Перейти к содержимому

46 ಅಲ್ಪಸಂಖ್ಯಾತ ಮತದಾರರ ಹೆಸರು ಕಡಿತಕ್ಕೆ ಷಡ್ಯಂತ್ರ? │Daijiworld Television

Daijiworld Television

0:00 / 0:00

46 ಅಲ್ಪಸಂಖ್ಯಾತ ಮತದಾರರ ಹೆಸರು ಕಡಿತಕ್ಕೆ ಷಡ್ಯಂತ್ರ? │Daijiworld Television

2 497 просмотров · 2 дня назад
Daijiworld Television
702 тыс. подписчиков
2 497 просмотров · 2 дня назад
ಮೂಡುಶೆಡ್ಡೆ ಗ್ರಾಮದ ಎದುರುಪದವು ವಾರ್ಡ್ ನಂಬರ್ 1ರಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಒಂದೇ ಸಮುದಾಯದ 46ಕ್ಕೂ ಅಧಿಕ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಿಶನ್ ಎಂಬ ವ್ಯಕ್ತಿಯು ಫಾರಂ ನಂಬರ್ 7ನ್ನು ಬಳಸಿ, ಎದುರುಪದವಿನ 46 ಅಲ್ಪಸಂಖ್ಯಾತ ಮತದಾರರು ಮದುವೆಯಾಗಿ ಬೇರೆಡೆಗೆ ತೆರಳಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ ಬಿಎಲ್‌ಒ (BLO) ಹಾಗೂ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರುದಾರರಾದ ಬದ್ರುದ್ದೀನ್ ಮತ್ತು ಜೊಹರಾ ತಿಳಿಸಿದ್ದಾರೆ. "ನಾವು ಇಲ್ಲೇ ಹುಟ್ಟಿ ಬೆಳೆದವರು, 52 ವರ್ಷಗಳಿಂದ ಇಲ್ಲೇ ಇದ್ದೇವೆ. ಆದರೆ ಎಲ್ಲಿಂದಲೋ ಬಂದ ವ್ಯಕ್ತಿ ನಮ್ಮ ಹೆಸರು ತೆಗೆದುಹಾಕಲು ಅರ್ಜಿ ನೀಡಿದ್ದು, ಸುಳ್ಳು ಮಾಹಿತಿ ನೀಡಿರುವ ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಎದುರುಪದವಿನ ನಾಗರಿಕರು ಮತ್ತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಮುಖಂಡರು ಇದನ್ನು ಬಿಜೆಪಿ ಷಡ್ಯಂತ್ರ ಎಂದು ಜರಿದಿದ್ದಾರೆ. #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews