Перейти к содержимому

Bare Gopamma | Mysore Ramachandrachar | ಶ್ರೀ ಪುರಂದರದಾಸರು

Ninnaolumeyinda Pratishtanam

0:00 / 0:00

Bare Gopamma | Mysore Ramachandrachar | ಶ್ರೀ ಪುರಂದರದಾಸರು

21 624 просмотра · 9 месяцев назад
Ninnaolumeyinda Pratishtanam
20,6 тыс. подписчиков
21 624 просмотра · 9 месяцев назад
ರಾಗ :ಶುದ್ಧ ಧನ್ಯಾಸಿ ತಾಳ: ಆದಿ ರಚನೆ: ಶ್ರೀ ಪುರಂದರದಾಸರು ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ|| ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅಪ|| ನೀರೊಳು ಮುಳುಗಿ ಮೈ ಒರೆಸೆಂದಳುತಾನೆ, ಬಾರೇ ಗೋಪಮ್ಮ ಮೇರುವ ಹೊತ್ತು ಮೈ ಭಾರವೆಂದಳುತಾನೆ, ಬಾರೇ ಗೋಪಮ್ಮ | ಧರಣಿ ಕೋರೆಯಲಿಟ್ಟು ದವಡೆ ನೊಂದಳುತಾನೆ, ಬಾರೇ ಗೋಪಮ್ಮ ದುರುಳ ರಕ್ಕಸನ ಕರುಳ ಕಂಡಳುತಾನೆ, ಬಾರೇ ಗೋಪಮ್ಮ ||1|| ನೆಲವನಳೆದು ಪುಟ್ಟ ಬೆರಳು ನೊಂದಳುತಾನೆ, ಬಾರೇ ಗೋಪಮ್ಮ ಛಲದಿಂದ ಕೊಡಲಿಯ ಪಿಡಿದೆಂದಳುತಾನೆ, ಬಾರೇ ಗೋಪಮ್ಮ | ಬಲು ಸೈನ್ಯ ಕಪಿಗಳ ನೋಡೆನೆಂದಳುತಾನೆ, ಬಾರೇ ಗೋಪಮ್ಮ ನಿಲುವಿನ ಬೆಣ್ಣೆಯು ನಿಲುಕದೆಂದೆಳುತಾನೆ, ಬಾರೇ ಗೋಪಮ್ಮ ||2|| ಬತ್ತಲೆ ನಿಂತವನ ಎತ್ತಿಕೊ ಎOದಳುತಾನೆ, ಬಾರೇ ಗೋಪಮ್ಮ ಉತ್ತಮ ತೇಜಿಯ ಹತ್ತೇನೆಂದಳುತಾನೆ ಗೋಪ್ಯಮ್ಮ | ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ, ಬಾರೇ ಗೋಪಮ್ಮ ದಿಟ್ಟ ಶ್ರೀ ಪುರಂದರವಿಠಲಕೆ ಮೊಲೆ ಕೊಡು, ಬಾರೇ ಗೋಪಮ್ಮ ||3|| To book Daasavani Concerts of Sri Mysore Ramachandrachar for any occasions, do contact Sri Achar - 9845164682 or email ninnaolumeyindapratishtanam@gmail.com Download Android app NinnaOlumeyinda from Playstore for more updates on upcoming programs #dasarapadagalu #devaranama #devotional #kannada #mysoreramachandrachar #ninnaolumeinda #ninnaolumeyindapratistanam #raghavendraswami #purandaradasaru #vijayadasaru #gopaladasaru #jaganathadasaru #kanakadasaru #kanakadasa #raghavendrashloka #raghavendrasongs #raghavendra #bommaghatta #chippagiri #cheekalaparavi #bikshalaya #bichale #udupi #pajaka #kashi #pandharapur #tirukoilur #malakheda #navabrindavana #tirumala #kushtagi #palimaru