Перейти к содержимому

ಉತ್ತರ ಕನ್ನಡ ಕಾಂಗ್ರೆಸ್‌ಗೆ ಹೊಸ ಸಾರಥಿ!ಜಿ.ಟಿ. ನಾಯ್ಕಗೆ ಪಕ್ಷದ ಚುಕ್ಕಾಣಿ!

Lokashakti News

0:00 / 0:00

ಉತ್ತರ ಕನ್ನಡ ಕಾಂಗ್ರೆಸ್‌ಗೆ ಹೊಸ ಸಾರಥಿ!ಜಿ.ಟಿ. ನಾಯ್ಕಗೆ ಪಕ್ಷದ ಚುಕ್ಕಾಣಿ!

155 просмотров · 2 нед. назад
Lokashakti News
18 подписчиков
155 просмотров · 2 нед. назад
ಉತ್ತರ ಕನ್ನಡ ಕಾಂಗ್ರೆಸ್‌ಗೆ ಹೊಸ ಸಾರಥಿ! ಜಿ.ಟಿ. ನಾಯ್ಕಗೆ ಪಕ್ಷದ ಚುಕ್ಕಾಣಿ! MLAಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಲೋಕಶಕ್ತಿ news ಡೆಸ್ಕ್; ಶಿರಸಿ 25-09-2026 ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಜಿ.ಟಿ. ನಾಯ್ಕ ಅವರು ಶಿರಸಿಯ ಅಂಬೇಡ್ಕರ್ ಭವನದಲ್ಲಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಸಾಯಿ ಗಾಂವ್ಕರ್ ಅವರು ಪಕ್ಷದ ಧ್ವಜ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು: 🔹 ಕಾರವಾರ ಶಾಸಕ ಸತೀಶ್ ಸೈಲ್ - "ಸಾಮಾಜಿಕ ಜಾಲತಾಣಕ್ಕಿಂತ ಮಾಡಿದ ಕೆಲಸ ಮಾತನಾಡಬೇಕು. ಜನಬೆಂಬಲ ಇದ್ದರೆ 6ಕ್ಕೆ 6 ಸ್ಥಾನ ಗೆಲ್ಲಬಹುದು" ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು. 🔹 ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ - "ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊಸ ಯುಗ ಆರಂಭ. ಬೂತ್ ಮಟ್ಟದಿಂದ ಸಂಘಟನೆ ಬಲಪಡಿಸಬೇಕು. ಬಡ ಅತಿಕ್ರಮಣದಾರರ ಮನೆ ಕೆಡವಿದರೆ ರಾಜೀನಾಮೆ ನೀಡುತ್ತೇನೆ" ಎಂದು ಗುಡುಗಿದರು. ನೂತನ ಅಧ್ಯಕ್ಷ ಜಿ.ಟಿ. ನಾಯ್ಕ ಅವರ ಮಾತು: "29 ವರ್ಷ ಹುದ್ದೆ ಇಲ್ಲದೆ ಪಕ್ಷಕ್ಕಾಗಿ ದುಡಿದಿದ್ದೇನೆ. ಇಂದಿನಿಂದ ನಾನು ಸೇವಕ ಮತ್ತು ಸಂಘಟಕ. ಕಾಂಗ್ರೆಸ್ ಕಚೇರಿ ಕಾರ್ಯಕರ್ತರ ಸ್ವಂತ ಮನೆ. ಕಡೆಗಣಿಸಲ್ಪಟ್ಟವರು, ಯುವಕರು, ಮಹಿಳೆಯರು, ಹಿರಿಯರನ್ನು ಜೊತೆಗೆ ಕೊಂಡೊಯ್ಯುತ್ತೇನೆ" ಇತರೆ ಪ್ರಮುಖರು: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮೊರೊಳ್ಳಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರು, 14 ಬ್ಲಾಕ್ ಅಧ್ಯಕ್ಷರು ಭಾಗಿ. ಮುಂದೆ ಪಂಚಾಯತ್ ಚುನಾವಣೆ - ಜಿ.ಟಿ. ನಾಯ್ಕ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಪಕ್ಷ ಸಂಘಟಿಸುವ ಸಂಕಲ್ಪ! ಪೂರ್ತಿ ವಿಡಿಯೋ ವೀಕ್ಷಿಸಿ 👇 #UttaraKannadaCongress #GTNaik #SatishSail #BheemannaNaik #SaiGaonkar #Sirsi #UttaraKannada #Congress #LokashaktiToday