Перейти к содержимому

ವಿದ್ಯುತ್ ಸ್ವಾವಲಂಬಿ ಮಾದರಿ ರೈತ

DD Chandana News

0:00 / 0:00

ವಿದ್ಯುತ್ ಸ್ವಾವಲಂಬಿ ಮಾದರಿ ರೈತ

542 просмотра · 3 дн. назад
DD Chandana News
111 тыс. подписчиков
542 просмотра · 3 дн. назад
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪ್ರಗತಿಪರ ರೈತರೊಬ್ಬರು ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಈ ಕುರಿತು ಒಂದು ವರದಿ. ಇತ್ತೀಚಿಗೆ ಕೆಲ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರಬಂದು ಆಧುನಿಕ ತಂತ್ರಜ್ಞಾನ ಆಧಾರಿತ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೊರೆಶೆಟ್ಟಹಳ್ಳಿ ಗ್ರಾಮದ ರೈತ ಟಿ.ಕೆ. ಸತೀಶ್, ತಮ್ಮ ಸ್ವಂತ ಬಂಡವಾಳದಲ್ಲಿ ಸೌರಶಕ್ತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ತಮಗೆ ಅಗತ್ಯವಿರುವ ವಿದ್ಯುತ್ ಅನ್ನು ತಾವೇ ಉತ್ಪಾದಿಸುತ್ತಿದ್ದಾರೆ. ಹೀಗೆ ಸಮಯ ಹಾಗೂ ಹಣದ ಉಳಿತಾಯದೊಂದಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ತಮ್ಮ ಆರು ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಅರಿಶಿನ, ತರಕಾರಿ ಮತ್ತಿತರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಟಿ. ಕೆ. ಸತೀಶ್, ಸೌರ ಫಲಕ ಹಾಗೂ ವಿದ್ಯುನ್ಮಾನ ಸಾಧನಗಳ ಬಳಕೆ ಮೂಲಕ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಸರ್ಕಾರ ನೀಡುವ ವಿದ್ಯುತ್ ಗಾಗಿ ಕೈಚಾಚುವ ಬದಲು ವಿದ್ಯುತ್ ಸ್ವಾವಲಂಬಿಯಾಗಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ದೂರದರ್ಶನದೊಂದಿಗೆ ಟಿ. ಕೆ. ಸತೀಶ್, ವಿದ್ಯುತ್ ಅಭಾವ ಹಾಗೂ ವೋಲ್ಟೇಜ್ ವೈಪರೀತ್ಯದಿಂದಾಗಿ ಉಂಟಾಗುವ ಸಮಸ್ಯೆಗಳಿಗೆ ಸೌರಶಕ್ತಿ ಉತ್ತಮ ಪರಿಹಾರವಾಗಿದೆ. ಸ್ವಂತ ಹಣದಲ್ಲಿ ಸೌರಶಕ್ತಿ ಯೋಜನೆ ಅಳವಡಿಸಿಕೊಂಡಿದ್ದು, ಇದರಿಂದ ಹಗಲು ಹೊತ್ತಿನಲ್ಲಿಯೂ ಬೆಳೆಗಳಿಗೆ ನೀರು ಹಾಯಿಸಲು ಅನುಕೂಲವಾಗಿದೆ ಎಂದು ತಿಳಿಸಿದರು. ಸತೀಶ್ ಅವರ ಪುತ್ರ ರಾಕೇಶ್, ಸೌರಶಕ್ತಿ ಅಳವಡಿಕೆಯಿಂದ ಸಮಯ ಹಾಗೂ ಹಣದ ಉಳಿತಾಯವಾಗಿದೆ. ಇದರಿಂದ ವಿದ್ಯುತ್ ಗಾಗಿ ಸರ್ಕಾರದ ಮೇಲಿನ ಅವಲಂಬನೆ ತಪ್ಪಿದೆ ಎಂದು ಹೇಳಿದರು. ಸ್ಥಳೀಯ ನಿವಾಸಿ ಮಹೇಶ್, ನಿರಂತರವಾಗಿ ವಿದ್ಯುತ್ ಅಭಾವದಿಂದ ಕಷ್ಟಪಡುವ ರೈತರಿಗೆ ಸೌರಶಕ್ತಿ ವ್ಯವಸ್ಥೆಯು ಪರಿಣಾಮಕಾರಿ ಪರಿಹಾರವಾಗಿದೆ ಎಂದರು. ಮತ್ತೋರ್ವ ರೈತ ಚಂದ್ರ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಡಿತದಿಂದ ಬೆಳೆಗಳಿಗೆ ನೀರು ಹರಿಸಲು ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಸೌರಶಕ್ತಿ ಉಪಯುಕ್ತವಾಗಿದೆ ಎಂದು ಹೇಳಿದರು. ಸಹಾಯಕ ಕೃಷಿ ನಿರ್ದೇಶಕ ಡಿ. ಪರಮೇಶ, ಸತೀಶ್ ತಮ್ಮ ಸ್ವಂತ ಹಣದಲ್ಲಿ ಸೌರಶಕ್ತಿ ಅಳವಡಿಸಿಕೊಂಡಿದ್ದು, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಗಳ ಮೂಲಕ ತಮ್ಮ ಜಮೀನಿನಲ್ಲಿ ಪರಿಣಾಮಕಾರಿಯಾಗಿ ನೀರಿನ ನಿರ್ವಹಣೆ ಮಾಡುತ್ತಿದ್ದಾರೆ ಎಂದರು. ಒಟ್ಟಾರೆಯಾಗಿ ಆಧುನಿಕ ತಂತ್ರಜ್ಞಾನ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಬಹುದು ಎಂಬುದುಕ್ಕೆ ಸತೀಶ್ ಅವರೇ ಉತ್ತಮ ಉದಾಹರಣೆಯಂತಿದ್ದಾರೆ. #LiveDDChandanaNews #DDChandanaNews #DDChandana #DDKannada