ಚಿಂತಾಮಣಿಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಶೇಕಡ 75.61 ರಷ್ಟು ಶಾಂತಿಯುತ ಮತದಾನ...!
A1tvnews chintamani
0:00 / 0:00
ಚಿಂತಾಮಣಿಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಶೇಕಡ 75.61 ರಷ್ಟು ಶಾಂತಿಯುತ ಮತದಾನ...!
4 734 просмотра · 2 нед. назад
A1tvnews chintamani
11,7 тыс. подписчиков
4 734 просмотра · 2 нед. назад
ಚಿಂತಾಮಣಿಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಶೇಕಡ 75.61 ರಷ್ಟು ಶಾಂತಿಯುತ ಮತದಾನ!
ಚಿಂತಾಮಣಿಯಲ್ಲಿ ಮುಕ್ತಾಯಗೊಂಡ ಪದವೀಧರ ಕ್ಷೇತ್ರದ ಮತದಾನ:ಪಕ್ಷೇತರ ಅಭ್ಯರ್ಥಿ ಬರೀದ್ ಪ್ರಭಾವದ ಬಗ್ಗೆ ತೀವ್ರ ಕುತೂಹಲ!
ಚಿಂತಾಮಣಿ:ಕರ್ನಾಟಕ ವಿಧಾನ ಸಭೆಗೆ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಅಕ್ಟೋಬರ್ 23 ರಂದು ಶುಕ್ರವಾರ ಅತ್ಯಂತ ಬಿರುಸಿನಿಂದ ಮತ್ತು ಶಾಂತಿಯುತವಾಗಿ ಶೇಕಡ 75.61 ರಷ್ಟು ನಡೆಯಿತು.ಈ ಸಂಬಂಧ ಚಿಂತಾಮಣಿ ತಾಲೂಕಿನಾದ್ಯಂತ ಮತದಾರರು ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ತಾಲೂಕಿನ ಕೈವಾರ, ಉಪ್ಪರಪೇಟೆ,ಮುರುಗಮಲ್ಲ ಹಾಗೂ ಮುಂಗಾನಹಳ್ಳಿಗಳಲ್ಲಿಯೂ ಸಹ ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 7,654 ಮಂದಿ ಪದವೀಧರ ಮತದಾರರಿದ್ದಾರೆ.ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ,ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳು ಸೇರಿವೆ.
ಚುನಾವಣಾ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಶಿ ಹುಲಿಕುಂಟೆಮಠ್,ಎನ್ಡಿಎ ಅಭ್ಯರ್ಥಿಯಾಗಿ ಕೆ.ಎಂ. ಸುರೇಶ್ ಸೇರಿದಂತೆ ಒಟ್ಟು 9 ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ.ಚಿಂತಾಮಣಿಯ ಅಡ್ವೊಕೇಟ್ ಬರೀದ್ ರವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು,ಇವರಿಗೆ ಕ್ಷೇತ್ರದಲ್ಲಿ ಉತ್ತಮ ಬೆಂಬಲ ಹಾಗೂ ಸ್ನೇಹಿತರು ಮತ್ತು ಅಭಿಮಾನಿಗಳ ಬಲವಿರುವುದರಿಂದ ಇವರ ಮತಗಳು ಯಾರ ಮಡಿಲಿಗೆ ಬೀಳಲಿವೆ ಎಂಬ ಕುತೂಹಲ ಮೂಡಿದೆ.ಕಾಂಗ್ರೆಸ್ ಹಾಗೂ ಎನ್ಡಿಎ ಅಭ್ಯರ್ಥಿಗಳ ನಡುವೆ ನೇರಾ ನೇರ ಹಣಾಹಣಿ ಇದ್ದರೂ ಸಹ,ಬರೀದ್ ರವರು ಪಡೆಯುವ ಮತಗಳು ಅಂತಿಮ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರಲಿವೆ ಎಂದು ಚರ್ಚೆಗಳು ನಡೆಯುತ್ತಿವೆ.
ಕ್ಷೇತ್ರದ ಶಾಸಕರಾದ ಡಾ. ಎಂ.ಸಿ. ಸುಧಾಕರ್,ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ,ಬಿಜೆಪಿ ಮುಖಂಡ ವೇಣುಗೋಪಾಲ್ ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮತದಾನವು ಸಂಪೂರ್ಣ ಶಾಂತಿಯುತವಾಗಿ ಜರುಗಲು ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದ್ದರು.ವಿವಿಧ ಅಭ್ಯರ್ಥಿಗಳ ಪರವಾಗಿ ಅವರ ಬೆಂಬಲಿಗರು ಮತಯಾಚಿಸುತ್ತಿದ್ದ ದೃಶ್ಯಗಳು ಕಂಡುಬಂದವು.ಒಟ್ಟಾರೆಯಾಗಿ ಚಿಂತಾಮಣಿ ತಾಲೂಕಿನಲ್ಲಿ ಯಾವುದೇ ಗದ್ದಲವಿಲ್ಲದೆ, ಬಹಳ ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.