಪ್ರವೇಶ ಗೀತೆಗಳು ಭಾಗ 3{21 ರಿಂದ 30} (Chetana) Section 1 Entrance Songs Part 3 {21 to 30}
Krista Rajara Divya Vani
0:00 / 0:00
(ಚೇತನ)1 ವಿಭಾಗ ಪ್ರವೇಶ ಗೀತೆಗಳು ಭಾಗ 3{21 ರಿಂದ 30} (Chetana) Section 1 Entrance Songs Part 3 {21 to 30}
284 просмотра · 1 месяц назад
Krista Rajara Divya Vani
20,4 тыс. подписчиков
284 просмотра · 1 месяц назад
Kristarajaradivyavani
AB creation
Pressent
(ಚೇತನ)
1 ವಿಭಾಗ
ಪ್ರವೇಶ ಗೀತೆಗಳು ಭಾಗ 3
{21 ರಿಂದ 30}
(Chetana)
Section 1
Entrance Songs Part 3
{21 to 30}
ಹಾಡುಗಳ ಸಾಹಿತ್ಯ
(21)
ಹರುಷದಿಂದ ಕರ್ತರನ್ನು ಹಾಡಬನ್ನಿರಿ ಹರುಷವೀವ ಯೇಸುವನ್ನು ಕೂಡಿ ವಂದಿಸಿ
೧. ಪರಮ ದೇವ ಏಕದೇವ ನಮ್ಮ ಕರ್ತರು ಕರುಣೆ ತೋರಿ ಭಕ್ತಕಾವ ಶಕ್ತ ದೇವರು
೨. ಸಕಲ ಸೃಷ್ಟಿ ಬಾಗಿನಿಂದು ನಿಮ್ಮ ನಾಮವ ಅಖಿಲ ಲೋಕ ಭಕ್ತಿಯಿಂದ ಹಾಡಿ ಸಾರ್ವುದು
೩. ಪರದ ದೂತ ವೃಂದವೆಲ್ಲ ನಿಮ್ಮ ರಾಜ್ಯದಿ ನೆರೆದು ಗೀತೆಯನ್ನು ಹಾಡಿ ನಲಿಯುತಿರ್ಪವು
೪. ನರರು ನಾವು ಕರ್ತರನ್ನು ಕೂಡಿ ವಂದಿಸಲು ವರದ ಹಸ್ತ ಎಮ್ಮ ಮೇಲೆ ನಿತ್ಯ ಬೀರ್ವರು
(22)
ನಿರ್ಮಿಸಿ ನಿರ್ಮಲ ಹೃದಯವನು ಸೆಳೆಯುತ ಸನಿಹಕ್ಕೆ ಪಾಪಿಯನು
೧. ಪಾಪದ ಬಾಧೆಯಿಂ ಬೆಂದಿಹೆ ಸ್ವಾಮೀ ॥ ಪಾಪವ ತ್ಯಜಿಸುವೆ ಬೇಡುವೆ ಕ್ಷಮೆಯ
೨. ಒಪ್ಪುವೆ ತಪ್ಪನು ನೀತಿಯ ಅಪ್ಪುವೆ ॥ ನಂಬುವೆ ನೀಡಿರಿ ನಿಮ್ಮಯ ಮನ್ನಣೆ
೩. ಭಕ್ತನಿಗಿರಲು ನಿಮ್ಮಯ ಆಸರೆ || ನಾಶದ ನೆರೆಯ ಭಯವೆನಗೇಕೆ
೪. ರಕ್ಷೆಯ ಕವಚವು ನೀವಿರೆ ಸ್ವಾಮೀ ॥ ನಿಮ್ಮನ್ನೇ ಬೇಡುವೆ ಮೊರೆಯನು ಕೇಳಿ
