DFSICON 2026, 23ನೇ ವಾರ್ಷಿಕ ಸಮ್ಮೇಳನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಂದ ಬೆಂಗಳೂರಿನಲ್ಲಿ ಉದ್ಘಾಟನೆ
PRACHAR News
0:00 / 0:00
DFSICON 2026, 23ನೇ ವಾರ್ಷಿಕ ಸಮ್ಮೇಳನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಂದ ಬೆಂಗಳೂರಿನಲ್ಲಿ ಉದ್ಘಾಟನೆ
40 просмотров · 10 дней назад
PRACHAR News
98 подписчиков
40 просмотров · 10 дней назад
#DFSICON2026 #DiabeticFoot #DiabeticFootCare #LimbPreservation #DiabetesCare #DiabetesAwareness #FootHealth #DiabeticFootAwareness #GlobalHealth #Healthcare #MedicalConference #DFSI #Bengaluru #Karnataka #HealthMinister #UTKhader #PatientCare #Rehabilitation #AmputationPrevention #healthcareinnovation
News Highlights
DFSICON 2026 23ನೇ ವಾರ್ಷಿಕ ಸಮ್ಮೇಳನ ಬೆಂಗಳೂರಿನಲ್ಲಿ ಆಯೋಜನೆ
ನಾಲ್ಕು ಖಂಡಗಳ 8 ಜಾಗತಿಕ ಸಂಸ್ಥೆಗಳಿಂದ ಜಂಟಿ ಘೋಷಣೆಗೆ ಸಹಿ
Diabetic Foot Survival & Limb Preservationಗೆ ಜಾಗತಿಕ ಆದ್ಯತೆಗೆ ಕರೆ
Global Alliance for Diabetic Foot Survival & Limb Preservation ರಚನೆಗೆ ಚಾಲನೆ
ಡಯಾಬಿಟಿಕ್ ಫುಟ್ನ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಸಮಯೋಚಿತ ಚಿಕಿತ್ಸೆಗೆ ಒತ್ತು
ಅಂಗಚ್ಛೇದನ, ಅಂಗವೈಕಲ್ಯ ತಡೆಗೆ ಬಹುಶಿಸ್ತೀಯ ಆರೈಕೆ ಮತ್ತು ಪುನರ್ವಸತಿಗೆ ಆದ್ಯತೆ
ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಂದ DFSICON 2026 ಉದ್ಘಾಟನೆ
ಬೆಂಗಳೂರು: ಡಯಾಬಿಟಿಕ್ ಫುಟ್ ಸಮಸ್ಯೆಯನ್ನು ಜಾಗತಿಕ ಆರೋಗ್ಯ ಆದ್ಯತೆಯನ್ನಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಹತ್ವದ ಜಾಗತಿಕ ಹೆಜ್ಜೆ ಇಡಲಾಗಿದೆ. ಡಯಾಬಿಟಿಕ್ ಫುಟ್ ಸೊಸೈಟಿ ಆಫ್ ಇಂಡಿಯಾ (DFSI) ಆಯೋಜಿಸಿದ್ದ DFSICON 2026ರ 23ನೇ ವಾರ್ಷಿಕ ಸಮ್ಮೇಳನದಲ್ಲಿ ನಾಲ್ಕು ಖಂಡಗಳ ಎಂಟು ಪ್ರಮುಖ ಜಾಗತಿಕ ಸಂಸ್ಥೆಗಳು ‘ಡಯಾಬಿಟಿಕ್ ಫುಟ್ ಸರ್ವೈವಲ್ ಮತ್ತು ಲಿಂಬ್ ಪ್ರಿಸರ್ವೇಶನ್’ ಕುರಿತು ಜಂಟಿ ಘೋಷಣೆಗೆ ಸಹಿ ಹಾಕಿದವು.
ಡಯಾಬಿಟಿಕ್ ಫುಟ್ ತಡೆಗಟ್ಟುವಿಕೆ, ಆರಂಭಿಕ ಪತ್ತೆ, ಸಮಯೋಚಿತ ಚಿಕಿತ್ಸೆ, ಬಹುಶಿಸ್ತೀಯ ಆರೈಕೆ, ಅಂಗ ಸಂರಕ್ಷಣೆ ಮತ್ತು ಪುನರ್ವಸತಿಗೆ ಒತ್ತು ನೀಡುವ ಉದ್ದೇಶದಿಂದ Global Alliance for Diabetic Foot Survival and Limb Preservation ರಚಿಸುವ ಉದ್ದೇಶವನ್ನೂ ಪ್ರಕಟಿಸಲಾಯಿತು.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಡಯಾಬಿಟಿಕ್ ಫುಟ್ನಿಂದ ಉಂಟಾಗುವ ಅಂಗಚ್ಛೇದನ, ಅಂಗವೈಕಲ್ಯ ಮತ್ತು ಅಕಾಲಿಕ ಮರಣವನ್ನು ತಡೆಗಟ್ಟಲು ಸರ್ಕಾರಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO) ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಾಗತಿಕ ಸಂಸ್ಥೆಗಳು ಕರೆ ನೀಡಿವೆ.