ನಗೆಯು ಬರುತಿದೆ || NAGEYU BARUTIDE || @gauravdshetty
DHWANI SOUNDS
0:00 / 0:00
ನಗೆಯು ಬರುತಿದೆ || NAGEYU BARUTIDE || @gauravdshetty
30 624 просмотра · 2 года назад
DHWANI SOUNDS
3,25 тыс. подписчиков
30 624 просмотра · 2 года назад
ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ ||ಪ ||
ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು || ಅ. ಪ||
ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಣಿಸುತಿಹರ ಕಂಡು ||
ಪತಿಯ ಸೇವೆ ಬಿಟ್ಟು ಪರ-
ಪತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು ||
ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷಯಪುಂಜನಾಗಿ
ಸ್ವಾಮಿ ಪುರಂದರ ವಿಟ್ಠಲನ ನಾಮವ
ನೆನೆಯುವವರ ಕಂಡು ||