Перейти к содержимому

Omkar Sambhrama 2026 Teaser

Omkar Samithi

0:00 / 0:00

Omkar Sambhrama 2026 Teaser

114 просмотров · 1 дн. назад
Omkar Samithi
13,6 тыс. подписчиков
114 просмотров · 1 дн. назад
ಓಂಕಾರ ಸಮಿತಿಯು ಭಕ್ತಿ, ಜ್ಞಾನ ಮತ್ತು ಸಂಗೀತ ಎಂಬ ತ್ರಿವೇಣಿ ಸಂಗಮದ ತತ್ವದಡಿ ೧೫ನೇ ವರ್ಷದ ಮೈಲಿಗಲ್ಲಿಗೆ ಹೆಜ್ಜೆ ಇಡುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಆರಾಧ್ಯ ದೇವ ಶ್ರೀ ಓಂಕಾರ ಆಂಜನೇಯ ಸ್ವಾಮಿಯ ೧೫ನೇ ಪೂಜಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು "ಓಂಕಾರ ಸಂಭ್ರಮ" ಎಂಬ ವಿಶೇಷ ಸಂಪೂರ್ಣ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಹಮ್ಮಿಕೊಳ್ಳಲಾಗಿದೆ. ಓಂಕಾರ ಆಂಜನೇಯ ಸ್ವಾಮಿಯ ಪೂಜೆಯು ದಿನಾಂಕ ೧೮-ಡಿಸೆಂಬರ್-೨೦೨೬ ರ ಬೆಳಿಗ್ಗೆ ೮:೦೦ಘಂಟೆಯಿಂದ ಹರಿವಾಯುಸ್ತುತಿ ಪಾರಾಯಣ, ಅಭಿಷೇಕ, ಅಲಂಕಾರ ಪೂಜೆ, ದೇವಳ ಸಂಕೀರ್ತನೆ, ಚಂಡೆವಾದ್ಯ, ಮಹಾಮಂಗಳಾರತಿ, ಮಹಾಪ್ರಸಾದ ಕಾರ್ಯಕ್ರಮಗಳು ಯಥಾಪ್ರಕಾರ ಪ್ರತಿವರ್ಷದಂತೆ ನಡೆಯುವವು. ಓಂಕಾರ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಈ ಕೆಳಗಿನಂತಿವೆ: ಬೆಳಗಿನ ಪೂಜಾ ಸಮಯದಲ್ಲಿ ಶ್ರೀ ಅನಂತರಾಜ್ ಮಿಸ್ತ್ರಿ ಮತ್ತು ತಂಡದವರಿಂದ ಭಕ್ತಿಭಾವದ "ನಾದಸೇವೆ ಭಜನೆ" ಕಾರ್ಯಕ್ರಮ. ಸಂಜೆ ೬:೦೦ ಘಂಟೆಯಿಂದ: ಖ್ಯಾತ ಗಾಯಕ ಶ್ರೀ ಶ್ರೀಹರ್ಷ ಮತ್ತು ತಂಡದವರಿಂದ ಸನಾತನ ಸಂಸ್ಕೃತಿಯ ಸಾಂಸ್ಕೃತಿಕ ಸಿರಿವಂತಿಕೆಯನ್ನು ಬಿಂಬಿಸುವ "ಭಜನ ಭಾರತ" ವಿಶೇಷ ಸಂಗೀತ ಕಾರ್ಯಕ್ರಮ. ತಾವೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ಓಂಕಾರ ಆಂಜನೇಯ ಸ್ವಾಮಿಯ ಮಹಾಪೂಜೆಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ, ಸಂಪೂರ್ಣ ದಿನದ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಬೇಕಾಗಿ ವಿನಮ್ರ ವಿನಂತಿ