ಸಿದ್ದರಾಮಯ್ಯ-ರಾಹುಲ್ ಗಾಂಧಿ ಮಹತ್ವದ ಭೇಟಿ: ‘ನಿಮ್ಮ ಸೇವೆ ಪಕ್ಷಕ್ಕೆ ಬೇಕು’ ಎಂದ ರಾಹುಲ್? | Suvarna Party Rounds
Asianet Suvarna News
0:00 / 0:00
ಸಿದ್ದರಾಮಯ್ಯ-ರಾಹುಲ್ ಗಾಂಧಿ ಮಹತ್ವದ ಭೇಟಿ: ‘ನಿಮ್ಮ ಸೇವೆ ಪಕ್ಷಕ್ಕೆ ಬೇಕು’ ಎಂದ ರಾಹುಲ್? | Suvarna Party Rounds
1 445 просмотров · 2 часа назад
Asianet Suvarna News
5,65 млн подписчиков
1 445 просмотров · 2 часа назад
ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಹಾಗೂ ನಿಗಮ-ಮಂಡಳಿ ನೇಮಕಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ರಾಹುಲ್ ಗಾಂಧಿ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ರಾಜ್ಯ ರಾಜಕೀಯ, ಖಾಲಿ ಇರುವ ಸಚಿವ ಸ್ಥಾನಗಳು ಹಾಗೂ ನಿಗಮ-ಮಂಡಳಿ ನೇಮಕಾತಿ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಇದೇ ವೇಳೆ, ನಿವೃತ್ತಿ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ, ‘ಪದೇ ಪದೇ ನಿವೃತ್ತಿಯ ಮಾತು ಆಡಬೇಡಿ, ನಿಮ್ಮ ಸೇವೆ ಮತ್ತು ನಾಯಕತ್ವ ಪಕ್ಷಕ್ಕೆ ಅಗತ್ಯವಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ. ವಯಸ್ಸಿನ ಹಿನ್ನೆಲೆಯಲ್ಲಿ ತಾವು ನಿವೃತ್ತಿ ಬಗ್ಗೆ ಮಾತನಾಡಿದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನೂ ಸಿದ್ದರಾಮಯ್ಯ ಭೇಟಿ ಮಾಡಿ, ಎರಡು ಸಚಿವ ಸ್ಥಾನಗಳ ಭರ್ತಿ ಹಾಗೂ ಎಂಎಲ್ಸಿ ನಾಮನಿರ್ದೇಶನದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತ ಸಿದ್ದರಾಮಯ್ಯ ಅವರ ದೆಹಲಿ ಭೇಟಿಗೆ ಯಾವುದೇ ಅಸಮಾಧಾನ ಅಥವಾ ಮುಖ್ಯಮಂತ್ರಿ ಬದಲಾವಣೆ ವಿಚಾರದ ಸಂಬಂಧವಿಲ್ಲ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ರಾಜಣ್ಣ ಪುತ್ರ ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಕಾಣದ ಕೈಗಳು ಕೆಲಸ ಮಾಡಿವೆ’ ಎಂದು ಆರೋಪಿಸಿದ್ದಾರೆ. ರಾಜಣ್ಣ ಅವರನ್ನು ಕಡೆಗಣಿಸಿದರೆ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಸಚಿವ ಸ್ಥಾನ, ನಿಗಮ-ಮಂಡಳಿ ನೇಮಕಾತಿ, ಎಂಎಲ್ಸಿ ನಾಮನಿರ್ದೇಶನ ಹಾಗೂ ಪಕ್ಷದೊಳಗಿನ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ.
ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರಿಯಿರಿ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಪಡೆಯಲು ಸುವರ್ಣ ನ್ಯೂಸ್ ಪಾರ್ಟಿ ರೌಂಡ್ಸ್ ವೀಕ್ಷಿಸಿ.
Suvarna Party Rounds | Ajit Hanamakkanavar | Prashant Natu | Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://youtube.com/live/F1m0ciwMs8c
#MadalVirupakshappa #SupremeCourt #KSDLScam #Lokayukta #KarnatakaPolitics #PartyRounds #AjitHanamakkanavar #KarnatakaNews #SuvarnaNews #KannadaNews #KarnatakaNews #AsianetSuvarnaNews #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews