Govindaswamy Govindaswamy | ಗೋವಿಂದಸ್ವಾಮಿ ಗೋವಿಂದಸ್ವಾಮಿ
Yogish Kulal
0:00 / 0:00
Govindaswamy Govindaswamy | ಗೋವಿಂದಸ್ವಾಮಿ ಗೋವಿಂದಸ್ವಾಮಿ
268 просмотров · 12 дней назад
Yogish Kulal
286 подписчиков
268 просмотров · 12 дней назад
ಶ್ರೀಸದ್ಗುರುನಿತ್ಯಾನಂದಗೋವಿಂದ ಸ್ವಾಮಿ ಮಂದಿರ, ನಿತ್ಯಾನಂದನಗರ, ಬೈಪಾಸ್,ಬಂಟ್ವಾಳ.
ರಚನೆ ಮತ್ತು ರಾಗಸಂಯೋಜನೆ : ಯೋಗೀಶ ಕುಲಾಲ್ ಬಂಟ್ವಾಳ
ಹಾಡಿನ ಸಾಹಿತ್ಯ
*************
ಗೋವಿಂದ ಸ್ವಾಮಿ ಗೋವಿಂದ ಸ್ವಾಮಿ
ಅವಧೂತ ಕೃಪೆ ನಿನಗೆ ಹೇಗಾಯ್ತು ಸ್ವಾಮಿ..
ಹೇಗಾಯ್ತು ಸ್ವಾಮಿ ಏಕಾಯ್ತು ಸ್ವಾಮಿ
ಏನಿದರ ಮರ್ಮ ತಿಳಿಸಯ್ಯಾ ಸ್ವಾಮಿ
ಗೋವಿಂದ ಸ್ವಾಮಿ ಗೋವಿಂದ ಸ್ವಾಮಿ ||ಪ||
ನಿನ್ನ ಭಕ್ತಿಯೋ ನಿನ್ನ ಶೃದ್ಧೆಯೋ
ನಿನ್ನ ಮೌನವೋ ಮೈ ಮರೆವ ಧ್ಯಾನವೋ
ಹೇಗಾಯ್ತು ಸ್ವಾಮಿ ಏಕಾಯ್ತು ಸ್ವಾಮಿ
ನೀ ಹೇಳು ಸ್ವಾಮಿ ||೧||
ನಿನ್ನ ನಡತೆಯೋ ನಿನ್ನ ಘನತೆಯೋ
ನಿನ್ನ ವೈರಾಗ್ಯವೋ ನಿನ್ನಯ ಭಾಗ್ಯವೋ
ಏನಿದರ ಮರ್ಮ ತಿಳಿಸಯ್ಯಾ ಸ್ವಾಮಿ ||೨||
ಯಾವ ಲೋಪವೋ ಕಾಣೆ ನಮ್ಮ ಭಕ್ತಿಯಲ್ಲಿ
ಯಾವ ದೋಷವೋ ಕಾಣೆ ನಮ್ಮ ಸೇವೆಯಲ್ಲಿ
ಗುರುದೇವರ ದಯೆ ಪಡೆಯೋ ಸನ್ಮಾರ್ಗವ ತೋರೋ
ಕತ್ತಲಿನ ಬದುಕಲ್ಲಿ ಬೆಳಕನ್ನು ಬೀರೋ ||೩||