Перейти к содержимому

Mangaluru Fishermen Outrage Against Kerala Fisheries Department: ಕರ್ನಾಟಕ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ

TV5 Kannada

0:00 / 0:00

Mangaluru Fishermen Outrage Against Kerala Fisheries Department: ಕರ್ನಾಟಕ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ

78 просмотров · 1 ч назад
TV5 Kannada
2,73 млн подписчиков
78 просмотров · 1 ч назад
Mangaluru Fishermen Outrage Against Kerala Police And Fisheries Department: ಕರ್ನಾಟಕ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangaluru) ಮೀನುಗಾರರ ಮೇಲೆ ನೆರೆಯ ಕೇರಳ (Kerala) ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ದಬ್ಬಾಳಿಕೆ ಮುಂದುವರಿದಿದ್ದು, ಕಳೆದ ಎರಡು ವರ್ಷಗಳಲ್ಲಿ ದಂಡದ ಹೆಸರಿನಲ್ಲಿ ಬರೋಬ್ಬರಿ 9 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಸುಲಿಗೆ ಮಾಡಲಾಗಿದೆ ಎಂದು ಕರುನಾಡ ಮೀನುಗಾರರು ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಮೀನುಗಾರರು 12 ನಾಟಿಕಲ್ ಮೈಲುಗಳವರೆಗೆ ಮುಕ್ತವಾಗಿ ಮೀನುಗಾರಿಕೆ ನಡೆಸಲು ಅವಕಾಶವಿದೆ. ಆದರೆ ಮಂಗಳೂರಿನಿಂದ ಕೇರಳದ ತಲಪಾಡಿ ಗಡಿ ದಾಟುತ್ತಿದ್ದಂತೆ ಕೇರಳ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ. ಲಂಗಾರು ಹಾಕಿದ ಬೋಟ್‌ಗಳಲ್ಲಿ ಮಲಗಿರುವ ಮೀನುಗಾರರನ್ನು ಎಬ್ಬಿಸಿ ಕಿರುಕುಳ ನೀಡುವುದು, ಬೋಟ್‌ಗಳನ್ನು ವಶಕ್ಕೆ ಪಡೆದು ಸತತವಾಗಿ ದಂಡ ವಿಧಿಸುವುದು ಹಾಗೂ ಮೀನುಗಳನ್ನು ಜಪ್ತಿ ಮಾಡುವ ಮೂಲಕ ಕಳೆದ 5 ವರ್ಷಗಳಿಂದ ನಿರಂತರ ದೌರ್ಜನ್ಯ ಎಸಗಲಾಗುತ್ತಿದೆ. ಒಂದೇ ತಿಂಗಳಲ್ಲಿ 5 ರಿಂದ 6 ಬೋಟ್‌ಗಳನ್ನು ವಶಕ್ಕೆ ಪಡೆದು ಟಾರ್ಗೆಟ್ ಇಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮೀನುಗಾರ ಮುಖಂಡರಾದ ರಾಜೇಶ್ ಪುತ್ರನ್ ಹಾಗೂ ಆಸೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳ ಸರ್ಕಾರದ ಈ ದಬ್ಬಾಳಿಕೆಯಿಂದ ಮಂಗಳೂರಿನ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಕರ್ನಾಟಕ ಮೀನುಗಾರಿಕೆ ಇಲಾಖೆ ಮಧ್ಯಪ್ರವೇಶಿಸಿ ಕೇರಳ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ಉಭಯ ರಾಜ್ಯಗಳ ಮೀನುಗಾರರ ನಡುವೆ ಸೌಹಾರ್ದ ವಾತಾವರಣ ನಿರ್ಮಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ಮೀನುಗಾರರ ಮೇಲೆ ಕೇರಳ ದಬ್ಬಾಳಿಕೆ, 9 ಕೋಟಿ ಸುಲಿಗೆಯ ಕರಾಳ ಮುಖ ಹಾಗೂ ಮೀನುಗಾರ ಮುಖಂಡರ ಆಕ್ರೋಶದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ. Fishermen from Mangaluru have raised serious allegations against the Kerala government and its fisheries department, accusing them of continuous harassment and extorting over Rs 9 crores in fines over the past two years. Despite central regulations allowing fishing up to 12 nautical miles, Kerala authorities have been aggressively targeting Karnataka boats crossing the Talapadi border. Fishermen leaders Rajesh Putran and Asif stated that authorities arbitrarily seize boats, harass sleeping crew members, and confiscate catch to extract heavy fines. Fishermen have strongly urged the Karnataka Fisheries Department to intervene immediately and resolve the border dispute. Watch this detailed report capturing the protests by Mangaluru fishermen on TV5 Kannada. #MangaluruFishermen #KeralaHarassment #TalapadiBorder #FishingDispute #KarnatakaFisheries #FishermenProtest #StateNews #BreakingNews #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