ಮುಕ್ತಕ ಮಾಲೆ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ
sharada Moleyar M
0:00 / 0:00
ಮುಕ್ತಕ ಮಾಲೆ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ
20 просмотров · 1 день назад
sharada Moleyar M
591 подписчик
20 просмотров · 1 день назад
-----------------------------------------
💃ವಿಷಯ: ಸಮಯ......💃
🔥ಮುಕ್ತಕ ಮಾಲೆ🔥
----------------------------------------
ಸಮಯವನು ಹಿಡಿದಿಡಲು ಜಗದಲ್ಲಿ ಆಗುವುದೆ?
ಮಮತೆಯಲಿ ಮಗುವನ್ನು ತೊಟ್ಟಿಲ ಲಿ ತೂಗೆ
ನಮನವದು ಮನಸಲ್ಲೆ ಮಾಡಿಹಳು ತಾ ಜನನಿ
ಮಮಬಂಧು ಕೇಶವಗೆ -ಶರಧಿ ಶಯನೆ||
ನಾಳೆಯಲಿ ಹೆಚ್ಚುವರಿ ಕೆಲಸವಿದೆ ತಿಳಿದಿರಲು
ಇಳೆಯಲ್ಲಿ ಸಮಯವನು ಕರಡಿಗೆಲಿ ಪಿಡಿದು
ಉಳಿಸಲದು ನಿಜದಲ್ಲಿ ಮನುಜಂಗೆ ಆಗುವುದೆ?
ತಿಳಿಯಿದನು ಮನುಜನೇ- ಶರಧಿ ಶಯನೆ|
ಜಗದಲ್ಲಿ ಸಮಯಕಿದೆ ಬೆಲೆಯೆಂದು ಹಾಡುತಿರು
ಮಗುವನ್ನು ನವಮಾಸ ಉದರದಲಿ ಹೊತ್ತು
ಮಗನೊಬ್ಬ ಕಾಲವದು ತೆಗೆಯುತಲಿ
ಹುಟ್ಟುತಲೆ
ಮೊಗದಲ್ಲಿ ನಸುನಗುವು- ಶರಧಿ ಶಯನೆ||
ಕಳೆಯದಿರು ಸಮಯವನು ಸುಮ್ಮನೆ ಯೆ ಮಾನವನೆ
ಉಳಿಯುವುದೆ ಗತಿಸಿರ್ಪ ಕಾಲ ಭವದಲ್ಲಿ?
ಅಳಿಯಲಿದೆ ಕಾಯವದು ಜಗದಲ್ಲಿ ಸರ್ವರದು
ಉಳಿಯುವುದು ಕೀರುತಿಯು ಶರಧಿ ಶಯನೆ||
-----------------------------------------------
💃ಶಾರದಾ ಮೊಳೆಯಾರ್💃
--------------------------------------------
🍁ಪಂಚದಳ ಮುಕ್ತಕ🍁
🍁ವಿಷಯ : ನವರಾತ್ರಿ ಹಬ್ಬ 🍁
ಮನವನ್ನು ಬೆಳಗುತ್ತ ನವದಿನದ ಹಬ್ಬದಲಿ
ಮನಸನ್ನು ಶುಚಿಯಾಗಿ ಇಡಬೇಕು ಜನರೆಲ್ಲ
ಮುನಿಸನ್ನು ಸುಮ್ಮನೆಯೆ ಮಾಡುವುದ ಬಿಡಬೇಕು
ನನಸಾಗೆ ಕನಸೆಲ್ಲ ಸಂತಸವು ಹೊರಹೊಮ್ಮೆ
ಕುಣಿಯುವುದು ಮೈ ಮನವು ಶರಧಿ ಶಯನೆ||
🍁ಶಾರದಾ ಮೊಳೆಯಾರ್🍁