#ಗೊಲ್ಲತಿಯಾರೆಲ್ಲಕೂಡಿಎನ್ನಮೇಲೇ #krishnajanmashtami #gollatiyarellakudiEnnamele#ಶ್ರೀಪಾದರಾಜರು🌹#lyrics👇👇
Veena Krishnappa
0:00 / 0:00
#ಗೊಲ್ಲತಿಯಾರೆಲ್ಲಕೂಡಿಎನ್ನಮೇಲೇ #krishnajanmashtami #gollatiyarellakudiEnnamele#ಶ್ರೀಪಾದರಾಜರು🌹#lyrics👇👇
53 просмотра · 7 дней назад
Veena Krishnappa
513 подписчиков
53 просмотра · 7 дней назад
#kannadadevidevotionalsongs
#ಗೊಲ್ಲತಿಯಾರೆಲ್ಲಕೂಡಿಎನ್ನಮೇಲೇ#ಇಲ್ಲದಸುದ್ದಿಪುಟ್ಟಿಸಿ #gollatiyarellakudiEnnamele🌹#ಶ್ರೀಪಾದರಾಜರು🌹#ರಂಗವಿಠಲ #krishnabhajan
#krishnashtamispecial #krishnasongs #ಕೃಷ್ಣಾಷ್ಟಮಿ #devotionalsong #devotional #devotionalsongs #dasarapadagalu #dasarapada #dasasahitya #devaranama #shripadarajaru #ರಂಗವಿಠಲ rangavithala #krishnabhakti #ಕೃಷ್ಣ
#rarebhajans #rare #easybhajans #krishnashtami
for more rare songs, easy bhajans, devaranama and dasarapada please do like, share, and Subscribe my youtube channel.
@veenakrishnappa6010
ಹಾಡು.. ಗೊಲ್ಲತಿಯಾರೆಲ್ಲ ಕೂಡಿ ಎನ್ನ ಮೇಲೇ.. 🙏
ರಚನೆ.. ಶ್ರೀಪಾದ ರಾಜರು. 🙏
ಅಂಕಿತ.. ರಂಗ ವಿಠಲ.
ಗಾಯಕರು.. ಶ್ರೀಮತಿ ವೀಣಾ ಕೃಷ್ಣಪ್ಪ.
lyrics /ಸಾಹಿತ್ಯ. (kannada and English )
ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ
ಕಳ್ಳನೆಂದು ದೂರುತಾರೆ ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯೆ ||ಪ||
ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆ
ಕೆರೆಯೇನೆ ಹೇಳಮ್ಮಯ್ಯ
ಕರೆದು ಅಣ್ಣನ ಕೇಳಮ್ಮ ಉಂಟಾದರೆ
ಒರಳಿಗೆ ಕಟ್ಟಮ್ಮಯ್ಯ ||೧||
ಮೀಸಲು ಬೆಣ್ಣೆಯನು ಮೆಲುವುದದು ಎನಗೆ
ದೋಷವಲ್ಲವೇನಮ್ಮಯ್ಯ
ಆಸೆ ಮಾಡಿದರೆ ದೇವರು ಕಣ್ಣ
ಮೋಸದಿ ಕುಕ್ಕೋನಮ್ಮಯ್ಯ ||೨||
ಅಟ್ಟವನೇರಿ ಹಿಡಿವುದು ಅದು ಎನಗೆ
ಕಷ್ಟವಲ್ಲವೆ ಹೇಳಮ್ಮಯ್ಯ ನೀ
ಕೊಟ್ಟ ಹಾಲು ಕುಡಿಯಲಾರದೆ ನಾನು
ಬಟ್ಟಲೊಳಗಿಟ್ಟು ಪೋದೆನೆ ||೩||
ಪುಂಡುತನ ಮಾಡಲು ನಾನು ದೊಡ್ಡ
ಗಂಡಸೇನೆ ಹೇಳಮ್ಮಯ್ಯ ಎನ್ನ
ಕಂಡವರು ದೂರುತಾರೆ ಗೋಪಮ್ಮ ನಾ ನಿನ್ನ
ಕಂದನಲ್ಲವೇನೆ ಅಮ್ಮಯ್ಯ ||೪||
ಉಂಗುರದ ಕರದಿಂದ ಗೋಪಮ್ಮ ತನ್ನ
ಶೃಂಗಾರದ ಮಗನೆತ್ತಿ
ರಂಗವಿಠಲನ ಪಾಡಿ ಉಡುಪಿನ ಉ-
ತ್ತುಂಗ ಕೃಷ್ಣನ ತೂಗಿದಳು ||೫||
***
Gollatiyarella kudi enna mele illada suddi puttisikallanendu
Durutare gopi enna kollabekemba bageye ||pa||
Haraviya halu kudiyalu enna hotte
Kereyene helammayya
Karedu annana kelamma untadare
Oralige kattammayya ||1||
Misalu benneyanu meluvudadu enage
Doshavallavenammayya
Ase madidare devaru kanna
Mosadi kukkonammayya ||2||
Attavaneri hidivudu adu enage
Kashtavallave helammayya ni
Kotta halu kudiyalarade nanu
Battalolagittu podene ||3||
Pundutana madalu nanu dodda
Gandasene helammayya enna
Kandavaru durutare gopamma na ninna
Kandanallavene ammayya ||4||
Ungurada karadinda gopamma tanna
Srungarada maganetti
Rangavithalana padi udupina u-
Ttunga krushnana tugidalu ||5||
***