(23)
ಆರಂಭವಾಗುತ್ತಿದೆ ನಿತ್ಯ ಆರಾಧನೆಯ ಪರಮ ಬಲಿ ತಾರಕ ಯೇಸುವಿನ ಮಹಾಪ್ರೇರಕ ಪ್ರೇಮದ ಪೂಜ್ಯ ಬಲಿ
೧. ಪರಮನ ನಿಯತ ಕಾಲವಿದು ರಮ್ಯತೆ ತುಂಬಿದ ವೇಳೆಯಿದು ಸೌಮ್ಯತೆ ನೆಲಸಿ ಕರ್ತನ ನೆನಸಿ ಆರಾಧಿಸುವ ಸಮಯವಿದು
೨. ಆರತಿ ಬೆಳಗಿಸಿ ಸ್ತುತಿಸೋಣ ಸಾರಸ ಚರಣಕೆ ಮಣಿಯೋಣ ಪುಷ್ಪ ಪಕಳೆಗಳ ಪರಿಮಳ ಹರವಿ ಪೂಜನಕೆ ಅಣಿಯಾಗೋಣ
(24)
ದಯಾಳು ದೇವಾ ದಯೆಯ ತೋರೋ ದೈನ್ಯದಿ ಬೇಡುವೆ ದಯಾಳು ನಿನ್ನ
೧. ಪಾಪದಿ ತುಂಬಿ ನಾ ಪಾಮರನಾದೆ ॥ ದಾರಿಯ ತಪ್ಪಿ ನಾ ದುರುಳನಾದೆ ಪಾಪವ ಮನ್ನಿಸೋ ದಾರಿಯ ತೋರಿಸೋ ॥ ಪಾವನನಾಗಲು ವರವ ಕರುಣಿಸೋ
೨.
ಧರ್ಮವ ಬಿಟ್ಟು ನಾ ದುರ್ಮನನಾದೆ ॥ ಪಾಪಕೆ ಸಿಕ್ಕಿ ನಾ ದಾಸನಾದೆ ಧರ್ಮವ ಬೋಧಿಸೋ ಪಾಪವ ಮನ್ನಿಸೋ ದಾಸನ ಎನ್ನನು ದಾಸ್ಯದಿ ನೀಗಿಸೋ
೩.
ಮುಕ್ತಿಯನಾಶಿಪ ಮಾನವ ನಾನು ||
ಮುಕ್ತಿಪ್ರದಾಯಕ ಮಹಿಮನು ನೀನು
ಮನ್ನಿಸಿ ಎನ್ನನು ಮಾನವ ನನ್ನನು |
ಮುಕ್ತಿಯ ಪಡೆಯಲು ಶಕ್ತಿಯ ಕರುಣಿಸೋ
(25)
ಕ್ಷಮಿಸೋ ತಂದೆ ಪಾಪಿ ನಾನು ಬಳಿಯಲಿರುವೆ ಕಂದ ನಾನು
೧.
ನಿನ್ನ ತ್ಯಜಿಸಿ ನಾನು ಹೊರಟೆ ನಂಬಿ ನಡೆದೆ ಕತ್ತಲನ್ನೇ ಜ್ಯೋತಿಯನ್ನೇ ತೊರೆದು ಹೋದೆ
೨.
ನಿನ್ನ ಮಧುರವಾಣಿ ಕೇಳಿ ದೂರ ಸರಿದೆ ಲೋಕ ನೆಚ್ಚಿ । ಭೀತ ನಾನು ಶೂನ್ಯದಲ್ಲಿ
೩.
ನಿನ್ನ ಪ್ರೇಮ ಇಂದು ಅರಿತೆ ಬಂದೆ ಬಳಿಗೆ ಕೊಳ್ಳು ತಂದೆ ಜೀವವನ್ನೇ ಅಮರ ತಂದೆ
(26)
ಕರ್ತ ನಿನ್ನ ನಾಮವನ್ನು ಭಜಿಸಿ ಹಾಡುವೆ ನಿನ್ನ ಸತ್ಯ ಪ್ರೀತಿಯನ್ನು ಎಂದೂ ಹಾಡುವೆ
೧. ಕಿನ್ನರಿ ವೀಣೆಯನ್ನು ನುಡಿಸಿ ದಿನವೂ ಹಾಡುವೆ ದೀನ ದಾಸರನ್ನು ಕಂಡು ಅಭಯ ನೀಡದೆ ಸನಿಹಕೆಮ್ಮ ನೀವು ಬರದೆ ಕೈ ಬಿಡುವಿರೇ
೨.
