Перейти к содержимому

ಎಸ್ ಐ ಆರ್ ವಿರುದ್ಧದ ಹೋರಾಟ ಸರಿಯಾಗಿದೆ; ಅಮಾನ್ ಅಂಬೇಡ್ಕರ್ ಬೆಂಗಳೂರು ಅಕ್ಟೋಬರ್ 11; ಮುಂಬರುವ ಜಿಬಿಎ ಮತ್ತ

Bangalore Reports

0:00 / 0:00

ಎಸ್ ಐ ಆರ್ ವಿರುದ್ಧದ ಹೋರಾಟ ಸರಿಯಾಗಿದೆ; ಅಮಾನ್ ಅಂಬೇಡ್ಕರ್ ಬೆಂಗಳೂರು ಅಕ್ಟೋಬರ್ 11; ಮುಂಬರುವ ಜಿಬಿಎ ಮತ್ತ

27 просмотров · 6 дн. назад
Bangalore Reports
5,28 тыс. подписчиков
27 просмотров · 6 дн. назад
ಎಸ್ ಐ ಆರ್ ವಿರುದ್ಧದ ಹೋರಾಟ ಸರಿಯಾಗಿದೆ; ಅಮಾನ್ ಅಂಬೇಡ್ಕರ್ ಬೆಂಗಳೂರು ಅಕ್ಟೋಬರ್ 11; ಮುಂಬರುವ ಜಿಬಿಎ ಮತ್ತು ತಾಲೂಕು,ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ರಿಬಿಪ್ಲಕನ್ ಸೇನೆ ಪಕ್ಷ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಯುವಕರನ್ನು ಸಂಘಟಿಸುವ ಪ್ರಯತ್ನ ನಡೆಸಲಾಗುವುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಮರಿಮೊಮ್ಮಗ ಅಮಾನ್ ಅಂಬೇಡ್ಕರ್ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ರಿಪಬ್ಲಿಕನ್ ಸೇನೆ ಪಕ್ಷದ ದಕ್ಷಿಣ ಭಾರತ ಅಧ್ಯಕ್ಷ ವೈಟ್ ಪೀಲ್ಡ್ ಮುರುಗೇಶ್ ನಿಯೋಗದ ಜತೆ ಮಾತಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದೇ ಮುಂಬರುವ ಸ್ವತಂತ್ರವಾಗಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.ದೇಶಾದ್ಯಂತ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ದೇಶದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಕುರಿತಂತೆ ತೀವ್ರತರವಾದ ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಮತದಾರ ಪಟ್ಟಿಯಿಂದ ಕೆಲವರನ್ನು ಕೈ ಬಿಡಲಾಗಿದೆ ಇದರಲ್ಲಿ ಮೋಸ ನಡೆದಿದೆ ಯುವ ಜನಾಂಗದವರು ದ್ವನಿ ಎತ್ತಿರುವುದು ಸಮಂಜಸವಾಗಿದೆ ಎಂದು ಹೇಳಿದರು. ಪಕ್ಷದ ದಕ್ಷಿಣ ಭಾರತ ಅಧ್ಯಕ್ಷ ವೈಟ್ ಪೀಲ್ಡ್ ಮುರುಗೇಶ್ ಮಾತನಾಡಿ,ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆ ವಿಚಾರ ಕುರಿತು ಅಮಾನ್ ಅಂಬೇಡ್ಕರ್ ಜತೆ ಮಾತುಕತೆ ನಡೆಸಲಾಗಿದೆ,ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೀಮ್ ಪ್ರಜಾ ಸಂಘದ ಉಪಾಧ್ಯಕ್ಷ ಬೊಮ್ಮಸಂದ್ರ ಮುನಿರಾಜು ಮತ್ತಿತರರು ಹಾಜರಿದ್ದರು.