ಎಲ್ಲೋರಾ ದೇವಾಲಯಗಳ ನಿರ್ಮಾಣಕ್ಕೆ ಕಾರಣವೇನು ಗೊತ್ತಾ? Mystery of the Great Ellora Caves | Part-2
Saral Jeevan
0:00 / 0:00
ಎಲ್ಲೋರಾ ದೇವಾಲಯಗಳ ನಿರ್ಮಾಣಕ್ಕೆ ಕಾರಣವೇನು ಗೊತ್ತಾ? Mystery of the Great Ellora Caves | Part-2
1 097 просмотров · 4 года назад
Saral Jeevan
578 тыс. подписчиков
1 097 просмотров · 4 года назад
ಎಲ್ಲೋರಾ ದೇವಾಲಯಗಳ ನಿರ್ಮಾಣಕ್ಕೆ ಕಾರಣವೇನು ಗೊತ್ತಾ? Mystery of the Great Ellora Caves | Part-2 | Adbhuta Bharata | Saral Jeevan
ಜಗತ್ತಿಗೆ ತಂತ್ರಜ್ಞಾನವನ್ನು ಪರಿಚಯಿಸಿದ ಭವ್ಯ ಭಾರತದ ರೋಚಕ ಕಥನ. ಪ್ರಾಚೀನ ನಾಡಿನ ಅತ್ಯದ್ಬುತ ನಿರ್ಮಾಣಗಳಲ್ಲಿ ಅಡಗಿರೋ ರಹಸ್ಯಗಳ ಅನಾವರಣ. ಇಂದಿನ ಅತ್ಯಾಧುನಿಕ ವಿಜ್ಞಾನಕ್ಕೂ ಸವಾಲೆಸಗುವ ಮಹದಚ್ಚರಿಗಳ ಮಂಥನ. ಇದುವೇ “ಅದ್ಭುತ ಭಾರತ”.
ಎಲ್ಲೋರಾದ ಪ್ರಸಿದ್ಧ ಕೈಲಾಸನಾಥ ದೇಗುಲವನ್ನು ಕಟ್ಟಿದ್ದು ಯಾರು? ಇದು ನಿರ್ಮಾಣವಾಗಿದ್ದು ಯಾವಾಗ? ನಿರ್ಮಾಣ ಕಾರ್ಯ ಯಾವಾಗ ಪೂರ್ಣವಾಯಿತು? ಎನ್ನುವುದು ಹಲವು ಕುತೂಹಲಕಾರಿ ಸಂಗತಿಗಳಿವೆ. ರಾಷ್ಟ್ರಕೂಟರ ದೊರೆ ಮೊದಲನೇ ಕೃಷ್ಣರಾಜ, ಕ್ರಿ.ಶ. 756 ರಲ್ಲಿ ಈ ಕೈಲಾಸ ದೇಗುಲವನ್ನು ಕಟ್ಟಿಸಿದ ಎಂದು ಒಂದು ದಾಖಲೆ ಹೇಳುತ್ತೆ. ಆದರೆ, ಕ್ರಿ.ಶ. 735 ರಲ್ಲಿ ಈ ಕೃಷ್ಣರಾಜನ ಸೋದರಳಿಯ ದಂತಿದುರ್ಗ ದೇಗುಲ ನಿರ್ಮಿಸೋಕೆ ಶುರು ಮಾಡಿದನೆಂದು ಮತ್ತೊಂದು ಐತಿಹಾಸಿಕ ದಾಖಲೆಯ ಉಲ್ಲೇಖ. ಈ ಅದ್ಭುತ ಶಿಲ್ಪದ ಹಿಂದೆ ರೋಚಕ ಕಥೆಯಿದೆ.
15ನೇ ಶತಮಾನದಲ್ಲಿ ಬರೆಯಲ್ಪಟ್ಟ ʼಕಥಾ ಕಲ್ಪತರುʼ ಗ್ರಂಥದಲ್ಲಿ ಈ ದೇಗುಲದ ನಿರ್ಮಾಣಕ್ಕೆ ಕಾರಣ ಏನು ಅನ್ನುವುದನ್ನು ಉಲ್ಲೇಖಿಸಲಾಗಿದೆ. ಆ ಪ್ರಕಾರ, ಕೈಲಾಸನಾಥ ಮಂದಿರ ಕಟ್ಟುವುದಕ್ಕೆ ಕಾರಣವಾಗಿದ್ದು ಕೃಷ್ಣರಾಜನ ರಾಣಿಯಂತೆ. ಅದೊಮ್ಮೆ ಕೃಷ್ಣರಾಜ ವಾಸಿಯಾಗದ ಕಾಯಿಲೆಗೆ ತುತ್ತಾಗಿದ್ದ. ಆಗ ಆತನ ರಾಣಿ ತನ್ನ ಪತಿಯ ಕಾಯಿಲೆಯ ವಾಸಿ ಮಾಡಿದರೆ ಶಿವನಿಗೊಂದು ಅದ್ಭುತ ದೇಗುಲ ನಿರ್ಮಿಸುವುದಾಗಿ ಗೃಹಣೇಶ್ವರಿಗೆ ಹರಕೆ ಕಟ್ಟಿದ್ದಳಂತೆ. ಅಷ್ಟೇ ಅಲ್ಲ, ಈ ಎಲ್ಲರೋದ ಶಿಲೆಯಲ್ಲಿ ಮಂದಿರ ಶಿಖರ ಕಾಣುವವರೆಗೂ ಉಪವಾಸ ಕೈಗೊಳ್ಳುವುದಾಗಿಯೂ ನಿರ್ಧರಿಸಿದಳಂತೆ.
ಅಚ್ಚರಿ ಎಂಬಂತೆ ಆ ರಾಜನ ಕಾಯಿಲೆ ವಾಸಿಯಾಗಿತ್ತು. ಬಳಿಕ ಉಪವಾಸದ ವೇಳೆ ತಾನು ಕಂಡ ಶಿಖರವನ್ನು ಆ ರಾಣಿ ಶಿಲ್ಪಿಗಳಲ್ಲಿ ನಿವೇದಿಸಿದಳು. ಕೋಕಸ ಎಂಬ ಮಹಾನ್ ಶಿಲ್ಪಿಯ ನೇತೃತ್ವದಲ್ಲಿ ಏಕಶಿಲೆ ಬಂಡೆಯಲ್ಲಿ ಮಂದಿರವನ್ನು ಕೆತ್ತುವುದಕ್ಕೆ ಆರಂಭಿಸಿ, ಕೇವಲ ಒಂದೇ ವಾರದಲ್ಲಿ ಈ ಮಹಾನ್ ದೇಗುಲದ ಶಿಖರವನ್ನ ಕೆತ್ತಲಾಯಿತು ಅನ್ನುತ್ತೆ ಇತಿಹಾಸ. ಕೈಲಾಸನಾಥ ದೇಗುಲದಂತೆಯೇ ಎಲ್ಲೋರದ ಒಂದೊಂದು ದೇಗುಲವೂ ಒಂದೊಂದು ಕಥೆ ಹೇಳುತ್ತೆ..!!
ಎಲ್ಲೋರಾದ ಪ್ರಸಿದ್ಧ ಕೈಲಾಸನಾಥ ದೇವಾಲಯ
#elloracaves #adbhutabharata #saraljeevan #ಸರಳಜೀವನ #ಎಲ್ಲೋರಗುಹೆಗಳು #ಅದ್ಭುತಭಾರತ
Subscribe to Saral Jeevan Hindi:
/ @saraljeevanhindi