Перейти к содержимому

ಪ್ರಾಣೋಪಾಸನೆ : ಆತ್ಮಲಕ್ಷಣ | ಅಂತೇವಾಸ ಸರಣಿ | ಪದ್ಮಶ್ರೀ ಡಾ. ರಾ. ಸತ್ಯನಾರಾಯಣ

Naada Nandana

0:00 / 0:00

ಪ್ರಾಣೋಪಾಸನೆ : ಆತ್ಮಲಕ್ಷಣ | ಅಂತೇವಾಸ ಸರಣಿ | ಪದ್ಮಶ್ರೀ ಡಾ. ರಾ. ಸತ್ಯನಾರಾಯಣ

1 488 просмотров · 5 дней назад
Naada Nandana
1,64 тыс. подписчиков
1 488 просмотров · 5 дней назад
ಮಹಾಮಹೋಪಾಧ್ಯಾಯ, ಪದ್ಮಶ್ರೀ ಪುರಸ್ಕೃತ, ಶ್ರೀವಿದ್ಯೋಪಾಸಕ ಹಾಗೂ 'ಸತ್ಯಾನಂದನಾಥ' ಎಂಬ ದೀಕ್ಷಾನಾಮ ಹೊಂದಿರುವ ಡಾ. ರಾ. ಸತ್ಯನಾರಾಯಣ ಅವರು ತಮ್ಮ ಶಿಷ್ಯವಾತ್ಸಲ್ಯದಿಂದ ನೀಡಿದ ಅನೇಕ ಅಪರೂಪದ ಉಪನ್ಯಾಸಗಳನ್ನು ಹಾಗೂ ಉಪದೇಶಗಳನ್ನು ಈ 'ಅಂತೇವಾಸ' ಎಂಬ ಸರಣಿ ಶೀರ್ಷಿಕೆಯಲ್ಲಿ ನಿಮಗಾಗಿ ಒದಗಿಸಲಿದ್ದೇವೆ. ಈಗ ಪ್ರಸಕ್ತ ವಿಚಾರವು: 'ಪ್ರಾಣೋಪಾಸನೆ' ಮತ್ತು 'ಆತ್ಮಲಕ್ಷಣ'. ಪ್ರಶ್ನೋಪನಿಷತ್ತಿನ ಹಿನ್ನೆಲೆಯಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಪ್ರಪಂಚ, ಪ್ರಜಾಪತಿಯ ಸೃಷ್ಟಿಯ ರಹಸ್ಯ, ರಯಿ-ಪ್ರಾಣಗಳ ವಿವರಣೆ ಹಾಗೂ ನಮ್ಮ ಜಾಗೃತ್, ಸ್ವಪ್ನ, ಸುಷುಪ್ತಿ ಅವಸ್ಥೆಗಳ ಹಿಂದಿರುವ ಬ್ರಹ್ಮವಸ್ತುವಿನ ಅದ್ಭುತ ವಿಶ್ಲೇಷಣೆಯನ್ನು ಇಲ್ಲಿ ಅತ್ಯಂತ ಸರಳವಾಗಿ ವಿವರಿಸಲಾಗಿದೆ. ಇಂತಹ ಆಳವಾದ ತಾತ್ವಿಕ ವಿಚಾರವನ್ನು ಬಹುಶಃ ಬೇರೆಲ್ಲೂ, ಬೇರಾರಿಂದಲೂ ನೀವು ಕೇಳಿರಲಾರಿರಿ. ಹೀಗಾಗಿ ಈ ಜ್ಞಾನಾಮೃತವನ್ನು ಮತ್ತೆ ಮತ್ತೆ ಕೇಳಿ ಆನಂದಿಸಿ; ಸಾಕ್ಷಾತ್ ಗುರುವಿನಿಂದಲೇ ಉಪದೇಶವನ್ನು ಪಡೆದಂತೆ ಧನ್ಯರಾಗಿ. ನಿಮ್ಮ ಇಷ್ಟಮಿತ್ರರು ಹಾಗೂ ಬಂಧುಬಾಂಧವರೊಡನೆ ಈ ಸಂಚಿಕೆ ಹಾಗೂ ಮುಂಬರುವ ಎಲ್ಲ ಸಂಚಿಕೆಗಳನ್ನೂ ತಪ್ಪದೇ ಹಂಚಿಕೊಳ್ಳಿ. ಈ ಸಂದರ್ಭದಲ್ಲಿ ರಾ ಸತ್ಯನಾರಾಯಣರ ಪ್ರಿಯಶಿಷ್ಯರಾದ ಶ್ರೀ ಕೃಷ್ಣ ಗ್ರಾಮಪುರೋಹಿತ ಅವರನ್ನು ಅಭಿನಂದಿಸಬೇಕು. ಗುರುಗಳು ಬೋಧನೆ ಮಾಡಿದ ಅಷ್ಟೂ ಪ್ರಾಣೋಪನಿಷತ್‌ ಧ್ವನಿಮುದ್ರಿಕೆಗಳನ್ನು ತೆಗೆದುಕೊಂಡು ಕೇಳಿ ಜಾಗರೂಕವಾಗಿ ಬೆರಳಚ್ಚು ಮಾಡಿ ಅಚ್ಚುಕಟ್ಟಾಗಿ ಸಂಗ್ರಹಿಸಿದ್ದಾರೆ. ನಾವು ಹೊಸ ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣವೇ ನಿಮಗೆ ಸೂಚನೆ ಬರಲು ದಯವಿಟ್ಟು ನಮ್ಮ ಚಾನೆಲ್‌ಗೆ Subscribe ಒತ್ತಿ, ಬೆಲ್ (Bell) ಐಕಾನ್ ಕ್ಲಿಕ್ ಮಾಡಿ. ಶ್ರೀಗುರುಭ್ಯೋ ನಮಃ