ಅನುಭವದ ಧ್ವನಿಗಳಿಗೆ ಕಿವಿಯಾಗೋಣ, ನೈಜ ಬದಲಾವಣೆ ತರೋಣ: ಬಳ್ಳಾರಿಯಲ್ಲಿ ಮನಸ್ಸಿನ ಆರೋಗ್ಯ ಕುರಿತು ಜಾಗೃತಿ
DD Chandana News
0:00 / 0:00
ಅನುಭವದ ಧ್ವನಿಗಳಿಗೆ ಕಿವಿಯಾಗೋಣ, ನೈಜ ಬದಲಾವಣೆ ತರೋಣ: ಬಳ್ಳಾರಿಯಲ್ಲಿ ಮನಸ್ಸಿನ ಆರೋಗ್ಯ ಕುರಿತು ಜಾಗೃತಿ
63 просмотра · 2 часа назад
DD Chandana News
111 тыс. подписчиков
63 просмотра · 2 часа назад
ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಬಳ್ಳಾರಿಯಲ್ಲಿಂದು ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ‘ಅನುಭವದ ಧ್ವನಿಗಳಿಗೆ ಕಿವಿಯಾಗೋಣ, ನೈಜ ದ್ವನಿಗಳಿಂದ, ನೈಜ ಬದಲಾವಣೆ ’ಕಾರ್ಯಕ್ರಮವನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾದ ಎಚ್. ಎ. ಮೋಹನ್ ಉದ್ಘಾಟಿಸಿದರು.
ಈ ವೇಳೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರ ರಾಜೇಶ್ ಎನ್. ಹೊಸಮನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಲಕಾಂದ ಡಿ. ಮಾಳಗಿ, ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ. ವಿರೇಂದ್ರ ಕುಮಾರ್, ಕೇಂದ್ರ ಕಾರಾಗೃಹದ ಮನೋರೋಗ ತಜ್ಞ ಡಾ. ನಂದಕಿಶೋರ್ ರೆಡ್ಡಿ, ಬಿಐಎಂಟಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ಯಶವಂತ್ ಭೂಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಮಾನಸಿಕ ಚಿಕಿತ್ಸೆ ಕುರಿತ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಬಳಿಕ ನ್ಯಾಯಾಧೀಶರಾದ ಎಚ್. ಎ. ಮೋಹನ್, ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಕೌಶಲ್ಯವನ್ನು ವಿದ್ಯಾರ್ಥಿಗಳು ಮತ್ತು ಯುವಜನತೆ ಕಲಿಯಬೇಕಾಗಿದೆ. ಭ್ರಮಾಲೋಕಕ್ಕೆ ಹೋಗದೇ ವಾಸ್ತವ ಜಗತ್ತಿನಲ್ಲಿ ಬದುಕಿದರೆ, ಸಮಸ್ಯೆಯಿಂದ ಪಾರಾಗಬಹುದು ಎಂದು ತಿಳಿಸಿದರು.
ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನಿ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ. ದೇಹ ಮತ್ತು ಮನಸ್ಸಿನ ಮೇಲೆ ಏಕ್ರಾಗತೆ ಸಾಧಿಸಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.
ಡಾ. ನಂದಕಿಶೋರ್ ರೆಡ್ಡಿ , ಮಾನಸಿಕ ಕಾಯಿಲೆಗಳಿಗೆ ಮದ್ದಿಲ್ಲ ಎನ್ನುವ ಭ್ರಮೆಯಿಂದ ಬರಬೇಕು. ಎಲ್ಲ ರೋಗಕ್ಕೂ ಚಿಕಿತ್ಸೆ ಸಮಾಲೋಚನೆ ಇದೆ. ಸೂಕ್ತ ಸಂದರ್ಭದಲ್ಲಿ ಔಷಧೋಪಚಾರ, ತಜ್ಞರ ಸಲಹೆ ಪಡೆದರೆ, ಮಾನಸಿಕ ಕಾಯಿಲೆಯಿಂದ ಹೊರಬರಲು ಸಾಧ್ಯ ಎಂದರು.
ಡಾ. ಯಶವಂತ್ ಭೋಪಾಲ್, ಯುವಜನತೆ ಇತ್ತೀಚೆಗೆ ಹೆಚ್ಚಾಗಿ ಮೊಬೈಲ್ ವೀಕ್ಷಣೆಗೆ ಒಳಗಾಗಿದ್ದು, ಅದು ಅಭ್ಯಾಸವಾಗದೇ ಒಳ್ಳೆಯ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗಬೇಕು ಎಂದು ತಿಳಿಸಿದರು.
ದೂರದರ್ಶನದೊಂದಿಗೆ ಡಾ. ವಿರೇಂದ್ರ ಕುಮಾರ್, ಒತ್ತಡದ ಜೀವನದಲ್ಲಿ ಬದುಕುವುದರಿಂದ ಬಹುತೇಕ ಸಮಯಗಳಲ್ಲಿ ಮಾನಸಿಕ ಕಾಯಿಲೆ ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವೇ ಟೆಲಿ ಮಾನಸ್ ಮೂಲಕ ಉಚಿತ ಸಹಾಯವಾಣಿ 14416 ಗೆ ಕರೆ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
#LiveDDChandanaNews #DDChandanaNews #DDChandana #DDKannada