ತುಪ್ಪ ಸೇವನೆಯಿಂದ ಏಕಾಗ್ರತೆ, ಧ್ಯಾನ, ಮೋಕ್ಷ? ಆತ್ಮಸಾಧನೆಯಲ್ಲಿ ತುಪ್ಪದ ಮಹತ್ವ – ರಾಘವೇಶ್ವರ ಶ್ರೀ
Vtv Kannada
0:00 / 0:00
ತುಪ್ಪ ಸೇವನೆಯಿಂದ ಏಕಾಗ್ರತೆ, ಧ್ಯಾನ, ಮೋಕ್ಷ? ಆತ್ಮಸಾಧನೆಯಲ್ಲಿ ತುಪ್ಪದ ಮಹತ್ವ – ರಾಘವೇಶ್ವರ ಶ್ರೀ
97 просмотров · 17 ч назад
Vtv Kannada
139 тыс. подписчиков
97 просмотров · 17 ч назад
ತುಪ್ಪ ಕೇವಲ ಆಹಾರವೇ? ಅಥವಾ ಆತ್ಮಸಾಧನೆಗೂ ಸಹಕಾರಿಯಾಗುವ ಆಹಾರವೇ?
“ತುಪ್ಪ ಆರೋಗ್ಯ ಕಾರಕವೂ ಹೌದು, ಆತ್ಮಜ್ಞಾನಕ್ಕೆ ಪೂರಕವೂ ಹೌದು” ಎಂದು ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ‘ಅನ್ನಂ ಬ್ರಹ್ಮ’ ಪ್ರವಚನದಲ್ಲಿ ತುಪ್ಪದ ಮಹತ್ವವನ್ನು ವಿವರಿಸಿದರು.
ಗೋಕರ್ಣದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 24.09.2026ರಂದು ಮಾತನಾಡಿದ ಶ್ರೀಗಳು, ಆರೋಗ್ಯ ಮತ್ತು ಆತ್ಮಜ್ಞಾನವನ್ನು ಭಾರತೀಯ ಪರಂಪರೆಯಲ್ಲಿ ಬೇರೆಬೇರೆಯಾಗಿ ನೋಡಲಾಗಿಲ್ಲ ಎಂದು ತಿಳಿಸಿದರು.
ತುಪ್ಪದ ಸೇವನೆಯಿಂದ ಸತ್ವಗುಣ ವೃದ್ಧಿಯಾಗುತ್ತದೆ. ಸತ್ವಗುಣದಿಂದ ಏಕಾಗ್ರತೆ, ಏಕಾಗ್ರತೆಯಿಂದ ಧ್ಯಾನ ಹಾಗೂ ಧ್ಯಾನದ ಮೂಲಕ ಆತ್ಮಸಾಧನೆಯ ಉನ್ನತ ಸ್ಥಿತಿಯನ್ನು ತಲುಪಲು ಸಾಧ್ಯ ಎಂಬ ವಿಚಾರವನ್ನು ಶ್ರೀಗಳು ವಿವರಿಸಿದರು.
ಕೋಟಿಸೂರ್ಯನ ಬೆಳಕು ಮತ್ತು ಕೋಟಿಚಂದ್ರರ ತಂಪಿನ ಉಪಮೆಯ ಮೂಲಕ ತುಪ್ಪದ ಮಹತ್ವವನ್ನು ವಿವರಿಸಿದ ಶ್ರೀಗಳ ಪ್ರವಚನವನ್ನು ಸಂಪೂರ್ಣವಾಗಿ ಕೇಳಿ.
“‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯು ಯಾರನ್ನೋ ಮೆಚ್ಚಿಸಲು ಮಾಡುತ್ತಿರುವುದಲ್ಲ. ಇಲ್ಲಿನ ವಿಚಾರಗಳು ಸಾಧನೆಗೆ ಇರುವಂತದ್ದು; ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೈಯಕ್ತಿಕವಾಗಿ ಸಾಧನೆ ಮಾಡಬೇಕು.”
— ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು