ಮುಗುದೇರು ಮುತ್ತಿನ ಹರಿವಾಣದಾರತಿ (Muguderu Muttina) devi aarati song by Smt. Aparna Narahari
Geetaamrutha by Aparna Narahari
0:00 / 0:00
ಮುಗುದೇರು ಮುತ್ತಿನ ಹರಿವಾಣದಾರತಿ (Muguderu Muttina) devi aarati song by Smt. Aparna Narahari
280 просмотров · 1 год назад
Geetaamrutha by Aparna Narahari
99 подписчиков
280 просмотров · 1 год назад
#Geetaamrutha #aparna #aparnanarahari #aarati #kannada #devi #devotionalsongs #devotional
author: unknown
sung by: Smt. Aparna Narahari
ಮುಗುದೇರು ಮುತ್ತಿನ ಹರಿವಾಣದಾರತಿ
ಬೆಳಗಿ ತಂದೆತ್ತಿರೆ ಹರುಷದಿಂದ
ಕಡಗ ಕಂಕಣ ಕೈಯ ಬೆರಳಲ್ಲಿ ಮುದ್ರಿಕೆ
ವರಮಹಾಲಕ್ಷ್ಮಿಗಾರತಿನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ //ಪ//
ಹಳ್ಳದಲಿ ಮೈ ತೊಳೆದು ಒಳ್ಳೆ ಮಡಿಗಳನುಟ್ಟು
ಮೆಲ್ಲನೆ ಶಿವಪೂಜೆಗಣಿಮಾಡುತ
ಕಳ್ಳತನದಲಿ ಹೋಗಿ ಶಿವಗೆ ಹೆಂಡತಿಯಾದ
ಗುಳ್ಳದ ಗೌರಿಗಾರತಿನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ //೧//
ಆನೀ ಪಪ್ಪಳಿ ಸೀರೆ ಆವಂಚೆ ಸರದಾರೆ
ಪಾವಂಚು ಪಗಡಿ ಹೂವಿನ ಸೀರೆಯು
ಮೇಲ್ಕಟ್ಟು ಕಟ್ಟೋರು ಕದಳಿ ಮಾದಳ ಫಲ
ಆನೆಯ ಗೌರಿಗಾರತಿನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ //೨//
ಹೊನ್ನೋಲೆ ಹೊಸಕೊಪ್ಪು ಹೊಳೆವ ಮುತ್ತಿನ ಬಟ್ಟು
ಚಿನ್ನಸರ ಬಣ್ಣ ಸರದಿಂದೊಪ್ಪುವ
ಹುಣ್ಣಿಮೆ ಚಂದ್ರಮನಂತೆ ಥಳ ಥಳಿಸುವ
ಸೊನ್ನಲಾ ಗೌರಿಗಾರತಿನೆತ್ತಿರೆ
ಜಯ ಮಂಗಳ ನಿತ್ಯ ಶುಭ ಮಂಗಳ //೩//
ಸೊನ್ನಲಾ ಗೌರಿ ಶೋಭನ ಗೌರಿ ನಿಜ ಗೌರಿ
ಉನ್ನಂತ ಗೌರಿ ಉಯ್ಯಾಲೆ ಗೌರಿ
ಚಿನ್ನದಾ ನೀ ಗೌರಿ ಚೆಲುವೆ ಸೀಗೆ ಗೌರಿ
ನಮ್ಮ ರಕ್ಷಿಸುವ ಮಂಗಳ ಗೌರಿಗೆ
ಜಯ ಮಂಗಳ ನಿತ್ಯ ಶುಭ ಮಂಗಳ //೪//