Перейти к содержимому

ಚುನಾವಣಾ ಆಯುಕ್ತರ ತಲೆದಂಡ?- ದೇಶದಲ್ಲಿ ದೊಡ್ಡ ಕೋಲಾಹಲ- ಚುನಾವಣಾ ಆಯೋಗದಲ್ಲಿ ಏನಾಗ್ತಿದೆ?- Election Commission

Third Eye

0:00 / 0:00

ಚುನಾವಣಾ ಆಯುಕ್ತರ ತಲೆದಂಡ?- ದೇಶದಲ್ಲಿ ದೊಡ್ಡ ಕೋಲಾಹಲ- ಚುನಾವಣಾ ಆಯೋಗದಲ್ಲಿ ಏನಾಗ್ತಿದೆ?- Election Commission

52 753 просмотра · 22 часа назад
Third Eye
1,58 млн подписчиков
52 753 просмотра · 22 часа назад
#ElectionCommission #GyaneshKumar #ElectionCommissionOfIndia #CEC #SIR #VoterList #ECINet #ElectionNews #IndiaPolitics #IndianPolitics #SupremeCourt #VoterRights #ElectionCommissionRow #BreakingNews #KannadaNews #KarnatakaNews #ThirdEyeKannada #PoliticalNews #VoterID #ElectoralRoll ಭಾರತದ ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯದ ಸುದ್ದಿ ಈಗ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕೆಲವು ನಿರ್ಧಾರಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಮತದಾರರ ಪಟ್ಟಿ ಪರಿಷ್ಕರಣೆ, SIR ಪ್ರಕ್ರಿಯೆ, ಹೊಸ ಮತದಾರರ Form-6ನಲ್ಲಿ ಮಾಡಲಾದ ಬದಲಾವಣೆ, ECINet ವ್ಯವಸ್ಥೆಯ ಮೂಲಕ ಮತದಾರರ ಡೇಟಾ ಮತ್ತು ಅಧಿಕಾರದ ಕೇಂದ್ರೀಕರಣ, ಸ್ಥಳೀಯ Electoral Registration Officerಗಳ ಅಧಿಕಾರ ಹಾಗೂ ಮತದಾರರ ಹೆಸರು ಸೇರ್ಪಡೆ–ತೆಗೆದುಹಾಕುವ ಪ್ರಕ್ರಿಯೆಗಳ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ವರದಿಗಳ ಪ್ರಕಾರ, ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ 14 ಸಂದರ್ಭಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಅಧಿಕೃತವಾಗಿ ಆಕ್ಷೇಪಣೆ ಅಥವಾ ಅಭಿಪ್ರಾಯ ದಾಖಲಿಸಿದ್ದಾರೆ. ವಿಶೇಷವಾಗಿ Form-6 ಬದಲಾವಣೆ, ಮತದಾರರ ಪಟ್ಟಿಯ ಮೇಲಿನ software control, EROಗಳ ಅಧಿಕಾರ, ಹೆಸರು delete ಅಥವಾ restore ಮಾಡುವ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆದಿದೆ. ಇನ್ನೊಂದೆಡೆ ಚುನಾವಣಾ ಆಯೋಗದ ಸ್ಪಷ್ಟನೆ ಪ್ರಕಾರ, ಆಯೋಗದ ಒಳಗಿನ ಚರ್ಚೆಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜವಾಗಿದ್ದು, ಅಂತಿಮ ನಿರ್ಧಾರಗಳನ್ನು ಮೂವರು ಆಯುಕ್ತರ ಒಮ್ಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ವಿವಾದ ಈಗ ರಾಜಕೀಯವಾಗಿಯೂ ತೀವ್ರಗೊಂಡಿದ್ದು, ವಿರೋಧ ಪಕ್ಷಗಳು ಸ್ಪಷ್ಟನೆ ಮತ್ತು ತನಿಖೆಗೆ ಒತ್ತಾಯಿಸುತ್ತಿವೆ. ವಿಷಯ ಸುಪ್ರೀಂ ಕೋರ್ಟ್ ಮಟ್ಟಕ್ಕೂ ತಲುಪಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳತ್ತ ದೇಶದ ಗಮನ ನೆಟ್ಟಿದೆ. ಈ ವಿಡಿಯೋದಲ್ಲಿ: ಜ್ಞಾನೇಶ್ ಕುಮಾರ್ ವಿರುದ್ಧ ಕೇಳಿಬರುತ್ತಿರುವ ಪ್ರಮುಖ ಆರೋಪಗಳೇನು? ಇಬ್ಬರು ಚುನಾವಣಾ ಆಯುಕ್ತರು ಯಾವ ವಿಷಯಗಳಲ್ಲಿ ಆಕ್ಷೇಪಿಸಿದ್ದಾರೆ? Form-6 ವಿವಾದ ಏನು? ECINet ಮತ್ತು ಮತದಾರರ database ನಿಯಂತ್ರಣದ ಪ್ರಶ್ನೆ ಏನು? EROಗಳ ಅಧಿಕಾರಕ್ಕೆ ಸಂಬಂಧಿಸಿದ ಸಮಸ್ಯೆ ಏನು? “14 objections” ಎಂದರೇನು? ಚುನಾವಣಾ ಆಯೋಗ ನೀಡಿರುವ ಸ್ಪಷ್ಟನೆ ಏನು? ಈ ವಿವಾದದ ಮುಂದಿನ ಕಾನೂನು ಮತ್ತು ರಾಜಕೀಯ ಹಂತ ಏನು? ಎಲ್ಲವನ್ನೂ ಸರಳ ಕನ್ನಡದಲ್ಲಿ ವಿವರಿಸಲಾಗಿದೆ. thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.