ಒಂದು ಶಾಸನದಲ್ಲಿ ಅಳತೆಯ ಚಿಹ್ನೆ: ಮತ್ತೊಂದರಲ್ಲಿ ಮರೆತ ಪಂಗಡ! | ಚೌಳೂರು | ಕೆ.ಧನಪಾಲ್ | Lofty Land
LOFTY LAND
0:00 / 0:00
ಒಂದು ಶಾಸನದಲ್ಲಿ ಅಳತೆಯ ಚಿಹ್ನೆ: ಮತ್ತೊಂದರಲ್ಲಿ ಮರೆತ ಪಂಗಡ! | ಚೌಳೂರು | ಕೆ.ಧನಪಾಲ್ | Lofty Land
6 860 просмотров · 19 часов назад
LOFTY LAND
17,3 тыс. подписчиков
6 860 просмотров · 19 часов назад
#Chouluru #VijayanagaraHistory #TeluguInscriptions #karnatakahistory #archaeology #epigraphy #indianhistory #KDhanapal #LoftyLand
ಕರ್ನಾಟಕ–ಆಂಧ್ರಪ್ರದೇಶದ ಗಡಿಯಲ್ಲಿ, ಹಿಂದೂಪುರ ಸಮೀಪವಿರುವ ಚೌಳೂರು ಸಾಮಾನ್ಯ ಹಳ್ಳಿಯಂತೆ ಕಾಣಬಹುದು. ಆದರೆ ಇಲ್ಲಿರುವ ಎರಡು ಅಪರೂಪದ ಶಾಸನಗಳು ವಿಜಯನಗರ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ವಿಭಿನ್ನ ಕಥೆಗಳನ್ನು ಹೇಳುತ್ತವೆ.
ಮೊದಲನೆಯದು ಕನ್ನಡ ಶಾಸನ. ದೇವಸ್ಥಾನಕ್ಕೆ ನೀಡಿದ ದಾನ ಹಾಗೂ ಕಲ್ಯಾಣಿ ಮತ್ತು ಮಂಟಪ ನಿರ್ಮಿಸಿದ ವಿವರಗಳನ್ನು ಇದು ದಾಖಲಿಸಿದೆ. ಇದರ ಅತ್ಯಂತ ವಿಶೇಷ ಅಂಶವೆಂದರೆ, ಧಾನ್ಯ ಅಳೆಯುತ್ತಿದ್ದ ‘ಕೊಳಗ’ ಎಂಬ ಮಾಪನವನ್ನು ಪದಗಳಲ್ಲಿ ಬರೆಯದೆ ವಿಶೇಷ ಚಿಹ್ನೆಯ ಮೂಲಕ ಸೂಚಿಸಿರುವುದು! ‘ಮೂರುವರೆ ಕೊಳಗ’ ಎಂಬ ಅಳತೆಯಲ್ಲಿ ಬಳಕೆಯಾಗಿರುವ ಈ ಸಂಕೇತವು ಕನ್ನಡ ಶಾಸನ ಪರಂಪರೆಯ ಅಪರೂಪದ ದಾಖಲೆಯಾಗಿದೆ.
ಎರಡನೆಯದು ಕ್ರಿ.ಶ. 1556ರ ತೆಲುಗು ಶಾಸನ. ಚೌಳೂರನ್ನು ಅಂದು ‘ಚೌತೂರು ಅಲಿಯಾಸ್ ತಿಮ್ಮಸಮುದ್ರಂ’ ಎಂದು ಕರೆಯಲಾಗುತ್ತಿತ್ತು ಎಂಬುದರ ಜೊತೆಗೆ, ವಿವಿಧ ಶಾಖೆ ಮತ್ತು ಸೂತ್ರಗಳಿಗೆ ಸೇರಿದ ‘ವಿಪ್ರವಿನೋದಿಗಳು’ ಹನುಮಂತರಾಯ ದೇವರಿಗೆ ನೀಡಿದ ದಾನವನ್ನೂ ಇದು ದಾಖಲಿಸುತ್ತದೆ. ವಿಪ್ರವಿನೋದಿಗಳೆಂಬ ವಿಶಿಷ್ಟ ಸಮುದಾಯದ ಅಸ್ತಿತ್ವವನ್ನು ತಿಳಿಸುವ ಕೆಲವೇ ಶಾಸನಗಳಲ್ಲಿ ಇದೂ ಒಂದು.
ವಿಜಯನಗರದ ಅಂತ್ಯಕಾಲದ ರಾಜಕೀಯ–ಸಾಮಾಜಿಕ ಬದಲಾವಣೆಗಳ ನಡುವೆ ಈ ಸಮುದಾಯವು ಈ ಪ್ರದೇಶಕ್ಕೆ ಬಂದು ನೆಲೆಸಿದ ಹಿನ್ನೆಲೆಯೇನು? ಕೊಳಗಕ್ಕೆ ಪ್ರತ್ಯೇಕ ಚಿಹ್ನೆಯನ್ನು ಏಕೆ ಬಳಸಲಾಗಿತ್ತು?
ಒಂದೇ ಊರಿನ ಎರಡು ಶಾಸನಗಳಲ್ಲಿ ಅಡಗಿರುವ ಈ ಅಪರೂಪದ ಇತಿಹಾಸವನ್ನು ಸಂಶೋಧಕರಾದ ಕೆ. ಧನಪಾಲ್ ಅವರು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ.
Chouluru, Chouluru Inscriptions, Vijayanagara Inscriptions, Kannada Inscriptions, Telugu Inscriptions, Vijayanagara History, Karnataka History, Andhra Pradesh History, Archaeology, Epigraphy, K. Dhanapal, Lofty Land
Near Hindupur on the Karnataka–Andhra Pradesh border, Chouluru may look like an ordinary village, but two rare inscriptions found here reveal fascinating details about Vijayanagara-era history.
One inscription contains a unique symbol connected to the ancient ‘Kolaga’ measurement system, while another from 1556 CE mentions the little-known Vipra Vinodi community.
Who were the Vipra Vinodis? Why was a special symbol used for the Kolaga measurement? And what do these inscriptions reveal about the social and economic life of the Vijayanagara period?
Researcher K. Dhanapal explores these fascinating clues and the forgotten history hidden in Chouluru.
MCN Partner : Aiplex