"ಮಾರಿಕಾಂಬಾ ಮಾತೆ ಭಗವತಿ.... "#navaratrispecial #bhajan #devistuti
Manju Hegde
0:00 / 0:00
"ಮಾರಿಕಾಂಬಾ ಮಾತೆ ಭಗವತಿ.... "#navaratrispecial #bhajan #devistuti
3 628 просмотров · 4 дн. назад
Manju Hegde
852 подписчика
3 628 просмотров · 4 дн. назад
ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಹೆಗಡೆಕಟ್ಟಾ ಇವರಿಂದ ಪ್ರಸ್ತುತಿ
ಮಾರಿಕಾಂಬಾ ಮಾತೆ ಭಗವತಿ
ಸಹ್ಯ ಶಿಖರ ನಿವಾಸಿನಿ|
ಅಭಯದಾಯಿನಿ ಭಯ ನಿವಾರಿಣಿ|
ಸರ್ವ ಸಿದ್ಧಿ ಪ್ರದಾಯಿನಿ|| ಪ||
ಕುಂಕುಮಾಂಕಿತೆ ಕುಸುಮ ಶೋಭಿತೆ|
ವಿಮಲ ವಸನ ವಿಭೂಷಿತೆ|
ಮಂಗಳಾಸನ ಸುಪ್ರತಿಷ್ಠಿತೆ|
ಕರದೊಳಸ್ತ್ರ ವಿರಾಜಿತೆ|| ೧||
ಪರಮ ಪಾವನೆ ಲೋಕ ಪಾಲನೆ|
ಗೈವ ಕರುಣಾ ಸಿಂಧುವೆ|
ನಿರತ ತವಕೃಪೆಯೊಂದೇ ಸಾಕಿನ್ನೇನು
ಬೇಡಲಿ ಮಾತೆಯೆ||೨||
ಅಂಬೆ ನಿನ್ನಯ ಚರಣಕ್ಕೆರಗ್ವೆವು|
ಸಾಂಬಶಿವನಾ ರಾಣಿಯೆ|
ಹಂಬಲಿಸಿ ನಿನ್ನೆಡೆಗೆ ಬಂದೆವು
ಬಿಂಬಾಧರೆ ನೀ ಪಾಲಿಸೆ||೩||
ಮಹಿಷ ಮರ್ದಿನಿ ಮಹಿಯ ಪಾಲಿನಿ|
ಮೋದದಿಂದಲೆ ಸಲಹೆ ನೀ||
ಮೇದಿನಿಯನು ಪೊರೆಯೆ ತಾಯೆ|
ಮಾರಹರನರ್ಧಾಂಗಿಯೆ||೪||