ನಿನ್ನ ಶಕ್ತ ಕಾರಗಳನು ಎಮಗೆ ತೋರಿಹೆ ನಾವು ಗ್ರಹಿಸಲಾರದಂಥ ವರವ ಸುರಿಸಿಹೆ ಮಹಿಮಾವಂತ ದೇವಾ ನಿನಗೆ ನಾ ಮಣಿಯುವೆ
೩. ಸೋತುಹೋದ ಎಮ್ಮ ಕಂಡು ಧೈರ್ಯ ತುಂಬಿಹೆ ಶತ್ರುಗಳನು ಜಯಿಸಿ ರಕ್ಷೆ ಎಮಗೆ ನೀಡಿಹೆ ಹೃದಯದಾಳದಿಂದ ನಮಿಪೆ ಹೇ ಪರಮನೆ
(27)
ಮಣಿವ ನಿನ್ನ ಜನರ ಮನವಿ ಆಲಿಸು ದೇವಾ ದಣಿದ ನಿನ್ನ ಜನರ ತನುಮನ ತಣಿಸು ದೇವಾ
೧.ಕರ್ತ ನಿನ್ನ ನುತಿಗಳ ಪಾಡಿ । ಸ್ತುತಿ ಸ್ತೋತ್ರವ ಸಲ್ಲಿಸ ಕೂಡಿ ನೆರೆದಿಹೆವಿಲ್ಲಿ ನಾವೆಲ್ಲಾ || ಕರುಣೆಯ ತೋರಿ ನಮಗೆಲ್ಲ
೨. ನಿನ್ನ ಆದರ ಪ್ರೀತಿ ವಾತ್ಸಲ್ಯ | ನಿನ್ನ ಕುವರನ ಶಿಲುಬೆಯ ಬಲಿಯ
೩. ಧ್ಯಾನಿಸಿ ಪುನರಾವರ್ತಿಸಲು ॥ ಅನುಗ್ರಹಿಸೆಮಗೆ ಭಕ್ತಿಯನು
(28)
ಭಕ್ತಿ ಭಾವದಿಂದ ದೇವಾ ನಿನ್ನ ಭಜಿಸುವೆ ಮುಕ್ತಿ ಪಥದ ಜ್ಞಾನ ನೀಡಿ ದಾರಿ ತೋರಿಸೋ
೧. ಜಪವನರಿಯೆ ತಪವನರಿಯೆ ಅರಿಯೆ ಪೂಜೆಯ ಹೃದಯ ಕಮಲ ತಂದಿರುವೆ ಅರ್ಪಿಸುವೆನು ನಾ ಬಡವ ನಾನು ಒಡೆಯ ನೀನು ಕಾಪಾಡಯ್ಯ
೨. ಲಲಿತ ಕಲೆಗಳಿಂದ ನಮ್ಮ ಮನವ ಬೆಳಗಿಸೋ ಜ್ಞಾನ ನಿಧಿಯ ಚರಣದಲ್ಲಿ ಶಿರವ ಬಾಗಿಹೆ ಎಲ್ಲಿ ನೋಡೆ ಅಲ್ಲಿ ನಿನ್ನ ಬೆಳಕ ಕಾಣುವೆ
೩. ತೋರಿಸೆಮಗೆ ಭಕ್ತಿಮಾರ್ಗ ನಿನ್ನ ಭಜಿಸಲು ನಿನ್ನ ಕೀರ್ತಿ ಹಾಡ ನಿತ್ಯ ವರವ ನೀಡೋ ನೀ ನಿತ್ಯ ನಿನ್ನ ಬಳಿಯಲಿರಲು ವರವ ನೀಡೋ ನೀ
(29)
ಪ್ರಭು ದೇವಾ ಕ್ಷಮೆ ಬೇಡ್ಡೆ ನೀಡೆನಗೆ ಪಾಪಕ್ಷಮೆ
೧. ಶತ್ರುಗಳು ಮೂದಲಿಸಿ ಹಿಂಸಿಸಲು ಎಲ್ಲಿಹೆ ನೀ ಮೈದೋರು ದಯೆ ತೋರು ಭಕ್ತನನು ಕಾಪಾಡು
೨. ಕೋಪಿಸಲು ಬೆದರಿಹನು ಮೈದಡವು ಆದರಿಸು ಅಂಜಿಕೆಯಿಂ ಸೊರಗಿಹನು ಅಭಯ ನಂಬಿ ಏಳುವೆನು
೩. ಉನ್ನತಿಗೆ ಏರಿಸಿದೆ ಅಮರತೆಗೆ ಸೃಷ್ಟಿಸಿಹೆ ನೀನಿಂದು ಅಗಲಿದರೆ ಮೃತ್ಯುವನ್ನೇ ನಾನಪ್ಪುವೆ
(30)
ಜೈ ಜೈ ಜೈ ಪರಮೇಶ್ವರ ಕರುಣೆಯ ತೋರಿ ಎಮ್ಮನು ಹರಸೋ ಹೇ ಜಗದೀಶ್ವರಾ
೧. ಜೀವನಾಥಾ ವಿಶ್ವಕರ್ತ ಕರುಣಾ ಮೂರ್ತಿ | ಎಮ್ಮನು ಹರಸೋ ದೇವಾ
೨. ಪಾವನ ಮೂರ್ತಿ ಸರ್ವರ ಕೀರ್ತಿ | ಬಾಳಿನ ಜ್ಯೋತಿ ದಾರಿಯ ತೋರೋ
೩. ಸರ್ವರ ಪಾಲ ಸದ್ಗುಣ ಶೀಲ || ಮುಕ್ತಿಯ ದಾತ ವರಗಳನ್ನಿಯೋ
