ಬಾ ಬಾರೋ ಪ್ರೀತಿಯ ಹುಡುಗ.... ❤️ ಕನ್ನಡ ಪ್ರೇಮ ಗೀತೆ ❤️
HAMSINI MUSIC
0:00 / 0:00
ಬಾ ಬಾರೋ ಪ್ರೀತಿಯ ಹುಡುಗ.... ❤️ ಕನ್ನಡ ಪ್ರೇಮ ಗೀತೆ ❤️
424 просмотра · 11 дней назад
HAMSINI MUSIC
429 подписчиков
424 просмотра · 11 дней назад
[Verse 1]
ಬಾ ಬಾರೋ ನನ್ನ ಹುಡುಗ
ಕೈ ಕೈ ಹಿಡಿಯೋಣ
ಶುಕ್ರವಾರ ಸಂಜಿ, ಇವತ್
ಮೂವಿ ನೋಡೋಣ
ಪ್ಯಾಟಿ ಬ್ಯಾಡೋ ಪ್ರೀತಿಯ ಹುಡುಗ,
ಹೊಲ್ದಾಗ ಕುಂದ್ರೋಣ
ಟಾಕೀಸ್ ಯಾಕೋ ಚಿನ್ನ, phone-ನಲ್ಲೇ ಹಚ್ಚೋಣ!
[Chorus]
ನಾ ಹುಬ್ಬಳ್ಳಿ ಹುಡುಗಿ
ಬ್ಯಾಡ ರೊಕ್ಕದ ಗಡಿಗಿ
ಪ್ರೀತಿನೇ ಕೇಳ್ತೀನಿ
ಜೀವನ ಪೂರ್ತಿ
ಜೊತೆ ಕೇಳ್ತೀನಿ..
[Verse 2]
ಚಿನ್ನ ಮುದ್ದು ಅನ್ನು, ನಾ ಕರಗಾಕಿ
ಸಿಟ್ಟಿಗ್ ಸಿಟ್ ಅಂದ್ರ, ಮತ್ತ ತೊಂದ್ರಿ
ಜಗಳ, ಹಾರಾಟ, ಹಗಲಷ್ಟೇ ನಂದು
ರಾತ್ರಿಗೆಲ್ಲಾ ಮರ್ತು
ಮುದ್ದು ಮಾಡಾಕಿ
[Bridge]
ನಾ ಪ್ರೀತಿ ಪಾರಿವಾಳ, ಕೈಕೊಟ್ಟು ಹಾರೋಳಲ್ಲ
ಮಾತ್ ಕೊಟ್ರೆ ಮುಗೀತು.. ನಾ ಮರೆಯೋಳಲ್ಲ
ಮುತ್ತು ಕೇಳು ಹುಡುಗ, ಎಷ್ಟಾದ್ರೂ ಕೊಡಾಕಿ
ಮತ್ ಅಂದ್ರೆ ಆಗಲ್ಲ, ಹುಷಾರ್ ಚಿನ್ನಾ..
ಕುಡ್ದು ಬಂದಿ ಅಂದ್ರ, ಮತ್ತ
ನಾ ಎತ್ತಿ ಒಗೆಯಾಕಿ!
[Verse 3]
Tractor ಆದ್ರೂ ಹಚ್ಚು
ಎತ್ತಲ್ಲಾದ್ರೂ ಊಳು
ನಾ ತರ್ತೀನ್ ಬುತ್ತಿ ಗಂಟು
ನಾ ಹುಬ್ಬಳ್ಳಿ ಹುಡುಗಿ
ಬ್ಯಾಡ ರೊಕ್ಕದ್ ಗಡಿಗಿ
ಕೈ ಕೈ ಹಿಡಿ ಹುಡುಗ
ಪ್ರೀತಿನೇ ಕೇಳೇನಿ
ಪ್ರೀತಿಗೆ ಪ್ರೀತಿನೇ ಕೊಡ
[Chorus]
ನಾ ಹುಬ್ಬಳ್ಳಿ ಹುಡುಗಿ
ಬ್ಯಾಡ ರೊಕ್ಕದ ಗಡಿಗಿ
ಪ್ರೀತಿನೇ ಕೇಳ್ತೀನಿ
ಜೀವನ ಪೂರ್ತಿ
ಜೊತೆ ಕೇಳ್ತೀನಿ..
[Outro]
ಬಾ ಬಾರೋ ನನ್ನ ಹುಡುಗ
ಕೈ ಕೈ ಹಿಡಿಯೋಣ
ಶುಕ್ರವಾರ ಸಂಜಿ, ಇವತ್
ಮೂವಿ ನೋಡೋಣ
ಪ್ಯಾಟಿ ಬ್ಯಾಡೋ ಪ್ರೀತಿಯ ಹುಡುಗ,
ಹೊಲ್ದಾಗ ಕುಂದ್ರೋಣ
ಟಾಕೀಸ್ ಯಾಕೋ ಚಿನ್ನ, phone-ನಲ್ಲೇ ಹಚ್ಚೋಣ!
ಕೈ ಕೈ ಹಿಡಿಯೋಣ..
ಪ್ರೀತಿಲೇ ಬಾಳೋಣ..
ಬಾ ಬಾರೋ ಪ್ರೀತಿಯ ಹುಡುಗ.. is a kannada love song, lyrics written by Prasad Gp. written in uttarakarnataka Kannada dialect. for HAMSINIMUSIC. Song is made in Suno Ai.. it's melodious Kannada song, mixed uttarakarnataka janapada and kannada bhavageethe and kannada movie songs..
#Kannadalovesong #uttarakarnatakasong #kannadajanapadafusion # originalkannadalyrics #Kannadaaimusic #Kannadasunosongs #kannadabhavageethegalu
#Kannadajanapadageethe #Kannadamoviesong #Kannadavillagesong #kannadalovestatus #hublihudugi