ಆರ್ಯಾಂಬೆಯ ತಾರಮ್ಮಯ್ಯ | ಬಾಲಶಂಕರ ಲಾಲಿ | ಡಾ ರಾ ಸ ನಂದಕುಮಾರ
Naada Nandana
0:00 / 0:00
ಆರ್ಯಾಂಬೆಯ ತಾರಮ್ಮಯ್ಯ | ಬಾಲಶಂಕರ ಲಾಲಿ | ಡಾ ರಾ ಸ ನಂದಕುಮಾರ
1 193 просмотра · 3 дня назад
Naada Nandana
1,65 тыс. подписчиков
1 193 просмотра · 3 дня назад
ಆದಿಶಂಕರರನ್ನು ಮುದ್ದಿನಿಂದ ತಾಯಿ ಆರ್ಯಾಂಬೆಯು ʼಕೃಷ್ಣʼ ಎಂದೂ, ಮುದ್ದು ಮಗುವೆ ಎಂದು ಆಡಿಸಿಯೇ ಇರುತ್ತಾಳಲ್ಲವೇ? ಕೇರಳದ ಕಾಲಟಿಯಲ್ಲಿ ಹುಟ್ಟಿದ ಮಗುವು ಮುಂದೆ ಜಗದ್ಗುರುವಾಗಿ ಭಾರತವರ್ಷದಲ್ಲೆಡೆ ಅಜ್ಞಾನಧ್ವಾಂತಕ್ಕೆ ರವಿಯಾಗಿ, ಅದ್ವೈತ ಸೂರ್ಯನಾಗಿ ಪ್ರಖರವಾಗಿ ಬೆಳಗಿದರು. ಇಂದಿಗೂ ಶಂಕರರ ಸ್ತೋತ್ರಗಳು, ಅವರ ಸಿದ್ಧಾಂತಗಳು, ನಮ್ಮೆಲ್ಲರ ಜಿಹ್ವಾಗ್ರದಲ್ಲಿ ಆಡುತ್ತಿರುವುದನ್ನು ನೋಡಿದರೆ ಸಾಲುವುದಿಲ್ಲವೆ? ಇದಕ್ಕಿಂತಲೂ ಶಂಕರರು ಜಗದ್ಗುರುವೆನ್ನಲು ಬೇರೇನು ಬೇಕು? ಶಂಕರರ ಮನೆ ದೇವರಾದ ಗುರುಪುರ (ಗುರವಾಯೂರು) ಕೃಷ್ಣನನ್ನು ಆರ್ಯಾಂಬೆಯು ತನ್ನ ಮಗುವೆಂದು ಹಾಡಿದರೆ ಲಾಲಿಯು ಹೇಗಿದ್ದಿರಬಹುದೆಂಬ ಸುಂದರ ಕಲ್ಪನೆಯಲ್ಲಿ ವಿದ್ವಾನ್ ಡಾ ರಾ ಸ ನಂದಕುಮಾರರು ಸಾಹಿತ್ಯ ಬರೆದು ಅತ್ಯಂತ ಆಹ್ಲಾದಕರವಾಗಿ ಹಾಡಿದ್ದಾರೆ. ಕೇಳಿ, ನೀವೂ ಕಲಿತು ನಿಮ್ಮ ಮಗುವಿಗೂ ಹೇಳಿಕೊಡಿ !