Перейти к содержимому

ಕಟೀಲು ಕ್ಷೇತ್ರ ದುರ್ಗಾ ಪರಮೇಶ್ವರಿ ಬಗ್ಗೆ ನಿಮಗೆಷ್ಟು ಗೊತ್ತು@MITKANNADA

ನಿಮ್ಮ ಭರವಸೆ

0:00 / 0:00

ಕಟೀಲು ಕ್ಷೇತ್ರ ದುರ್ಗಾ ಪರಮೇಶ್ವರಿ ಬಗ್ಗೆ ನಿಮಗೆಷ್ಟು ಗೊತ್ತು@MITKANNADA

3 189 просмотров · 3 месяца назад
ನಿಮ್ಮ ಭರವಸೆ
1,12 тыс. подписчиков
3 189 просмотров · 3 месяца назад
‪@NimmaBharavase‬ ವೈವಸ್ವತ ಮನ್ವಂತರದ ಚತಯುರ್ಗದ ಇಪ್ಪಂತೆಂಟನೆಯ ಪರ್ಯಾಯದ ಕಲಿಯುಗದ ಪ್ರಥಮ ಪಾದ. ಹೊಳೆ ತೊರೆ ಕೆರೆ ಬಾವಿಗಳ ಜಲ ಸಮೃದ್ಧಿಯಿಂದ ಹೂ ಗಿಡ ಬಳ್ಳಿ ಮರಗಳ ವನ ಸಮೃದ್ಧಿಯಿಂದ ನಳ ನಳಿಸಬೇಕಾದ ಭೂಮಿ ಭೀಕರ ಬರಗಾಲದಿಂದ ಭಣಗುಟ್ಟುತ್ತಿದೆ. ಕುಡಿಯಲು ನೀರಿಲ್ಲದೆ ತಿನ್ನಲು ಆಹಾರವಿಲ್ಲದೆ ಪಶು ಪಕ್ಷಿ ಮೃಗಗಳೂ ಮನುಷ್ಯನೂ ಹಸಿವೆಯಿಂದ ಕಂಗಾಲಾಗಿದ್ದಾರೆ. ಎಲ್ಲೆಂದರಲ್ಲಿಹಸಿವೆಯೇ ಹೇತುವಾಗಿ ಸತ್ತ ಹೆಣಗಳ ಬಣವೆಯಿಂದ ಕರುಳೊಣಗಿದ ಜೀವಿಗಳ ಆರ್ತನಾದದಿಂದ ಇಡಿಯ ಪೃಥ್ವಿಯೇ ತತ್ತರಿಸುತ್ತಿದೆ. ನಿರ್ಜರಾರಣ್ಯದಲ್ಲಿರುವ ಆಮಲಕತೀರ್ಥ (ನೆಲ್ಲಿತೀರ್ಥ) ದ ಗುಹೆಯಲ್ಲಿ ಧ್ಯಾನಮಗ್ನನಾಗಿದ್ದ ಜಾಬಾಲಿ ಮಹರ್ಷಿಗೆ ದೈವೇಚ್ಛೆಯಿಂದ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಅಂತರಂಗದಿಂದ ಬಹಿರಂಗಕ್ಕೆ ಬಂದ ಮಹರ್ಷಿ ಹಸಿವು ನೀರಡಿಕೆಗಳಿಂದ ಸಾಯುತ್ತಿರುವವರ ಸಂಕಟವನ್ನು ಲೋಕಕ್ಕೆ ಬಂದ ಬರಗಾಲವನ್ನು ಯಜ್ಞದ ಮೂಲಕ ನಿವಾರಿಸುತ್ತೇನೆಂದು ಸಂಕಲ್ಪಿಸಿದ. ಆದರೆ ನೀರಿಗೆ ಬರವಿರುವ ಭೂಮಿಯಲ್ಲಿ ಬಹುದ್ರವ್ಯ ಸಾಧ್ಯವಾದ ಯಜ್ಞವನ್ನು ಮಾಡುವುದಾದರೂ ಹೇಗೆ? ಯಜ್ಞಕ್ಕೆ ಬೇಕಾದ ಸಂಭಾರಗಳನ್ನು ಸಂಗ್ರಹಿಸುವುದು ಹೇಗೆ? ಒಂದು ಕ್ಷಣಕಾಲ ಚಿಂತಿಸಿದ ಜಾಬಾಲಿ ಮುನಿ ಯೋಗ ಬಲದಿಂದ ತೇಜ: ಶರೀರಿಯಾಗಿ ಸ್ವರ್ಗಲೋಕಕ್ಕೆ ತೆರಳಿದ. ನೂರು ಯಾಗಗಳನ್ನು ಆಚರಿಸಿ ಸ್ವರ್ಗದ ಅಧಿಪತ್ಯವನ್ನು ಸಂಪಾದಿಸಿದ ಪುರಂದರನಲ್ಲಿ ಮರ್ತ್ಯರ ಸಂಕಟವನ್ನು ತಿಳುಹಿಸಿ“ಕ್ಷಾಮ ನಿವೃತ್ತಿಗಾಗಿ ಲೋಕ ಕ್ಷೇಮಕ್ಕಾಗಿ ಯಜ್ಞ ಮಾಡುವ ಸಂಕಲ್ಪ ಮಾಡಿದ್ದೇನೆ. ಹೋಮಧೇನುವಾಗಿ ಕಾಮಧೇನುವನ್ನು ಕಳುಹಿಸಿಕೊಡಬೇಕೆಂದು” ಪ್ರಾರ್ಥಿಸಿದ.