Перейти к содержимому

ಒಂದು ಕ್ವಿಂಟಲ್‌ ಮೆಣಸಿನಕಾಯಿಗೆ 70,199 ರೂ. ಅಂತೆ..! ಅಬ್ಬಾ! | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ಒಂದು ಕ್ವಿಂಟಲ್‌ ಮೆಣಸಿನಕಾಯಿಗೆ 70,199 ರೂ. ಅಂತೆ..! ಅಬ್ಬಾ! | Vijay Karnataka

107 329 просмотров · 3 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
107 329 просмотров · 3 года назад
ಒಂದು ಕಡೆ ಜಮೀನಿನ ತುಂಬ ಕೆಂಪು ಸುಂದರಿಯ ಶೃಂಗಾರ.. ಮತ್ತೊಂದು ಕಡೆ ಭರ್ಜರಿಯಾಗಿ ಬೆಳೆದು ನಿಂತಿರುವ ಮೆಣಸಿನಕಾಯಿ.. ಇನ್ನೊಂದು ಕಡೆ ಮೆಣಸಿನಕಾಯಿ ಗಿಡಗಳ ನಡುವೆ ಕುಳಿತಿರುವ ರೈತ.. ಈ ದೃಶ್ಯಗಳು ಕಂಡುಬಂದಿದ್ದು ಗದಗ ತಾಲೂಕಿನ ಕೋಟಮಚಗಿ ಗ್ರಾಮದಲ್ಲಿ.. ತಮ್ಮ 4 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು ಸಕ್ಸಸ್‌ ಆಗಿದ್ದಾರೆ. ಒಂದು ಕ್ವಿಂಟಾಲ್‌ ಮೆಣಸಿಕಾಯಿಯನ್ನು ಬರೋಬ್ಬರಿ 70,199 ರೂ.ಗೆ ಮಾರಾಟ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಕೋಟಮಚಗಿ ಗ್ರಾಮದ ರೈತ ಶರಣಪ್ಪ ಜಗ್ಗಲ್‌ ಅವರು ವೃತ್ತಿಯಲ್ಲಿ ರಂಗಭೂಮಿ ಕಲಾವಿದರು. ಕೊರೊನಾದಿಂದ ಡ್ರಾಮಾಗಳು ನಿಂತು ಬಳಿಕ ಕೃಷಿಯಲ್ಲಿಯೇ ಜೀವನವನ್ನು ಶರಣಪ್ಪ ಅವರು ಕಂಡುಕೊಂಡಿದ್ದಾರೆ. ಈಗ ಕಲೆ ಕೈಕೊಟ್ಟರೂ ಭೂಮಿ ತಾಯಿ ಅವರ ಕೈ ಹಿಡಿದಿದ್ದಾಳೆ. ಕೃಷಿ ಜೀವನ ಆರಂಭಿಸಿದ್ದ ಶರಣಪ್ಪ ಅವರು ಮೆಣಸಿನಕಾಯಿ ಬೆಳೆದು ಇಡೀ ರೈತ ಕುಲಕ್ಕೆ ಮಾದರಿಯಾಗಿದ್ದಾರೆ. #gadag #chilli #farming Our Website: https://Vijaykarnataka.com Facebook:   / vijaykarnataka   Twitter:   / vijaykarnataka