Перейти к содержимому

ದಾಂಡೇಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರಿಗೆ ಕಿರುಕುಳ! SDMC ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ - ಶಿಕ್ಷಕರ ಸಂಘ ಖಂಡನೆ

Sandesh News9

0:00 / 0:00

ದಾಂಡೇಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರಿಗೆ ಕಿರುಕುಳ! SDMC ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ - ಶಿಕ್ಷಕರ ಸಂಘ ಖಂಡನೆ

5 788 просмотров · 2 недели назад
Sandesh News9
13 тыс. подписчиков
5 788 просмотров · 2 недели назад
ಬಂಗೂರನಗರ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷನಿಂದ ಶಿಕ್ಷಕಿಯರ ಮೇಲೆ ದಬ್ಬಾಳಿಕೆ, ಮಾನಸಿಕ ಕಿರುಕುಳ: ಶಿಕ್ಷಕರ ಸಂಘದಿಂದ ತೀವ್ರ ಖಂಡನೆ* ದಾಂಡೇಲಿ ತಾಲೂಕಿನ ಬಂಗೂರನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಂತೇಶ ಗುತ್ತಣ್ಣನವರ ವಿರುದ್ಧ ಶಿಕ್ಷಕಿಯರು ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಸಂಜೆ ದಾಂಡೇಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸತೀಶ ನಾಯಕ ಬಾವಿಕೇರಿ ಅವರು ಮಾತನಾಡಿ, ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಗೆ ತೆರಳಲು ಶಿಕ್ಷಕಿಯರಿಗೆ SDMC ಅಧ್ಯಕ್ಷರು ತಡೆ ಒಡ್ಡಿದ್ದಾರೆ. ಅವರು ಅಧ್ಯಕ್ಷರಾದಾಗಿನಿಂದ ಎಲ್ಲ ಶಿಕ್ಷಕಿಯರು ಮಾನಸಿಕವಾಗಿ ನೊಂದಿದ್ದಾರೆ, ಪ್ರತಿದಿನ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ತೀವ್ರ ಖಂಡನೆ ವ್ಯಕ್ತಪಡಿಸಿದರು. ವರ್ತನೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಹಳಿಯಾಳ-ದಾಂಡೇಲಿ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ ಅವರು, ಮಹಿಳಾ ಶಿಕ್ಷಕಿಯರನ್ನೇ ಹೊಂದಿರುವ ಈ ಶಾಲೆಯಲ್ಲಿ ಅಧ್ಯಕ್ಷರ ದಬ್ಬಾಳಿಕೆಯಿಂದ ಶಿಕ್ಷಕಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ, ಎಲ್ಲ ಶಿಕ್ಷಕಿಯರು ವರ್ಗಾವಣೆ ಬಯಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯಿನಿ ಜುಬೇದಾ ಬಿ.ಎಂ. ಅವರ ಗಂಭೀರ ಆರೋಪ: ಶಾಲಾಭಿವೃದ್ಧಿಗೆ ಬಂದ ರೂ. 27,520 ಹಣವನ್ನು 2026ರ ಮಾರ್ಚ್ 31ರಂದು ಶಾಲೆಯ ಉಳಿತಾಯ ಖಾತೆಗೆ ವರ್ಗಾಯಿಸುವ ಬದಲು ಅಧ್ಯಕ್ಷರು ಬಲವಂತವಾಗಿ ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಹಣ ಸಿಸಿಟಿವಿ ಖರೀದಿಗೆ ಬಳಕೆಯಾಗಬೇಕಿತ್ತು ಎಂದು ಆರೋಪಿಸಿದರು. ಹಿರಿಯ ಶಿಕ್ಷಕಿ ಈರಮ್ಮ ನಡುವಿನಮನಿ ಅವರು, ಅವಾಚ್ಯ ಶಬ್ದಗಳಿಂದ ಬೈಯುವುದು, ಹೆದರಿಸುವುದು, ತಮಗೆ ನಮಸ್ಕಾರ ಮಾಡಬೇಕು ಎಂದು ತಾಕೀತು ಮಾಡುತ್ತಾರೆ ಎಂದು ಯಾತನೆ ವಿವರಿಸಿದರು. ಈಗಾಗಲೇ 2 ವರ್ಷಗಳ ಹಿಂದೆಯೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಸಂಘ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಉದಯ ನಾಯಕ, ವೆಂಕಟೇಶ ನಾಯಕ, ರಮೇಶ ಪಾಟೀಲ್, ಮಮತಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. 📍 ಬಂಗೂರನಗರ, ದಾಂಡೇಲಿ #DandeliSchoolControversy #BangurnagarGovtSchool #SDMCPresidentHarassment #TeacherHarassmentDandeli #PrimaryTeachersAssociation #DandeliNews #UttaraKannadaNews #TeachersDay #ಬಂಗೂರನಗರ #ದಾಂಡೇಲಿ #ಶಿಕ್ಷಕಿಯರಿಗೆಕಿರುಕುಳ