ಬೇಸರದೆಂದೂ ಸದಾಶಿವನೆನ್ನಿ |Besaradendu sadashivanenni
HARIYA CHARANA ಹರಿಯ ಚರಣ
0:00 / 0:00
ಬೇಸರದೆಂದೂ ಸದಾಶಿವನೆನ್ನಿ |Besaradendu sadashivanenni
10 241 просмотр · 7 месяцев назад
HARIYA CHARANA ಹರಿಯ ಚರಣ
9,58 тыс. подписчиков
10 241 просмотр · 7 месяцев назад
#shivarathri
#dasarapadagalu #bhajane #devotionalhits #bhakthi #music
ರಚನೆ : ಪ್ರಸನ್ನ ವೆಂಕಟದಾಸರು
ಎಲ್ಲರೂ ಕೇಳಿ, ಲೈಕ್ ಮಾಡಿ ಶೇರ್ ಮಾಡಿ 🙏ಹರೇ ಶ್ರೀನಿವಾಸ
ಸಾಹಿತ್ಯ :ಬೇಸರದೆಂದು ಸದಾಶಿವನೆನ್ನಿ | ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ |ಪ|
ನಂದಿವಾಹನಾ ನಂದನು ಎನ್ನಿ| ಸುಂದರ ಗಣಪನ ತಂದೆ ಎನ್ನಿ |೧|
ನಂಬೆ ಭವಾಂಬುದಿ ಅಂಬಿಗನೆನ್ನಿ| ಅಂಬಿಕೆಯರಸು ತ್ರಯಂಬಕನೆನ್ನಿ |೨|
ಕರ್ಪರಭಾಂಡ ಕಂದರ್ಪಹರನೆನ್ನಿ| ಸರ್ಪಭೂಷಣ ಸುಖದರ್ಪಣನೆನ್ನಿ |೩|
ಬೇಡಿದ ಭಾಗ್ಯವ ನೀಡುವನೆನ್ನಿ| ಬೇಡನ ಭಕುತಿಗೆ ಕೂಡಿದನೆನ್ನಿ |೪|
ಶಂಭು ಗಜದಚರ್ಮಾಂಬರನೆನ್ನಿ| ಸಾಂಬ ಸುಗುಣ ಕರುಣಾಂಬುಧಿಯೆನ್ನಿ |೫|
ಎಂದಿಗೂ ಭಾವಿಕ ಮಂದಿರನೆನ್ನಿ| ಇಂದುಶೇಖರ ನೀಲಕಂಧರನೆನ್ನಿ |೬|
ದುರ್ದನುಜಾಸುರ ಮರ್ದಕನೆನ್ನಿ| ಕಪರ್ದಿಕೃಪಾಲ ತೇ ವರ್ಧಕನೆನ್ನಿ |೭|
ಶರಣು ಸುರಾರ್ಚಿತ ಚರಣನೆ ಎನ್ನಿ| ಪರಮ ಭಕ್ತರನು ಪೊರೆಯುವನೆನ್ನಿ |೮|
ತ್ರಿಪುರಾಂತಕ ನಿಷ್ಕಪಟನು ಎನ್ನಿ| ಅಪಮೃತ್ಯುಹರ ಖಳರಪಹರನೆನ್ನಿ |೯|
ದಕ್ಷನ ಯಜ್ಞ ವೀಶಿಕ್ಷಕನೆನ್ನಿ| ಪಕ್ಷಿಗಮನ ಭಟರಕ್ಷಕನೆನ್ನಿ |೧೦|
ಈ ಪರಿ ನೆನೆದರೆ ಪಾಪದೂರೆನ್ನಿ| ಶ್ರೀ ಪ್ರಸನ್ವೆಂಕಟೇಶಗೆ ಪ್ರಿಯನೆನ್ನಿ |೧೧|🙏