Перейти к содержимому

Bhakthi kavana kushmanda ದೇವಿ, ರಚನೆಂ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ

sharada Moleyar M

0:00 / 0:00

Bhakthi kavana kushmanda ದೇವಿ, ರಚನೆಂ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ

55 просмотров · 6 дней назад
sharada Moleyar M
591 подписчик
55 просмотров · 6 дней назад
♒ಭಕ್ತಿ ಕವನ♒ ♒ಕೂಷ್ಮಾಂಡ ದೇವಿ ಕವನ♒ ದೇವಿಯ ನಾಲ್ಕನೇ ದಿನದ ರೂಪವರಿ ಕೂಷ್ಮಾಂಡ ರೂಪವ ತೋರುವ ನಾರಿ ಮಂದಹಾಸದಿಂ ಸೃಷ್ಟಿಯೇ ನಿರ್ಮಾಣ ಇದು ವಿಬುಧರು ಹೇಳುವ ಕತೆ ಪುರಾಣ|| ಓಂ ದೇವೀ ಕೂಷ್ಮಾಂಡೈ ನಮೋ ನಮ: ಮಂತ್ರವ ಹೇಳುತ ಪೂಜೆಯ ಮಾಡು ಸುಖ ಶಾಂತಿ ಸಂತಸ ಸಮೃದ್ಧಿ ನೀ ನೀಡು ದಿನಾ ಮರೆಯದೆ ಆರಾಧಿಸಿ ಸಂತಸ ಪಡು|| ನಿತ್ಯ ನಿನಗೆ ಕುಂಬಳಕಾಯಿಯ ನೈವೇದ್ಯ ಸತ್ಯ ನೀಡುವೆ ನಿನಗೆ ಸಿಹಿ ಹಲ್ವದ ಖಾದ್ಯ ಹರಸುತ ಪೊರೆಯು ಹೇ ಜನನಿ ಜನರ ಹರನ ಸತಿ ನೀಗು ನೀ ಬಾಳ ಅಂಧಕಾರ|| ಆದಿ ಶಕ್ತಿಯ ಪ್ರತಿರೂಪವು ಈ ಅವತಾರ ಸಿಂಹವಾಹನೆ ನೀಡು ನಿತ್ಯದಿ ಸಾಕ್ಷಾತ್ಕಾರ ಎಂಟು ಕೈಯಲಿ ಧನಸ್ಸು, ಬಾಣ, ಕಮಲ, ಅಮೃತದ ಕಲಶ, ಚಕ್ರ, ಗದೆಗಳದು ಲೀಲ ಕಾಂತಿ ಸೂರ್ಯಸಮ ಭಯ ಸನಿಹ ಬರಲು ನೆಮ್ಮದಿಯ ಕರುಣಿಸು ಹೇ ಜಗನ್ಮಾತೆ ಸಂತಸ ದ್ವಿಗುಣದಿ ನೀಡು ಹೇ ಮಾತೆ ಆಯುಷ್ಯ ಕರುಣಿಸು ನಮಗೆ ಚಂದದಿ ಸಾಯುಜ್ಯ ಪಡೆಯಬೇಕು ಈ ಜೀವನದಿ|| ♒ಶಾರದಾ ಮೊಳೆಯಾರ್♒ ♒ ಭಕ್ತಿ ಕವನ: ಕುಷ್ಮಾಂಡ ದೇವಿ ♒ ಗಾಯನದಲ್ಲಿ ಸುನೋ ರಚನೆ. ಮತ್ತು video ಪ್ರಸ್ತುತಿ,ನಿರ್ವಹಣೆ: ಶಾರದಾ ಮೊಳೆಯಾರ್