Mahanavami sidhi dhatri kavana,,rachane ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ
sharada Moleyar M
0:00 / 0:00
Mahanavami sidhi dhatri kavana,,rachane ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ
25 просмотров · 1 дн. назад
sharada Moleyar M
590 подписчиков
25 просмотров · 1 дн. назад
________________________
🔥ನವರಾತ್ರಿ🔥19/10/26
🔥ಸಿದ್ಧಿಧಾತ್ರಿ ರೂಪ 🔥
🔥ಭಕ್ತಿ ಕವನ🔥ನವಮಿ ದಿನ
_______________________
ಮಹಾನವಮಿ ಒಂಬತ್ತನೆಯ ದಿನಕೆ ಕರೆದರು
ಆಹಾ ಬುವಿಲಿ ಸಂತಸವ ಹೊಂದುತ ಜನರು
ಸಿದ್ಧಿ ಹೊಂದಿ ಸಕಲ ಸಾಮರ್ಥ್ಯ ಸಿದ್ಧಿ ದೇವಿಯು
ಧಾತ್ರಿ ಸಕಲವ ಭಕ್ತಗೆ ನೀಡಿ ಮಹಾ ಮಾತೆಯು
ಜಯತು ಜಯತು ನಿನಗೆ ಹೇ ಜಗನ್ಮಾತೆ
ಅರವಿಂದಾಸನ ಸುಂದರಿ ಸಿಂಹಾರೂಢಳು
ಚತುರ್ಭುಜೆ ಸುಂದರಿ ನಿನಗೆ ನಮನಗಳು
ಶಂಖ ಕಮಲ ಬಿಲ್ಲು ಬಾಣ ಕೈಲಿ ಹಿಡಿದವಳು
ಅನಿಮಾ ಮಹಿಮಾದಿ ಎಂಟು ವಿದ್ಯೆ ತಿಳಿದವಳು
ಜಯತು ಜಯತು ನಿನಗೆ ಹೇ ಜಗನ್ಮಾತೆ
ಅರ್ಧ ನಾರೀಶ್ವರ ಶಿವನ ಬಗಲಲಿ ಸಿದ್ಧಿ ದಾತ್ರಿಯು
ಮಂತ್ರ ಸಹಿತ ಪೂಜೆಲಿ ಸಿದ್ಧಿ ಧಾತ್ರಿ ಆರಾಧನೆಯು
ದೇವಿಯ ಕುರ್ಚಿಲಿ ಕಲಶದ ಬಳಿ ಕೂರಿಸಿ ಅಲಂಕಾರ
ಪಾವನ ನಾನೆನುತ ಸಕಲರು ಹೂವನು ನೀಡುವರು
ಜಯತು ಜಯತು ನಿನಗೆ ಹೇ ಜಗನ್ಮಾತೆ
ಕೆಂಪು ಸೀರೆಲಿ ಮಿರಿ ಮಿರಿ ಮಿಂಚುವ ದೇವಿಯು
ಈಶ ತಪ ಗೈದು ಪಡೆದ ಸಿದ್ಧಿಯ ಹೇಳಿ ಕತೆಯು
ಅರ್ಧ ನಾರೀಶ್ವರ ಶಿವ ಹೇಳುವ ದೇವೀ ಪುರಾಣ
ಎಳನೀರು ಜೇನು ಕುಂಬಳ ನೀಡಿ ದೇವಿ ಅರ್ಚನೆ
ಜಯತು ಜಯತು ನಿನಗೆ ಹೇ ಜಗನ್ಮಾತೆ
ಇಹದಿ ಶಿಸ್ತು ಬದ್ಧ ಆಧ್ಯಾತ್ಮಿಕ ಜೀವನ ನಡೆಸಲು
ಸಹನೆಲಿ ಮಾನವರು ಸಮಯ ಬಾಳಲಿ ಕಳೆಯಲು
ಖುಷಿಲಿರಲು ಭಕ್ತಿ ಭಾವದಿ ಸಾಗಿ ಚಂದ ಕೆಲಸವು
ಆಶೀರ್ವಾದವನೀವ ಜನನಿಗೆ ಬಾಗುತ ನಮನವು
ಜಯತು ಜಯತು ನಿನಗೆ ಹೇ ಜಗನ್ಮಾತೆ
ಕೆಡುಕ ನಿವಾರಿಸೊ ದೇವಿಗೆ ನಮಸ್ಕಾರ
ಬಿಡದೆ ನೆನಪಿಸಿ ಕೆಲಸ ಮಾಡೆ ಚಮತ್ಕಾರ
ಕೊಡು ಅಭಯ ಪೊರೆ ನೀನು ಹೇ ದೇವತೆ
ನಡು ಬಾಗಿಸಿ ದೇವಿಗೆ ನೀಡಿ ಗೌರವ ಜನತೆ
ಜಯತು ಜಯತು ನಿನಗೆ ಹೇ ಜಗನ್ಮಾತೆ
_______________________
🌲ಶಾರದಾ ಮೊಳೆಯಾರ್🌲
_______________________