Перейти к содержимому

ಆಂಧ್ರಪ್ರದೇಶದ ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ

DD Chandana News

0:00 / 0:00

ಆಂಧ್ರಪ್ರದೇಶದ ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ

3 862 просмотра · 14 ч назад
DD Chandana News
113 тыс. подписчиков
3 862 просмотра · 14 ч назад
ಬಂಗಾಳ ಕೊಲ್ಲಿಯಲ್ಲಿನ ತೀವ್ರ ವಾಯುಭಾರ ಕುಸಿತದ ಪರಿಣಾಮ ಉದ್ಭವಿಸಿರುವ ಮುರಸು ಚಂಡಮಾರುತ ತೀವ್ರತೆ ಪಡೆದುಕೊಂಡಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ಚಂಡಮಾರುತ ಇಂದು ಮಧ್ಯರಾತ್ರಿ ಆಂಧ್ರಪ್ರದೇಶದ ಕರಾವಳಿಯ ನೆಲ್ಲೂರು ಮತ್ತು ನರಸಾಪುರಗಳ ನಡುವೆ ಹಾಗೂ ಒಂಗೋಲು ಸಮೀಪದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ. ಮುರಸು ಚಂಡಮಾರುತದ ಗಾಳಿಯ ವೇಗವು ಗಂಟೆಗೆ 80 ರಿಂದ 90 ಕಿ.ಮೀ. ಇರಲಿದ್ದು, ಕೆಲವೊಮ್ಮೆ ಗಂಟೆಗೆ 100 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಮೀನುಗಾರರು ಇಂದು ಆಗ್ನೇಯ ಬಂಗಾಲ ಕೊಲ್ಲಿಗೆ ಮತ್ತು ಬುಧವಾರ ಬೆಳಗಿನ ಜಾವದವರೆಗೆ ನೈಋತ್ಯ ಬಂಗಾಳ ಕೊಲ್ಲಿಯ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆಂಧ್ರಪ್ರದೇಶದ ಕರಾವಳಿಯಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ, ರೆಡ್ ಅಲರ್ಟ್ ಘೋಷಿಸಿದೆ. ರಾಯಲಸೀಮೆ, ತಮಿಳುನಾಡು, ಪುದುಚೇರಿ, ಕರೈಕಲ್ ಮತ್ತು ತೆಲಂಗಾಣದಲ್ಲಿ ಇಂದು ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ ಎರಡು ದಿನಗಳಲ್ಲಿ ಛತ್ತೀಸ್‌ಗಢ, ಕೇರಳಂ, ಮಾಹೆ, ಒಡಿಶಾ ಮತ್ತು ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಸಹ ಭಾರಿ ಮಳೆಯಾಗುವ ಸಾಧ್ಯತೆಯಿದೆ. #LiveDDChandanaNews #DDChandanaNews #DDChandana #DDKannada