ದೇವಿಯ ಈ 2 ಭಕ್ತಿಪೂರ್ವಕ ಹಾಡು ಕೇಳಿದರೆ! ನೀವೂ ಇಷ್ಟಪಟ್ಟು ಹೇಳುತ್ತೀರಿ😍.
Rajeshwari and Songs
0:00 / 0:00
ದೇವಿಯ ಈ 2 ಭಕ್ತಿಪೂರ್ವಕ ಹಾಡು ಕೇಳಿದರೆ! ನೀವೂ ಇಷ್ಟಪಟ್ಟು ಹೇಳುತ್ತೀರಿ😍.
30 334 просмотра · 1 год назад
Rajeshwari and Songs
10 тыс. подписчиков
30 334 просмотра · 1 год назад
ನವರಾತ್ರಿಗೆ 2 ದೇವಿ ಹಾಡುಗಳು 👆🏻.
ಪ್ರಸ್ತುತಿ :- ಶಾರದಾ ಹೆಬ್ಬಾರ್ & ರಾಜೇಶ್ವರಿ ಹೆಬ್ಬಾರ್
ಸರ್ವರೂ ಕೇಳಿ ದೇವಿಯ 2 ಭಕ್ತಿಪೂರ್ವಕ ಹಾಡುಗಳನ್ನು.
ಮೊದಲನೇ ಹಾಡು ನವರಾತ್ರಿ ಆರಂಭದಲ್ಲಿ ಹಾಗೂ ಎರಡನೇ ಹಾಡು ನವರಾತ್ರಿ ಕೊನೆಯ ದಿವಸಗಳಲ್ಲಿ ಹೇಳಲು ಅನುಕೂಲವಾಗಿದೆ. ಲಿರಿಕ್ಸ್ ನ್ನು ಈ ಕೆಳಗೆ ಹಾಕಿರುತ್ತೇವೆ.
ಹಾಡನ್ನು ಕೇಳಿ... ಇಷ್ಟವಾದಲ್ಲಿ ಕೆಳಗಿನ ಲಿರಿಕ್ಸ್ ಬಳಸಿ ಕಲಿತು ಈ ನವರಾತ್ರಿಗೆ ಎಲ್ಲರೂ ಹಾಡಿ.
ನಮ್ಮ ಇನ್ನೂ ಹೆಚ್ಚಿನ ದೇವಿ ಹಾಡುಗಳು ಹಾಗೂ ಇನ್ನಿತರ ವಿಶೇಷ ಭಜನೆ, ಹಾಡುಗಳಿಗೆ ತಪ್ಪದೇ ನಮ್ಮ
ಈ 👉🏻 @rajeshwarihebbar7658 ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಬೆಲ್ ಐಕಾನ್ ಒತ್ತಿ ಹೊಸ ಹೊಸ ಹಾಡುಗಳನ್ನು ವೀಕ್ಷಿಸಿ, ಕಲಿಯುತ್ತಿರಿ. ಹಾಗೂ ಲೈಕ್ ಕಾಮೆಂಟ್ ಶೇರ್ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹಿಸಿ.
ಸರ್ವರಿಗೂ ನವರಾತ್ರಿಯ ಶುಭಾಶಯಗಳು 🙏🏻.
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
1) ಜಯ ನಮೋಸ್ತುತೆ
ಜಯ ನಮೋಸ್ತುತೆ ಭಾಗ್ಯಶಾಲಿನಿ
ಜಯ ಸದಾ ಸಂತೋಷಿಣಿ | ಆ s s s s
ಜಯಜಯತು ಕಲ್ಯಾಣಿ ಮಾಲಿನಿ
ಜಯತು ವೀಣಾ ಪಾಣಿಯೆ | ಆ s s s s || ಪ ||
ಶಾರೆದೆಯೆ ಗುಣವಾರಿಧಿಯೆ ದಯೆ
ತೋರೆ ಮತಿಯನು ಕರುಣಿಸೇ |
ಸಾರ ಸಕಲ ಪೂಜಿತೇ ಭ್ರಮೆ
ಹಾರಿಸೇ ಶುಭ ಕರುಣಿಸೇ | ಆ s s s s || 1 ||
ಸಕಲ ತತ್ವ ವಿಚಾರಕಾರಿಣಿ
ನಿಖಿಲ ಜಗ ಸಂಚಾರಿಣಿ |
ವಿಕಸಿತದ ವಿಜ್ಞಾನ ಪೋಷಿಣಿ
ಪ್ರಕಟ ಪುಸ್ತಕ ಧಾರಿಣಿ | ಆ s s s s || 2 ||
ನೀನೆ ಗತಿಯು ನೀನೆ ಮತಿಯು
ನೀನೆ ನೆಮ್ಮದಿ ದೇವತೆ |
ನೀನೆ ಮಾತೆಯು ಜ್ಞಾನದಾತೆಯು
ನೀನೊಲಿದು ಪರಿಪಾಲಿಸೇ | ಆ s s s s || 3 ||
°°°°°°°°°°°°°°°°°°°°°°°°°°°°°°°°°°°°°°°°°°°°°°°
2 ) ಶಾಂತಿದಾತೆ ಶ್ರೀ ಲಲಿತೆ
ಶಾಂತಿದಾತೆ ಶ್ರೀ ಲಲಿತೆ ಭಾಗ್ಯದಾತೆ ಸುರಲತೆ || ಪ ||
ಬ್ರಹ್ಮಕುವರಿ ವರದೇಶ್ವರಿ ಬ್ರಹ್ಮತೇಜ ಮಾಧುರಿ |
ತನುಮನದಿ ಭಜಿಸುವಾ ಭಕ್ತರ ಯಶವ ನೀಡೆ ತಾಯೆ || 1 ||
ಸ್ವರ್ಣವಲ್ಲೀ ಪುರನಿವಾಸಿ ಸ್ವರ್ಣಭರಣ ಭೂಷಿತೆ |
ಕಾಲಕಾಲ ರುದ್ರ ನರಸಿ ಕಾಲ ಭೈರವೀ ತಾಯೆ || 2 ||
°°°°°°°°°°°°°°°°°°°°°°°°°°°°°°°°°°°°°°°°°°°°°°°
#bhaktibhajan #navaratri #navaratrihaadu #devihadu #devibhajan #dasara #devihaadugalu
#dasaraspecial #durga #durgamaa #devotionalsongs #devibhaktigeet
#rajeshwarihebbar #navratri #navratristatus #navratrispecial