ಅಂದು ದಕ್ಷ ಯಜ್ಞವನೇ ಮಾಡಲು (andu dakshayagnavane maadalu) Devi Aarati song by Smt. Aparna Narahari
Geetaamrutha by Aparna Narahari
0:00 / 0:00
ಅಂದು ದಕ್ಷ ಯಜ್ಞವನೇ ಮಾಡಲು (andu dakshayagnavane maadalu) Devi Aarati song by Smt. Aparna Narahari
434 просмотра · 1 год назад
Geetaamrutha by Aparna Narahari
99 подписчиков
434 просмотра · 1 год назад
#aparna #aparnanarahari #geetaamrutha #aarati #devi #devotionalsongs #devotional #kannada
author: unknown
sung by: Smt. Aparna Narahari
ಅಂದು ದಕ್ಷ ಯಜ್ಞವನೆ ಮಾಡಲು
ಸಂದಣಿಸಿ ಸಮರದೊಳಗಿರುತಿರೆ
ನಂಬಿಕೆಯು ನಡೆ ತಂದು ಹರುಷದಿ
ಬಂದು ಯಜ್ಞ ಶಾಲೆಯಲಿ ಕುಳ್ಳಿರೆ
ಗಂಡನಿಗೆ ಭಾಗವನು ಕೊಡದಿರಲ್
ಅಂದು ಯಜ್ಞದಿ ದಹಿಸಿದಾಕೆಗೆ
ಮಂಗಳಾ ಜಯ ಜಯ ಮಂಗಳಾ //೧//
ದಕ್ಷ ಯಜ್ಞದಿ ದಹಿಸಿ ಮಾತೆಯು
ಪುತ್ರಿಯಾಗಿ ಗಿರಿರಾಜನುದರದಿ
ಹುಟ್ಟಿದಳು ಮೇನೆಕೆಯ ಬಸಿರಲಿ
ಭಕ್ತರಿಷ್ಟ ಫಲಗಳ ನೀಡುತ
ದಟ್ಟಡಿಯ ಲೀಲೆಗಳ ತೋರುತ
ಸೃಷ್ಟಿ ಮಾತೆಯು ಬೆಳೆಯುತ್ತಿರ್ದಳು
ಮಂಗಳಾ ಜಯ ಮಂಗಳ //೨//
ಆಯಿತೈದ್ವರುಷಗಳು ದೇವಿಗೆ
ಬಾಲೆ ಹರನ ಭಜಿಸುತ್ತಿದ್ದಳು
ತಾನು ವಹಿಸಿದಳ್ ಉಗ್ರ ತಪವ
ಕಪೋಲ ಹರಿಹರರಂಘ್ರಿದ್ವಯದಲಿ
ಭಾವ ಶುದ್ಧದ ಹೃದಯ ಕಮಲದಿ ತಾನ್
ವಹಿಸಿ ನಿಂದಿರುವ ದೇವಿಗೆ
ಮಂಗಳಾ ಜಯ ಜಯ ಮಂಗಳಾ//೩//
ಇಂತು ಗಿರಿರಾಜಾನ ಕುಮಾರಿಯು
ಚಿಂತೆಯಲಿ ಬಹು ತಪವ ಮಾಡಿರೆ
ಅಂತರಾತ್ಮಕನಾದ ಶಿವನು
ಶ್ರೀ ಕಾಂತೆ ಅಂತರಂಗವನು ತಿಳಿಯುತ
ಚಿಂತೆಯನು ಪರಿಹರಿಸಿ ಕೈ ಹಿಡಿದ
ಕಾಂತಾನ ನೋಡಿದೆ ಶ್ರೀ ಗೌರಿಗೆ
ಮಂಗಳಾ ಜಯ ಜಯ ಮಂಗಳ//೪//
ಬಂದು ಹರ ಸಮೂಹದಲ್ಲಿ ಕುಳ್ಳಿರೆ
ಅಂಬಿಕೆಯು ನಾಚಿದಳು ಮನದಲಿ
ಅಂದು ಅಮರರು ಅರಳ ಕರೆಯಲು
ಅಜಭಾವದ್ಯರು ಹರಿಯ ಸ್ತುತಿಸಲು
ಬಂದು ವರಕಣ್ವಪುರದ ಮಧ್ಯದಿ ನಿಂದ
ಹರನರ್ಧಾಂಗಿ ಗೌರಿಗೆ
ಮಂಗಳಾ ಜಯ ಜಯ ಮಂಗಳಾ//೫//
ಮಂಗಳಂ ಗಿರಿರಾಜ ಪುತ್ರಿಗೆ ಮಂಗಳಂ ಈಶ್ವರನ ಪತ್ನಿಗೆ
ಮಂಗಳಂ ಷಣ್ಮಖನಮಾತೆಗೆ
ಮಂಗಳಂ ಶ್ರೀ ಗೌರಿ ದೇವಿಗೆ
ಮಂಗಳಾ ಜಯ ಜಯ ಮಂಗಳ