Перейти к содержимому

ಜಯಶಾಲಿ ನಂಬಿಕೆ ಮತ್ತು ಪರಲೋಕದ ತಾಯಿ | ಚರ್ಚ್ ಆಫ್ ಗಾಡ್

World Mission Society Church of God / Global

0:00 / 0:00

ಜಯಶಾಲಿ ನಂಬಿಕೆ ಮತ್ತು ಪರಲೋಕದ ತಾಯಿ | ಚರ್ಚ್ ಆಫ್ ಗಾಡ್

872 просмотра · 2 дн. назад
World Mission Society Church of God / Global
149 тыс. подписчиков
872 просмотра · 2 дн. назад
ದೇವರ ಎಲ್ಲಾ ಆತ್ಮರಕ್ಷಣೆಯ ಕಾರ್ಯಗಳನ್ನು ಒಳಗೊಂಡಿರುವ ಸತ್ಯವೇದವು, “ಪರಲೋಕದ ತಾಯಿ” ಬಗ್ಗೆ ಸಾಕ್ಷಿಕರಿಸುತ್ತದೆ ಸತ್ಯವೇದದಲ್ಲಿ ದಾಖಲಾಗಿರುವ ದೇವರ ಪ್ರತಿಯೊಂದು ಮಾತು ತಪ್ಪದೆ ನೆರವೇರುತ್ತದೆ. ಸತ್ಯವೇದವು 2,000 ವರ್ಷಗಳ ಹಿಂದೆ ಬಂದ ಯೇಸುವಿನ ಕುರಿತು ಸಾಕ್ಷಿಕರಿಸುತ್ತದೆ ಮತ್ತು ಆತ್ಮನೂ ಮದಲಗಿತ್ತಿಯಾಗಿ ಬಂದಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಪವಿತ್ರಾತ್ಮನ ಕಾಲದಲ್ಲಿ ಕೈಗೊಳ್ಳಬೇಕಾದ ಆತ್ಮರಕ್ಷಣೆಯ ಕಾರ್ಯದ ಬಗ್ಗೆ ಸಾಕ್ಷಿಕರಿಸುತ್ತದೆ. ಯೇಸು ಆತ್ಮರಕ್ಷಣೆಯ ಕಾರ್ಯವನ್ನು ನಡೆಸಿದಂತೆಯೇ, ಈ ಕಾಲದಲ್ಲಿ ಆತ್ಮರಕ್ಷಣೆಯ ಕಾರ್ಯವು ಪ್ರವಾದನೆಗಳ ಪ್ರಕಾರ ಮುಂದುವರಿಯುತ್ತದೆ ಸೈತಾನನಿಂದ ಆಳಲ್ಪಡುವ ಈ ಲೋಕದಲ್ಲಿ ವಿಜಯಶಾಲಿಗಳಾಗಲು ನಂಬಿಕೆಯಿಂದ ರಕ್ಷಿಸಲ್ಪಡುವ ಜನರು - ದೇವರ ಆಜ್ಞೆಗಳನ್ನು ಕೈಗೊಳ್ಳುವ ಸ್ತ್ರೀಯ ಸಂತಾನದವರಲ್ಲಿ ಉಳಿದವರು ಎಂದು ಸತ್ಯವೇದವು ಪ್ರವಾದಿಸುತ್ತದೆ. ಇದು ಅವರು ಇಸಾಕನಂತೆ ತಾಯಿಯ ಮೂಲಕ ಪರಲೋಕರಾಜ್ಯದ ಬಾಧ್ಯತೆಯನ್ನು ಸ್ವೀಕರಿಸುತ್ತಾರೆ ಎಂಬುದಕ್ಕೂ ಸಾಕ್ಷಿಕರಿಸುತ್ತದೆ. ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. ಯೋಹಾನನು 5:39 ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂವಿುಗೆ ಬಿದ್ದನು; ಆಗ ಘಟಸರ್ಪನು ಸ್ತ್ರೀಯ ಮೇಲೆ ಕೋಪಿಸಿಕೊಂಡು ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧ ಮಾಡುವದಕ್ಕೆ ಹೊರಟು ಸಮುದ್ರತೀರದ ಮರಳಿನ ಮೇಲೆ ನಿಂತನು. ಪ್ರಕಟನೆ 12:9, 17 [ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.] 〖World Mission Society Church of God〗https://watv.org 〖India〗 https://indiawmscog.org 〖WATV Media Cast〗 https://watvmedia.org/kn 〖Church of God Introduction〗https://introwmscog.com