ಜಾನಪದಶೈಲಿಯ ಗೀತೆ - ಮೈಸೂರ್ ಹಬ್ಬದಿ ನೋಡು ದಸರಾ ಹಬ್ಬದಿ ನೋಡು
ಸಿರಿ ಕ್ರಿಯೇಷನ್ಸ್ - siri creations
0:00 / 0:00
ಜಾನಪದಶೈಲಿಯ ಗೀತೆ - ಮೈಸೂರ್ ಹಬ್ಬದಿ ನೋಡು ದಸರಾ ಹಬ್ಬದಿ ನೋಡು
245 просмотров · 3 нед. назад
ಸಿರಿ ಕ್ರಿಯೇಷನ್ಸ್ - siri creations
568 подписчиков
245 просмотров · 3 нед. назад
- ಆನೆ ಅಂಬಾರಿ --
ತಾನಿ ತಂದಾನಿ ತಾನೊ
ತಂದಾನಿ ತಾನೊ
ತಂದಾನಿ ತಾನೊ ತಂದನಾನೊ
ತಾನಿ ತಂದಾನಿ ತಾನೊ ತಂದಾನಾನೋ//
ಮೈಸೂರ್ ಹಬ್ಬದಿ ನೋಡು
ದಸರಾ ಹಬ್ಬದಿ ನೋಡು
ನಾಡ ಹಬ್ಬದಿ ನೋಡು
ದಶಮಿ ಹಬ್ಬದಿ ನೋಡು
ಮಾರ್ನೋಮಿ ಹಬ್ಬದಿ ನೋಡಣ್ಣ ಅಲ್ಲಿ
ಅಂಬಾರಿ ಹೊರುವುದು ಕಾಣಣ್ಣ ಬನ್ನಿ
ಬನ್ನಿ ಮುಡ್ಯೋದನ್ನ ನೋಡಣ್ಣ//
ನೋಡಿ ಅರ್ಜುನನನ್ನ
ನೋಡಿ ಬಲರಾಮನನ್ನು
ನೋಡಿ ಕಾಂತಿಯನ್ನು
ನೋಡಿ ಲಕ್ಷ್ಮಿಯನ್ನು
ಬನ್ನಿ ಆನೆಯ ಎಲ್ಲ ನೋಡೋಣ
ನಾವ್ ದಸ್ರಾ ಮೆರವಣಿಗೆ ನೋಡೋಣ//
ಬಲರಾಮ ಅರ್ಜುನ
ಅಂಬಾರಿ ಹೊರುವಾಗ
ಕಾಂತಿ ಲಕ್ಷ್ಮಿಯರು ಎಡ-ಬಲದಿ
ಕಾಂತಿ ಲಕ್ಷ್ಮಿಯರು
ಎಡ-ಬಲ ಇರುವಾಗ
ರಾಜ ಗಾಂಭೀರ್ಯದ
ನಡಿಗೆಯಲಿ,
ಆನೆ, ರಾಜ ಗಾಂಭೀರ್ಯದ
ನಡಿಗೆಯಲಿ//
ಚಾಮುಂಡಿ ದೇವಿಯನ್ನು
ಬೆನ್ನ ಮೇಲೆ ಹೊತ್ತಾಗ
ನೂರಾರು ಕಣ್ಣು ನಿನ್ನ ಮ್ಯಾಲೆ
ನೂರಾರು ಕಣ್ಣು
ನಿನ್ನ ಮ್ಯಾಲೆ ಇರುವಾಗ
ನಿನ್ನ ಕಣ್ಣು ಮಾತ್ರ ಕಾಂತಿ ಮ್ಯಾಲೆ
ನಿನ್ನ ಕಣ್ಣು ಮಾತ್ರ ಲಕ್ಷ್ಮಿ ಮ್ಯಾಲೆ//
ಸಾ.ನಾ. ಶ್ರೀಲಕ್ಷ್ಮಿ