ಏಕ ಶಿಲೆಯಲ್ಲಿ ಎಲ್ಲೋರಾ ಶಿಲ್ಪ ಜಗತ್ತನ್ನು ಸೃಷ್ಟಿಸಿದ್ದು ಅನ್ಯಗ್ರಹ ಜೀವಿಗಳಾ? Mystery of Ellora Caves | Part-3
Saral Jeevan
0:00 / 0:00
ಏಕ ಶಿಲೆಯಲ್ಲಿ ಎಲ್ಲೋರಾ ಶಿಲ್ಪ ಜಗತ್ತನ್ನು ಸೃಷ್ಟಿಸಿದ್ದು ಅನ್ಯಗ್ರಹ ಜೀವಿಗಳಾ? Mystery of Ellora Caves | Part-3
2 025 просмотров · 4 года назад
Saral Jeevan
578 тыс. подписчиков
2 025 просмотров · 4 года назад
ಏಕ ಶಿಲೆಯಲ್ಲಿ ಎಲ್ಲೋರಾ ಶಿಲ್ಪ ಜಗತ್ತನ್ನು ಸೃಷ್ಟಿಸಿದ್ದು ಅನ್ಯಗ್ರಹ ಜೀವಿಗಳಾ? Mystery of the Great Ellora Caves | Part-3 | Adbhuta Bharata | Saral Jeevan
ಜಗತ್ತಿಗೆ ತಂತ್ರಜ್ಞಾನವನ್ನು ಪರಿಚಯಿಸಿದ ಭವ್ಯ ಭಾರತದ ರೋಚಕ ಕಥನ. ಪ್ರಾಚೀನ ನಾಡಿನ ಅತ್ಯದ್ಬುತ ನಿರ್ಮಾಣಗಳಲ್ಲಿ ಅಡಗಿರೋ ರಹಸ್ಯಗಳ ಅನಾವರಣ. ಇಂದಿನ ಅತ್ಯಾಧುನಿಕ ವಿಜ್ಞಾನಕ್ಕೂ ಸವಾಲೆಸಗುವ ಮಹಾದಚ್ಚರಿಗಳ ಮಂಥನ. ಇದುವೇ “ಅದ್ಭುತ ಭಾರತ”.
ಎಲ್ಲೋರಾದ ಗುಹೆಗಳ ನಿರ್ಮಾಣದ ಕುರಿತು ವಿಭಿನ್ನ ಅಭಿಪ್ರಾಯಗಳು ಚಾಲ್ತಿಯಲ್ಲಿವೆ. ಎಲ್ಲೋರಾ ಗುಹೆಗಳನ್ನ ಮಾನವರು ನಿರ್ಮಿಸಿಯೇ ಇಲ್ಲ ಅನ್ನೋದು ವಿದೇಶಿಗರ ತಜ್ಞರ ವಾದ. ವಿಶ್ವದ ಯಾವುದೇ ಪುರಾತನ ದೇಗುಲಗಳು ಮತ್ತು ಸ್ಮಾರಕಗಳನ್ನು ನಿರ್ಮಿಸಿರೋದು ತಳಮಟ್ಟದಿಂದ. ಅಂದರೆ, ಬೇರೆ ಬೇರೆ ತಳ ವಿನ್ಯಾಸಗಳನ್ನು ಜೋಡಿಸಿ, ಯಾವುದೇ ದೇಗುಲ, ಸ್ಮಾರಕಗಳನ್ನು ನಿರ್ಮಿಸಿರುವುದು ಸಾಮಾನ್ಯವಾದ ಪದ್ಧತಿ.
ಆದರೆ, ಎಲ್ಲೋರಾದ ಇಡೀ ಕೆತ್ತನೆಯ ರೀತಿಯೇ ವಿಭಿನ್ನ. ಒಂದು ಸಣ್ಣ ಮೂರ್ತಿಯನ್ನು ಕೆತ್ತಬೇಕಾದರೂ ಶಿಲೆಯ ಆಯ್ಕೆ ಬಹಳ ಮುಖ್ಯವಾಗುತ್ತೆ. ಒಂದು ವೇಳೆ ಶಿಲೆಯ ಆಯ್ಕೆಯಲ್ಲಿ ತಪ್ಪಾದರೆ, ಆ ಶಿಲೆಯಿಂದ ಕೆತ್ತೋಕೆ ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಇಲ್ಲಿ ಅಚ್ಚರಿಯ ಸಂಗತಿ ಎಂದರೆ, ಶಿಲೆಯ ಆಯ್ಕೆಯಲ್ಲಿ, ಶಿಲ್ಪಿಗಳಲ್ಲಿ ಇರುವ ಅದ್ಭುತ ಜ್ಞಾನ. ಏಕೆಂದರೆ ಎಲ್ಲೋರಾದ ಗುಹಾಂತರ ದೇವಾಲಯಗಳು ನಿರ್ಮಾಣವಾಗಿರೋದು ಏಕಶಿಲೆ ಬೆಟ್ಟದಿಂದ. ಒಂದೊಂದು ಪರ್ವತ ಶಿಲೆಯಿಂದ ಇಷ್ಟೊಂದು ಕರಾರುವಕ್ಕಾಗಿ ದೇವಾಲಯಗಳನ್ನು ನಿರ್ಮಿಸಿರೋದು, ಅಷ್ಟೊಂದು ಅದ್ಭುತವಾಗಿ ಶಿಲ್ಪಗಳನ್ನು ಕೆತ್ತೋದು ಸಾಮಾನ್ಯದ ಮಾತಲ್ಲ.
ಎಲ್ಲೋರಾದ ಗುಹೆಗಳನ್ನು ನೋಡಿದ ಯಾರಿಗಾದರೂ, ಇದನ್ನು ಮಾನವ ನಿರ್ಮಾಣ ಅಂತ ನಂಬೋದು ತುಂಬಾ ಕಷ್ಟವಾಗುತ್ತೆ. ಬೃಹತ್ ಬೆಟ್ಟವನ್ನೇ ಕೇವಲ ಉಳಿಯಿಂದ ಕೊರೆಯೋದು ಅಂದರೆ ಹುಡುಕಾಟವಾ. ಇದರ ಹಿಂದೆ ಅತ್ಯಾಧುನಿಕ ತಂತ್ರಜ್ಞಾನ ಇರಲೇಬೇಕೆಂದು ಹಲವರ ವಾದ. ಮತ್ತೆ ಕೆಲವರು, ಎಲ್ಲೋರಾ ದೇವಾಲಯಗಳ ಹಿಂದೆ ಅನ್ಯಗ್ರಹ ಜೀವಿಗಳ ಕೈವಾಡ ಇರಬಹುದೆಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಹಾಗಾದರೆ, ಈ ವಾದಗಳಲ್ಲಿ ಯಾವುದು ಸತ್ಯ? ಯಾವುದು ಮಿಥ್ಯ ಎನ್ನುವುದು ಇಂದಿಗೂ ತಿಳಿಯದು.
#saraljeevan #adbhutabharata #elloracaves #history #mysteryofelloracaves #ಸರಳಜೀವನ #ಎಲ್ಲೋರಗುಹೆಗಳು
Subscribe to Saral Jeevan Hindi:
/ @saraljeevanhindi