Перейти к содержимому

ಗುರುವಿನ ಭಜನೆ | ಸಾಕೋ ಶ್ರೀ ಗುರು ಭವದ ವ್ಯಾಕುಲಾಗ್ನಿಯು | #familyperformance #mothersonduo

Abhi&Asha🎶

0:00 / 0:00

ಗುರುವಿನ ಭಜನೆ | ಸಾಕೋ ಶ್ರೀ ಗುರು ಭವದ ವ್ಯಾಕುಲಾಗ್ನಿಯು | #familyperformance #mothersonduo

7 744 просмотра · 1 год назад
Abhi&Asha🎶
4,23 тыс. подписчиков
7 744 просмотра · 1 год назад
#bhaktibhajan #kannadamusic #bhaktigeete ಸಾಕೋ ಶ್ರೀ ಗುರು ಭವದ ವ್ಯಾಕುಲಾಗ್ನಿಯು || ನೂಕಬೇಡ ಭವದ ಬಲೆಗೆ || ಸಾಕು ಸಾಕು ಸೋತೆ ಮತ್ತೆ || P || ಮೆತ್ತಗಿರುವ ಕಾಯವಿದರೊಳ್ ಮೊತ್ತವಾಗಿರುವ ನೋವು || ಮತ್ತು ಬರಿಸುವೀ ಶರೀರ ಇತ್ತು ಕಷ್ಟಕ್ಕಿಳಿಸ ಬೇಡ || 1 || ಎಳೆಯ ತನದಿ ಮುಗ್ಧ ಮನವು ಬಲಿದು ಹರೆಯದಲ್ಲಿ ಮದವು || ಇಳಿವಯದೊಳ್ ರೋಗರುಜಿನ ಗಳಿಗೆ ಸಿಲುಕಿಕೊಳುವ ಜನುಮ || 2 || ಕಣ್ಣು ಮುಚ್ಚಿಕೊಂಡ ಮೇಲೆ ಬಣ್ಣ ಬಣ್ಣದಂತಾ ಕನಸು || ಕಣ್ಣು ಬಿಟ್ಟು ನೋಡ್ದ ಮೇಲೆ ಮಣ್ಣುಗೂಡಿಗೊಳುವ ಕನಸು || 3 || ಹುಟ್ಟಿ ಬಂದೆ ಹೇಗೋ ಏನೋ ಶ್ರೇಷ್ಠ ಮನುಜ ಜನುಮದಲ್ಲಿ|| ಕೆಟ್ಟು ಹೋಗದಂತೆ ನಿನ್ನ ಶ್ರೇಷ್ಠ ಪದವ ಕೊಟ್ಟು ಸಲಹೊ || 4 || ಮರಳು ಮನದ ದಾಸನಾಗಿ ಬರಡು ದೇಹ ಕುಣಿವುದೆನಗೆ || ಕರಟೆ ಒಡಕಿನಲ್ಲಿ ಕಪಿಯು ಬಾಲ ಸಿಗಿಸಿಕೊಂಡ ವ್ಯಥೆಯು || 5 || ಶರಣು ಶರಣು ರಮಾನಂದ ಕರುಣನಿಧಿ ಗುರುದೇವ || ಪ್ರೇಮ ಗುರುವೆ ನಿನ್ನ ದಿವ್ಯ ಚರಣ ದಾಸನಾಗಿ ಮಾಡು || 6 ||