Vandisuve Gajamukhane | ವಂದಿಸುವೆ ಗಜಮುಖನೇ
Yogish Kulal
0:00 / 0:00
Vandisuve Gajamukhane | ವಂದಿಸುವೆ ಗಜಮುಖನೇ
409 просмотров · 2 недели назад
Yogish Kulal
286 подписчиков
409 просмотров · 2 недели назад
ಶ್ರೀಸದ್ಗುರುನಿತ್ಯಾನಂದಗೋವಿಂದ ಸ್ವಾಮಿ ಮಂದಿರ ನಿತ್ಯಾನಂದನಗರ, ಬೈಪಾಸ್,ಬಂಟ್ವಾಳ.
ರಚನೆ ಮತ್ತು ರಾಗ ಸಂಯೋಜನೆ :
ಯೋಗೀಶ ಕುಲಾಲ್ ಬಂಟ್ವಾಳ
ಹಾಡಿನ ಸಾಹಿತ್ಯ:
*************
ವಂದಿಸುವೆ ಗಜಮುಖನೇ
ಏಕದಂತನೇ ಸ್ವಾಮಿ
ಬಂದ ದುರಿತವ ಕಳೆಯೋ
ಮಂಗಳಾಂಗನೇ
ಜನ್ಮ ಜನ್ಮದ ಕರ್ಮ ಬಂಧಗಳ ಬಿಡಿಸಯ್ಯ
ನಮ್ಮ ಮೊರೆಯಾಲಿಸೆಯಾ ಕರಿಮುಖ ಗಣಪಯ್ಯ ||ಪ||
ಅಗ್ರಪೂಜೆಯ ಪಡೆಯೋ
ವಿಘ್ನ ನಿವಾರಕನೇ
ವಿದ್ಯೆ ಬುದ್ಧಿಯ ನೀಡೋ
ಸಿದ್ಧಿ ವಿನಾಯಕನೇ
ಶುದ್ಧ ಮನಸ್ಸಿನ ಪೂಜೆ
ಸ್ವೀಕರಿಸು ಹೇ ಪ್ರಭುವೇ
ಉದ್ಧರಿಸಿ ಅನುಗ್ರಹಿಸು
ಕರಗಳ ಜೋಡಿಸುವೆ ||೧||
ಆನೆ ಮೊಗವನು ಪಡೆದೆ ಮೂಷಿಕವಾಹನನಾದೆ
ಮೇಲುಕೀಳೆಂಬ ಭಾವ
ಸಲ್ಲದೆಂದು ತೋರಿಸಿದೆ
ಏನೇ ಬಂದರು ಬರಲಿ
ಬೇನೆ ಬೇಸರ ತರಲಿ
ಕಾಯೋ ದೇವ ನೀನಿರಲು
ನಮಗ್ಯಾಕೆ ಬರಿ ದಿಗಿಲು ||೨||