Перейти к содержимому

Lemon pepper

uma Amar Belagur

0:00 / 0:00

Lemon pepper

32 просмотра · 7 дн. назад
uma Amar Belagur
354 подписчика
32 просмотра · 7 дн. назад
ಲೆಮನ್ ಪೆಪ್ಪರ್ ಬೇಕಾಗುವ ಸಾಮಗ್ರಿಗಳು 1 ಪಾವು ಹಸಿ ಪೆಪ್ಪರ್ 25 ನಿಂಬೆಹಣ್ಣಿನ ರಸ ಅಥವಾ ಕಾಳುಗಳು ಮುಳುಗುವಷ್ಟು 1 ಹಿಡಿ ಉಪ್ಪು ಮಾಡುವ ವಿಧಾನ ತಾಜಾ ಪೆಪ್ಪರ್‌ಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅವುಗಳನ್ನು ಬಿಡಿಸಿ ನೀರನ್ನು ಆರಿಸಿ. ಒಂದು ಗಾಜಿನ ಭರಣಿಯಲ್ಲಿ ಪೆಪ್ಪರ್ ಬಿಡಿಸಿರುವುದನ್ನು ಹಾಕಿ, 25 ನಿಂಬೆಹಣ್ಣಿನ ರಸ ಅಥವಾ ಕಾಳುಗಳು ಮುಳುಗುವಷ್ಟು ರಸ ಹಾಕಿ, 1 ಹಿಡಿ ಉಪ್ಪು ಹಾಕಿ ಕಲಸಿ ಮುಚ್ಚಿಡಿ. ಬೆಳಿಗ್ಗೆ ನಿಂಬೆಹಣ್ಣಿನ ರಸದಿಂದ ಕಾಳುಗಳನ್ನು ಬೇರ್ಪಡಿಸಿ, ಒಂದು ಪ್ಲಾಸ್ಟಿಕ್ ಕವರಿನ ಮೇಲೆ ಬಿಸಿಲಿನಲ್ಲಿ ಹರಡಿ. ಸಂಜೆ ಒಳಗೆ ತಂದು ಅದನ್ನು ಪುನಃ ಉಳಿದಿರುವ ನಿಂಬೆಹಣ್ಣಿನ ರಸದಲ್ಲಿ ಹಾಕಿ. ಬೆಳಿಗ್ಗೆ ಮತ್ತೆ ಬಿಸಿಲಿಗೆ ಹಾಕಿ. ನಿಂಬೆಹಣ್ಣಿನ ರಸ ಖಾಲಿಯಾಗುವವರೆಗೂ ಇದೇ ಪ್ರೋಸೆಸ್ ಮಾಡಿ. ನಂತರ ಅದನ್ನು ಚೆನ್ನಾಗಿ ಬಿಸಿಲಿನಲ್ಲಿ ಗರಿಗರಿಯಾಗುವ ಹಾಗೆ ಒಣಗಿಸಿ. ಅದನ್ನು ಏರ್‌ಟೈಟ್ ಬಾಕ್ಸಿನಲ್ಲಿ ತೆಗೆದಿಟ್ಟುಕೊಳ್ಳಿ. ಚಳಿ ಇದ್ದಾಗ ಅಥವಾ ಗಂಟಲಿನಲ್ಲಿ ಕಿಚ್ ಕಿಚ್ಚಿ ಇದ್ದಾಗ ಒಂದು ಅಥವಾ ಎರಡು ಕಾಳುಗಳನ್ನು ತಿನ್ನಿ. ಗಂಟಲಿಗೆ ತುಂಬಾ ಹಿತ ಅನಿಸುತ್ತದೆ.