Перейти к содержимому

ಹಾಗಲಕಾಯಿ ಗ್ರೇವಿ ಹೀಗೆ ಮಾಡಿ ನೋಡಿ 😋 | Super Tasty HagalaKayi Gravy| Bitter Gourd Gravy

Homely Food With Prashu

0:00 / 0:00

ಹಾಗಲಕಾಯಿ ಗ್ರೇವಿ ಹೀಗೆ ಮಾಡಿ ನೋಡಿ 😋 | Super Tasty HagalaKayi Gravy| Bitter Gourd Gravy

65 просмотров · 15 часов назад
Homely Food With Prashu
61 подписчик
65 просмотров · 15 часов назад
ಹಾಗಲಕಾಯಿ ಗ್ರೇವಿ ಹೀಗೆ ಮಾಡಿ ನೋಡಿ 😋 | Super Tasty HagalaKayi Gravy| Bitter Gourd Gravy ಇವತ್ತು ತುಂಬಾ ರುಚಿಯಾದ ಮತ್ತು ಸುಲಭವಾಗಿ ಮಾಡಬಹುದಾದ ಅಗಲಕಾಯಿ ಗ್ರೇವಿ ಮಾಡೋಣ. ಬಿಸಿ ಅನ್ನ, ರೊಟ್ಟಿ ಅಥವಾ ಚಪಾತಿಯ ಜೊತೆ ಈ ಗ್ರೇವಿ ತುಂಬಾ ರುಚಿಯಾಗಿರುತ್ತದೆ. 😋❤️ 🥣 Ingredients | ಬೇಕಾಗುವ ಸಾಮಗ್ರಿಗಳು:- ಹಾಗಲಕಾಯಿ |Bitter Gourd– ಸಣ್ಣದಾಗಿ ಕತ್ತರಿಸಿದದ್ದು ಎಣ್ಣೆ|oil – ಅಗತ್ಯವಿರುವಷ್ಟು ಧನಿಯ ಕಾಳು|Coriander – 1 tbsp ಕಡಲೆಬೇಳೆ |Chana dal– 1 tbsp ಕಡಲೆಬೀಜ|peanut – 1 tbsp ಜೀರಿಗೆ|Cumin – 1 tbsp ಒಣ ಮೆಣಸಿನಕಾಯಿ|Guntur and byadagichilli– ಅಗತ್ಯವಿರುವಷ್ಟು ಸಾಸಿವೆ|Mustard – 1 tbsp ಜೀರಿಗೆ|cumin – 1 tbsp ಕಡಲೆಬೇಳೆ |chana dal– 1 tbsp ಉದ್ದಿನಬೇಳೆ|urad dal– 1 tbsp ಈರುಳ್ಳಿ|onion – ಸಣ್ಣದಾಗಿ ಕತ್ತರಿಸಿದದ್ದು ಟೊಮೆಟೊ |tamota– ಸಣ್ಣದಾಗಿ ಕತ್ತರಿಸಿದದ್ದು ಬೆಲ್ಲದ ಪುಡಿ|Gaggry – ರುಚಿಗೆ ತಕ್ಕಷ್ಟು ಹುಣಸೇ ಹಣ್ಣು|Tamarind - ಸ್ವಲ್ಪ ಉಪ್ಪು |salt– ರುಚಿಗೆ ತಕ್ಕಷ್ಟು ನೀರು – ಗ್ರೇವಿಯ Consistencyಗೆ ತಕ್ಕಷ್ಟು 👩‍🍳 ಮಾಡುವ ವಿಧಾನ | Method:- ಮೊದಲಿಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಅಗಲಕಾಯಿಯನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ Dry Roast ಮಾಡಿಕೊಳ್ಳಬೇಕು. ನಂತರ ಒಂದು ಪ್ಯಾನ್‌ಗೆ ಧನಿಯ ಕಾಳು, ಕಡಲೆಬೇಳೆ, ಕಡಲೆಬೀಜ, ಜೀರಿಗೆ, ಏಲಕ್ಕಿ ಮತ್ತು ಒಣ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಯವಾಗಿ ರುಬ್ಬಿಕೊಳ್ಳಬೇಕು. ಈಗ ಒಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೊ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಈರುಳ್ಳಿ ಮತ್ತು ಟೊಮೆಟೊ ಚೆನ್ನಾಗಿ ಬಾಡಿದ ನಂತರ, ಈಗಾಗಲೇ Dry Roast ಮಾಡಿಕೊಂಡಿರುವ ಹಾಗಲಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ನಾವು ರುಬ್ಬಿಕೊಂಡಿರುವ ಮಸಾಲೆಯನ್ನು ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಗ್ರೇವಿಯ Consistencyಗೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಬೆಲ್ಲದ ಪುಡಿ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಗ್ರೇವಿ ಚೆನ್ನಾಗಿ ಕುದಿದು ಮಸಾಲೆ ಎಲ್ಲವೂ ಚೆನ್ನಾಗಿ ಬೆಂದ ನಂತರ ನಮ್ಮ ರುಚಿಯಾದ ಹಾಗಲಕಾಯಿ ಗ್ರೇವಿ ರೆಡಿ! 😋❤️ Today, let’s prepare a delicious and easy Bitter Gourd Gravy. This gravy tastes amazing with hot rice, roti or chapati. 😋 First, cut the Bitter Gourd into small pieces and dry roast it well. For the masala, roast coriander seeds, chana dal, peanuts, cumin seeds and dry red chillies. Transfer them to a mixer, add a little water and grind into a smooth paste. Heat some oil in a pan. Add mustard seeds, cumin seeds, chana dal and urad dal and fry well. Add finely chopped onion and tomato and sauté until they are well cooked. Add the dry-roasted Bitter Gourd and mix well. Then add the prepared ground masala and mix everything thoroughly. Add water according to your desired gravy consistency and let it boil well. Finally, add jaggery powder, Tumarind and salt according to taste. Mix well and cook until the gravy is nicely done. Our delicious Agala Kayi Gravy is ready to serve! 😋❤️ ❤️ ಈ ರೆಸಿಪಿ ಇಷ್ಟವಾದರೆ ವಿಡಿಯೋವನ್ನು Like 👍 | Share ↗️ | Comment 💬 | Subscribe 🔔 ಮಾಡಿ. ನಿಮ್ಮ ಅಭಿಪ್ರಾಯವನ್ನು Commentನಲ್ಲಿ ತಿಳಿಸಿ. ❤️ #ಹಾಗಲಕಾಯಿ #ಹಾಗಲಕಾಯಿಗ್ರೇವಿ #BitterGourd #BitterGourdGravy #BitterGourdRecipe #Karela #KarelaRecipe #KarnatakaRecipes #KannadaRecipes #SouthIndianRecipes #IndianRecipes #VegRecipe #GravyRecipe #TastyAndSpicy #EasyRecipe