⚠️ ಹಕ್ಕುಸ್ವಾಮ್ಯ ಎಚ್ಚರಿಕೆ ⚠️
© AB creation . ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ಈ ವೀಡಿಯೊ AB creation ವಿಶೇಷ ಆಸ್ತಿಯಾಗಿದೆ.
ಈ ವೀಡಿಯೊವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಅನಧಿಕೃತವಾಗಿ ನಕಲಿಸುವುದು, ಡೌನ್‌ಲೋಡ್ ಮಾಡುವುದು, ರೆಕಾರ್ಡಿಂಗ್ ಮಾಡುವುದು, ಸಂಪಾದಿಸುವುದು, ಮರು-ಅಪ್‌ಲೋಡ್ ಮಾಡುವುದು, ಪ್ರಸಾರ ಮಾಡುವುದು, ಸಾರ್ವಜನಿಕ ಪ್ರದರ್ಶನ ಅಥವಾ ಮರುಹಂಚಿಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಯಾವುದೇ ಅನಧಿಕೃತ ಬಳಕೆಯು ಹಕ್ಕುಸ್ವಾಮ್ಯ ಹಕ್ಕುಗಳು, ವಿಷಯ ತೆಗೆದುಹಾಕುವಿಕೆ ಮತ್ತು ಅನ್ವಯವಾಗುವ ಹಕ್ಕುಸ್ವಾಮ್ಯ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮಕ್ಕೆ ಕಾರಣವಾಗಬಹುದು.
© AB creation - ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
⚠️ COPYRIGHT WARNING ⚠️
© AB Creation. All Rights Reserved.
This video is the exclusive property of AB Creation.
Unauthorized copying, downloading, recording, editing, re-uploading, broadcasting, public exhibition, or redistribution of this video, in whole or in part, is strictly prohibited.
Any unauthorized use may result in copyright claims, content removal, and legal action under applicable copyright laws.
© AB Creation – All Rights Reserved.
#jesus songs
#jesus kannada songs
#christan songs
#christan kannada songs
#christan super hit songs
#christan hit songs
#kannada christan songs
#kannada hit songs
#kannada christan super hit songs
#kannada christan super Melody songs
#kannada jesus songs