Перейти к содержимому

Chalavadi Narayanaswamy: ಮಾಜಿ ಸಿಎಂ ಸಿದ್ದರಾಮಯ್ಯ ಪರ ವಿಪಕ್ಷ ನಾಯಕರ ಬ್ಯಾಟಿಂಗ್

TV5 Kannada

0:00 / 0:00

Chalavadi Narayanaswamy: ಮಾಜಿ ಸಿಎಂ ಸಿದ್ದರಾಮಯ್ಯ ಪರ ವಿಪಕ್ಷ ನಾಯಕರ ಬ್ಯಾಟಿಂಗ್

579 просмотров · 1 день назад
TV5 Kannada
2,73 млн подписчиков
579 просмотров · 1 день назад
Chalavadi Narayanaswamy: ಮಾಜಿ ಸಿಎಂ ಸಿದ್ದರಾಮಯ್ಯ ಪರ ವಿಪಕ್ಷ ನಾಯಕರ ಬ್ಯಾಟಿಂಗ್ ರಾಜ್ಯ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿರುವ 'ಸ್ಟಿಂಗ್ ಆಪರೇಷನ್' (Sting Operation) ವಿವಾದದ ಕುರಿತು ಯಾದಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷವು ಇಂದು ಸ್ಟಿಂಗ್ ಆಪರೇಷನ್‌ಗಳ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂದು ವ್ಯಂಗ್ಯವಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಯಲ್ಲಿದ್ದರೂ ಅವರನ್ನು ನೆಮ್ಮದಿಯಿಂದ ಇರಲು ಬಿಡದೆ ಸ್ವಪಕ್ಷೀಯರೇ ಅವರ ವಿಡಿಯೋವನ್ನು ಹೊರಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಟೀಕಿಸಿದ ಅವರು, ತಾವೇ ಸ್ಟಿಂಗ್‌ಗೆ ಒಳಗಾಗಿದ್ದಾಗಿ ಹೇಳುವ ಸಿಎಂಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ವಾ ಎಂದು ಪ್ರಶ್ನಿಸಿದರು. ಯಾವುದೇ ತಪ್ಪು ಮಾಡಿಲ್ಲ ಎಂದಾದ ಮೇಲೆ ಸ್ಟಿಂಗ್ ಆಪರೇಷನ್‌ಗೆ ಹೆದರಿ ಕೋರ್ಟ್‌ನಿಂದ ತಡೆಯಾಜ್ಞೆ (Stay) ತರಲು ಮುಂದಾಗಿದ್ದುೇಕೆ? ಇದರ ಹಿಂದೆ ದೊಡ್ಡ ಹುಳುಕಿದೆ ಎಂದರ್ಥ ಎಂದು ವಾಗ್ದಾಳಿ ನಡೆಸಿದರು. ಕಳ್ಳತನ ಮುಚ್ಚಿಕೊಳ್ಳಲು ಎಸ್‌ಐಟಿ ಹಾಗೂ ಸಿಐಡಿ ತನಿಖೆ ಎನ್ನಲಾಗುತ್ತದೆ ಎಂದು ಟೀಕಿಸಿದ ಛಲವಾದಿ ನಾರಾಯಣಸ್ವಾಮಿ, ಈ ಸಂಪೂರ್ಣ ಪ್ರಕರಣದ ನೈಜ ಸತ್ಯ ಹೊರಬರಲು ಕೂಡಲೇ ಸಿಬಿಐ (CBI) ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. Stepping up the political attack over the raging 'sting operation' controversy, Leader of the Opposition in the Legislative Council Chalavadi Narayanaswamy lashed out at the ruling Congress government during a press meet in Yadgir. Accusing the Congress party of turning into a "sting operation factory", he alleged that internal factions are conspiring against former Chief Minister Siddaramaiah, leaving him with no peace even at home. Questioning the legal moves to secure court stays on broadcast materials, Narayanaswamy asked why leaders should fear exposure if they have done nothing wrong. Demanding an independent CBI probe to unearth the truth, he criticized local investigative agencies and asserted that the state administration has completely collapsed under the current regime. #ChalavadiNarayanaswamy #StingOperation #Siddaramaiah #DKShivakumar #YadgirNews #KarnatakaPolitics #BJPLeader #CBIProbe #PoliticalControversy #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