ಕೊಡಗು ಚಿನ್ನದ ಅರಮನೆಯಂತಿದೆ ಈ ಗೋಲ್ಡನ್ ಟೆಂಪಲ್ ಸಾವಿರಾರು ಪ್ರವಾಸಿಗರ ಆಕರ್ಷಣೆ ಕುಶಾಲನಗರದ ಅದ್ಭುತ ತಾಣ
janadhwani news
0:00 / 0:00
ಕೊಡಗು ಚಿನ್ನದ ಅರಮನೆಯಂತಿದೆ ಈ ಗೋಲ್ಡನ್ ಟೆಂಪಲ್ ಸಾವಿರಾರು ಪ್ರವಾಸಿಗರ ಆಕರ್ಷಣೆ ಕುಶಾಲನಗರದ ಅದ್ಭುತ ತಾಣ
36 просмотров · 13 ч назад
janadhwani news
6,27 тыс. подписчиков
36 просмотров · 13 ч назад
ಚಿನ್ನದ ಅರಮನೆಯಂತಹ ಅದ್ಭುತ ಮಂದಿರ! ಕಣ್ಮನ ಸೆಳೆಯುವ ಬೃಹತ್ ಬುದ್ಧನ ವಿಗ್ರಹಗಳು! ಪ್ರತಿದಿನ ಸಾವಿರಾರು ಪ್ರವಾಸಿಗರ ದಂಡು!
ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಆ ಸೌಂದರ್ಯ… ಕ್ಯಾಮೆರಾದಲ್ಲಿ ಸೆರೆಹಿಡಿದರೂ ಮನಸ್ಸಿನಲ್ಲಿ ಉಳಿಯುವ ಆ ಅದ್ಭುತ ಅನುಭವ… ಅಷ್ಟಕ್ಕೂ ಈ ಜಗತ್ಪ್ರಸಿದ್ಧ ಪ್ರವಾಸಿ ತಾಣ ಎಲ್ಲಿದೆ ಗೊತ್ತಾ?
ಅದೇ… ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಬೈಲಕುಪ್ಪೆಯಲ್ಲಿರುವ ಪ್ರಸಿದ್ಧ ಗೋಲ್ಡನ್ ಟೆಂಪಲ್!
ಇದು ಬರೀ ದೇವಾಲಯವಲ್ಲ… ಕಣ್ಣಿಗೆ ಹಬ್ಬ, ಮನಸ್ಸಿಗೆ ನೆಮ್ಮದಿ, ಬೌದ್ಧ ಧರ್ಮದ ಸಂಸ್ಕೃತಿ ಮತ್ತು ಪರಂಪರೆಯ ಭವ್ಯ ದರ್ಶನ!ಹೌದು… ತೆಗೋಗ್ ನಾಮ್ಮೋಲ್ ಶೆದ್ರುಬ್ ದರ್ಗೈಲಿಂಗ್ ಮಠ ಎಂದೇ ಕರೆಯಲ್ಪಡುವ ಈ ಗೋಲ್ಡನ್ ಟೆಂಪಲ್ ಅನ್ನು 1963ರಲ್ಲಿ ಪರಮಪೂಜ್ಯ ಪದ್ಮ ನಾರ್ಬು ರಿಂಪೋಚೆ ಅವರು ಸ್ಥಾಪಿಸಿದರು.
ಗೌತಮ ಬುದ್ಧನ ಅಮೂಲ್ಯ ಬೋಧನೆಗಳನ್ನು ಸಂರಕ್ಷಿಸುವುದು… ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದು… ಈ ಮಠದ ಸ್ಥಾಪನೆಯ ಹಿಂದಿರುವ ಮಹತ್ತರ ಉದ್ದೇಶ!
ದೇವಾಲಯದ ಒಳಗೆ ಕಾಲಿಟ್ಟರೆ ಸಾಕು… ಚಿನ್ನದ ಹೊಳಪಿನಲ್ಲಿ ಕಂಗೊಳಿಸುವ ಬೃಹತ್ ಬುದ್ಧನ ವಿಗ್ರಹಗಳು ನಿಮ್ಮನ್ನು ಸ್ವಾಗತಿಸುತ್ತವೆ!ಇನ್ನೊಂದು ವಿಶೇಷ ಏನು ಗೊತ್ತಾ?
ಪ್ರತಿದಿನ ಸಾವಿರಾರು ಪ್ರವಾಸಿಗರು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸುತ್ತಾರೆ. ದೇವಾಲಯದ ಸೌಂದರ್ಯವನ್ನು ಕಣ್ತುಂಬಿಕೊಂಡು, ಕುಟುಂಬದವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡು, ಮರೆಯಲಾಗದ ನೆನಪುಗಳನ್ನು ಹೊತ್ತುಕೊಂಡು ತೆರಳುತ್ತಾರೆ.ನೀವು ಕೊಡಗು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡುತ್ತಿದ್ದೀರಾ? ಹಾಗಾದರೆ ಈ ಅದ್ಭುತ ತಾಣವನ್ನು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದನ್ನು ಮರೆಯಬೇಡಿ!
ಈ ಅದ್ಭುತ ತಾಣದ ಸೌಂದರ್ಯ ನಿಮಗೂ ಇಷ್ಟವಾದರೆ ಈ ವಿಡಿಯೋವನ್ನು ಲೈಕ್ ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಶೇರ್ ಮಾಡಿ.
ಇಂತಹ ಅಪರೂಪದ ಪ್ರವಾಸಿ ತಾಣಗಳು, ನಾಡಿನ ವಿಶೇಷತೆಗಳು ಮತ್ತು ಜನರಿಗೆ ತಿಳಿಯದ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ…
ನಿಮ್ಮ ನೆಚ್ಚಿನ ಜನಧ್ವನಿ ನ್ಯೂಸ್!#GoldenTemple #Kushalnagar #Bylakuppe #NamdrolingMonastery #Kodagu #Coorg #GoldenBuddha #BuddhaTemple #TouristPlaces #KarnatakaTourism #CoorgTourism #TravelKannada #ಕರ್ನಾಟಕ #ಕುಶಾಲನಗರ #ಬೈಲಕುಪ್ಪೆ #ಗೋಲ್ಡನ್ ಟೆಂಪಲ್ #ಕೊಡಗು #ಪ್ರವಾಸಿತಾಣ #ಜನಧ್ವನಿನ್ಯೂಸ್ #JanadhwaniNews