ಚಾಮರಾಜನಗರ ದಸರಾ, ಸರ್ಕಾರದಿಂದ ಹಣ ಬಿಡುಗಡೆ
DD Chandana News
0:00 / 0:00
ಚಾಮರಾಜನಗರ ದಸರಾ, ಸರ್ಕಾರದಿಂದ ಹಣ ಬಿಡುಗಡೆ
87 просмотров · 4 дня назад
DD Chandana News
112 тыс. подписчиков
87 просмотров · 4 дня назад
ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಚಾಮರಾಜನಗರದಲ್ಲಿ ಮೂರು ದಿನಗಳ ಕಾಲ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಚಿತ್ರನಟ ವಿ. ರವಿಚಂದ್ರ ನ್ ಚಾಲನೆ ನೀಡಿದರು.
ಈ ವೇಳೆ ರೇಷ್ಮೆ, ಪಶುಸಂಗೋಪನೆ ಸಚಿವ ಸಿ. ಪುಟ್ಟರಂಗಶೆಟ್ಟಿ, ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ಮುತ್ತುರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ವಿ. ರವಿಚಂದ್ರನ್, ದಸರಾ ಹಬ್ಬ ಯಾವುದೇ ಬೇಧವಿಲ್ಲದೇ ಸರ್ವರೂ ಆಚರಿಸುವ ವಿಶಿಷ್ಟ ಆಚರಣೆಯಾಗಿದ್ದು, ಎಲ್ಲರೂ ಒಂದಾಗಿ ನಿತ್ಯ ದಸರಾ ಆಚರಿಸುವಂತಾಗಲಿ ಎಂದರು.
ಸಿ. ಪುಟ್ಟರಂಗಶೆಟ್ಟಿ, ಚಾಮರಾಜಗರದಲ್ಲಿ ದಸರಾ ಉತ್ಸವ ನಡೆಸಬೇಕೆಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿತ್ತು. ಜಿಲ್ಲೆಯ 5 ತಾಲೂಕುಗಳು ಬರಪೀಡಿತವಾಗಿರುವ ಕಾರಣ ಕಳೆದ ಬಾರಿ ಸಾಧ್ಯವಾಗಲಿಲ್ಲ. ಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಶ್ರೀರೂಪ, ಕಲಾವಿದರ ಮನವಿ ಮೇರೆಗೆ ದಸರಾ ಆಚರಣೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಾರದಲ್ಲಿ ಸಿದ್ಧತೆ ಮಾಡಿಕೊಂಡು, ದಸರಾ ಹಬ್ಬಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಇದೇ ವೇಳೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
#LiveDDChandanaNews #DDChandanaNews #DDChandana #DDKannada