Перейти к содержимому

ಮಹಾ ಗೌರಿ ಸ್ತೋತ್ರ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ

sharada Moleyar M

0:00 / 0:00

ಮಹಾ ಗೌರಿ ಸ್ತೋತ್ರ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ

23 просмотра · 2 дн. назад
sharada Moleyar M
589 подписчиков
23 просмотра · 2 дн. назад
________________________ 🔥ನವರಾತ್ರಿ🔥18/10/26 🔥ಮಹಾ ಗೌರಿ ಕೌಶಿಕಿ ರೂಪ🔥 🔥ಭಕ್ತಿ ಕವನ🔥ಎಂಟನೆಯ ದಿನ _______________________ ದಕ್ಷ ಯಜ್ಞದಿ ದಾಕ್ಷಾಯಿಣಿಯಾದಳು ಬೆಂಕಿಗೆ ಆಹುತಿ ಅಕ್ಷಿ ಮುಚ್ಚಿ ಶಿವನ ಗಳಿಸಲು ತಪಸು ಮಾಡಿ ಪಾರ್ವತಿ ಘೋರ ತಪಸು ತ್ರಿಲೋಕದಿ ಪ್ರಸಿದ್ಧಿ ಪಡೆದವುಗಳು ಗಡ್ಡೆಗೆಣಸು ಹಣ್ಣು ಎಲೆ ಗಾಳಿ ತಿನುತ ನಿಂತಳವಳು|| ಮಹಿಮೆ ಅನೇಕ ಗಳಿಸುತ ಮಹಾಗೌರಿ ಆದಳವಳು ಶಿವ ಸಂತಸದಿ ಪ್ರತ್ಯಕ್ಷ ಹೇಳಿ ಗಂಗಾ ಸ್ನಾನ ಮಾಡಲು ಸ್ನಾನ ಮಾಡೆ ತನುವೊಂದು ಭಾಗ ಕಪ್ಪಾಗಿ ಕಾಣಲು ಜನರು ಮಹಾಮಾತೆ ಕೌಶಿಕಿ ಎಂದವಳ ಕರೆಯಲು|| ಪ್ರಕಾಶಮಾನವಾದ ಚಂದಿರನಂತೆ ಕಾಣಿಸಿಕೊಳಲು ಇನ್ನೊಂದು ರೂಪವು ಮಹಾಗೌರಿ ಜನ ಕರೆಯಲು ತಾಯಿ ಗೌರಿ ಲೋಕದ ಕಲ್ಯಾಣವನು ಮಾಡುತಲಿ ಕಾಯುತ ಭಕ್ತರ ದುರಿತಗಳಿಂದ ಮುಕ್ತಗೊಳಿಸುತಲಿ|| ನೋಡಲು ಸುಂದರಿಯು ಬಿಳಿಯ ಮೈ ಬಣ್ಣದವಳು ಕಾಡಿ ಶ್ವೇತ ವಸ್ತ್ರ ಬಿಳಿಯ ಆಭರಣದಿ ಮಿಂಚುವವಳು ಗೂಳಿಲಿ ಕುಳಿತು ಪಯಣವು ಚತುರ್ಬಾಹು ಸುಂದರಳು ಬಲಗಡೆ ಮೇಲಿನ ಕೈಲಿ ಅಭಯ ಮುದ್ರೆ ಸಾರುವವಳು|| ಕೆಳಗಡೆ ಕೈಲಿ ತ್ರಿಶೂಲ ಹಿಡಿಯೆ ವೀರತನವ ಹೇಳುವುದು ಎಡಗಡೆ ಮೇಲಿನ ಕೈಯಲಿ ಮಾತೆ ಡಮರುಗ ಪಿಡಿದು ಕೆಳಗಡೆಯ ಕೈಯಲಿ ವರಮುದ್ರೆಯನು ಹಿಡಿದಿಹಳು ನಳಿನ ನಯನೆ ಮಿರ ಮಿರನೆ ಮಿಂಚಿ ಸುಶೋಭಿತಳು|| ದುಷ್ಟರ ತರಿದು ಕರವಾಳವ ಪಿಡಿದು ದೇವತೆಯು ಇಷ್ಟಾರ್ಥ ಸಿದ್ಧಿ ನೀಡಿ ನಸುನಗುತ ನಿಲುವ ಮಾತೆಯು ಸರ್ವಭೂತಗಳಲಿ ನೆಲೆಸಿಹ ದೇವಿಯ ನಮಿಸೋಣ ಅಭಯವ ಕರುಣಸಿ ವರವ ನೀಡೆಂದು ಭಜಿಸೋಣ ದೇವರ ಕೋಣೆಲಿ ದೀಪಾದಿ ಅಲಂಕಾರ ಮಾಡುವುದು ಅವಳ ನೆನಪಲಿ ನವ ದಿನದಿ ಪೂಜೆಯ ಮಾಡುವುದು ಸ್ನಾನವ ಮಾಡಿ ಶುಭ್ರ ವಸ್ತ್ರವ ಹೆಂಗಳೆಯರು ಧರಿಸುತ ಮಹಾಗೌರಿ ಮೂರ್ತಿಯನು ಪೀಠದಲಿ ಕುಳ್ಳಿರಿಸುತ|| ಧೂಪ ದೀಪ ಹೂ ಹಣ್ಣು ಸಿಹಿತಿಂಡಿಯನು ನೀಡುತಲಿ ಅನೇಕ ಸ್ತೋತ್ರವ ಪಠಿಸುತ ದೇವಿಯ ಹೊಗಳುತಲಿ ಆರತಿಯ ಮಾಡಿ ಜಗಜನನಿಗೆ ಜನರು ಭಕುತಿಯಲಿ ಸಾರಸನೇತ್ರೆ ಸಲಹು ಸಲಹೆನುತ ಬಾಗಿ ನಮಿಸುತಲಿ|| ಸಕಲದಲಿ ಕಾರುಣ್ಯ ರೂಪದಿ ಆಕೆಯ ಕಾಣಿರಿ ಸುಖ ಶಾಂತಿ ನೆಮ್ಮದಿ ಪೂಜಿಸೆ ದೊರಕಿ ಐಸಿರಿ ಜಗನ್ಮಾತೆ ಮಂಗಳೆ ಹರಸೆಮ್ಮನು ಹೇ ಸುಂದರಿ ನಗುನಗುತ ಬಾಳಲು ಆಶೀರ್ವದಿಸು ಹೇ ಶಂಕರಿ|| _______________________ 🌲ಶಾರದಾ ಮೊಳೆಯಾರ್🌲 _______________________