ಮಾರುಕಟ್ಟೆ ನೂರು ಮೀ. ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್, ವ್ಯಾಪಾರ ನಿಷೇಧಿತ ವಲಯ │Daijiworld Television
Daijiworld Television
0:00 / 0:00
ಮಾರುಕಟ್ಟೆ ನೂರು ಮೀ. ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್, ವ್ಯಾಪಾರ ನಿಷೇಧಿತ ವಲಯ │Daijiworld Television
5 049 просмотров · 18 часов назад
Daijiworld Television
701 тыс. подписчиков
5 049 просмотров · 18 часов назад
ಒಂದು ತಿಂಗಳೊಳಗೆ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣ ಪೂರ್ಣಗೊಳ್ಳಲಿದೆ. ಪೂರ್ಣಗೊಂಡ ಬಳಿಕ ಮಾರುಕಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್ ಹಾಗೂ ವ್ಯಾಪಾರ ನಿಷೇಧಿತ ವಲಯವೆಂದು ಘೋಷಿಸಲಾಗುವುದು ಎಂದು ಮನಪಾ ಆಯುಕ್ತ ರಾಹುಲ್ ಪಾಂಡೆ ತಿಳಿಸಿದರು. ಅವರು ಗುರುವಾರ ಬೆಳಗ್ಗೆ ಮಂಗಳೂರಿನ ಕೆಲವೆಡೆ ವಾಕ್ ವಿತ್ ಕಮಿಷನರ್ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿದರು. ಸೆಂಟ್ರಲ್ ಮಾರುಕಟ್ಟೆಯ ಮೂರು ಮಹಡಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಪ್ಪಂದದ ಪ್ರಕಾರ ಅಲ್ಲೇ ಪಾರ್ಕಿಂಗ್ ಮಾಡಬೇಕು. ಕೆಲವು ಕಡೆಗಳಲ್ಲಿ ಹೂವು ಹಾಗೂ ಹಣ್ಣಿನ ಅಂಗಡಿಗಳು ಫುಟ್ಬಾತ್ ಅತಿಕ್ರಮಿಸಿರುವುದು ಬೆಳಕಿಗೆ ಬಂದಿದೆ. ಅಂಥವರ ಕ್ರಮ ತೆಗೆದುಕೊಳ್ಳಲಾಗುವುದು. ಮಂಗಳೂರಿನ ಪುರಭವನ ಬಳಿಯ ರಾಜಾಜಿ ಪಾರ್ಕ್ ನಲ್ಲಿ ಆಂಪಿ ಥಿಯೇಟರ್ ನಲ್ಲಿ ಪ್ರತೀ ಆದಿತ್ಯವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಗೆ ಅವಕಾಶ ಇದೆ ಎಂದು ತಿಳಿಸಿದ ಅವರು ಹಂಪನಕಟ್ಟೆ, ಕೆಬಿ ಕಟ್ಟೆ, ಲೇಡಿಗೋಷನ್ ರೋಡ್, ಕಾರ್ ಸ್ಟ್ರೀಟ್, ಫುಟ್ಪಾತ್ ಒತ್ತುವರಿವನ್ನು ಏಳು ದಿನಗಳ ಒಳಗೆ ತೆರವುಗೊಳಿಸಬೇಕೆಂದು ಇದೇ ವೇಳೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
#daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews